2.5 ಲಕ್ಷ ಸಂಬಳದ ಕೆಲಸ ಬಿಟ್ಟು ವೇಶ್ಯಾವಾಟಿಕೆ ದಂಧೆ; ವಿದೇಶಿ ಮಹಿಳೆ ಜೊತೆ ಸಿಕ್ಕಿಬಿದ್ದ ಮಾಜಿ ಟೆಕ್ಕಿ!
ಬೆಂಗಳೂರು; ಬೆಂಗಳೂರಿನಲ್ಲಿ ಹೈಪ್ರೊಫೈಲ್ ವೇಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದ್ದು, ಪೊಲೀಸರು ವಿದೇಶಿ ಮಹಿಳೆ, ಒಬ್ಬ ಮಾಜಿ ಟೆಕ್ಕಿ ಸೇರಿ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ. ಎಂಜಿನಿಯರ್ ಆಗಿದ್ದ ಗೋವಿಂದರಾಜು ಎಂಬಾತ ಪಿಂಪ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಗೋವಿಂದರಾಜು ಎರಡೂವರೆ ಲಕ್ಷ ರೂಪಾಯಿ ಸಂಬಳ ಬರುವ ಕೆಲಸದಲ್ಲಿದ್ದ. ಆದ್ರೆ ಈತ ಷೇರು ಮಾರ್ಕೆಟ್ ಚಟಕ್ಕೆ ಬಿದ್ದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ. ಹೀಗಾಗಿ ಬರುತ್ತಿದ್ದ ಸಂಬಳ ಸಾಲ ತೀರಿಸೋಕೆ ಸಾಲದಾಗುತ್ತಿತ್ತು. ಹೀಗಾಗಿ ತನ್ನ ಕಮ್ಯುನಿಕೇಷನ್‌ಗಾಗಿ ಒಂದು ಮೊಬೈಲ್ ಆಪ್ ಸೃಷ್ಟಿ ಮಾಡಿಕೊಂಡಿಕೊಂಡಿದ್ದ. ಮೊದಲು ಗೆಳೆಯರ ಸಂವಹನಕ್ಕಾಗಿ ಬಳಸುತ್ತಿದ್ದ ಈ ಅಪ್ಲಿಕೇಷನ್, ನಂತರ ಹಣ ಮಾಡೋದಕ್ಕಾಗಿ ವೇಶ್ಯಾವಾಟಿಕೆ ದಂಧೆಯ ಹಿಂದೆ ಬಿದ್ದಿದ್ದಾನೆ. ತಮಗೆ ಬೇಕಾದವರನ್ನು ಮಾತ್ರ ಆಪ್‌ಗೆ ಸೇರಿಸಿಕೊಳ್ಳುತ್ತಿದ್ದ ಗೋವಿಂದರಾಜು, ಪಿಂಪ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಪುಲಕೇಶಿನಗರದಲ್ಲಿದ್ದ ಟರ್ಕಿ ದೇಶದ ಮಹಿಳೆ ಬಿಯೋನಾಜ್ (39), ಆಕೆಯ ಸಹಚರ ಒಡಿಶಾದ ಜಿತೇಂದ್ರ ಸಾಹು (43), ಪ್ರಮೋದ್ ಕುಮಾರ್ (31), ಮನೋಜ್ ದಾಸ್ (23) ಸೌಮಿತ್ರ ಚಂದ್ (26), ಪ್ರಕಾಶ್ (32), ವೈಶಾಕ್ (22), ಗೋವಿಂದರಾಜು (34) ಮತ್ತು ನಂದಿನಿಲೇಔಟ್ ನಿವಾಸಿ ಅಕ್ಷಯ್ (32) ಈಗ ಪೊಲೀಸರ ವಶದಲ್ಲಿದ್ದಾರೆ.
15 ವರ್ಷದ ಹಿಂದೆ ಸೆಲ್ವ ಎಂಬಾತನನ್ನು ಟರ್ಕಿ ಮಹಿಳೆ ಬಿಯೋನಾಜ್ ಮದುವೆಯಾಗಿದ್ದಳು. ಟೂರಿಸ್ಟ್ ವೀಸಾ ಪಡೆದು ಆಕೆ ಭಾರತಕ್ಕೆ ಬಂದಿದ್ದಳು. ನಂತರ ಸೆಲ್ವನನ್ನು ಮದುವೆಯಾಗಿ ಇಲ್ಲಿಯೇ ಉಳಿದುಕೊಂಡಿದ್ದಳು. ಗಂಡನಿಗೆ ಟಿಬಿ ಕಾಯಿಲೆ ಇದ್ದಿದ್ದರಿಂದ ಬಿಯೋನಾಜ್ ವೇಶ್ಯಾವಾಟಿಕೆ ದಂಧೆಗೆ ಇಳಿದಿದ್ದಳು ಎಂದು ತಿಳಿದುಬಂದಿದೆ.