ಕೊವಿಡ್ ಲಸಿಕೆ ಪಡೆದ ವ್ಯಕ್ತಿಗೆ ಲಕ್ವ ವಾಸಿ..!
ಜಾರ್ಖಂಡ್: ನಾಲ್ಕು ವರ್ಷದ ಹಿಂದೆ ಲಕ್ವ ಹೊಡೆದು ಹಾಸಿಗೆ ಹಿಡಿದಿದ್ದ ಜಾರ್ಖಂಡ್‌ನ ವ್ಯಕ್ತಿಯೊಬ್ಬರು ದಿಢೀರನೆ ಎದ್ದು ಕುಳಿತಿದ್ದಾರೆ. ಅಲ್ಪಸ್ವಲ್ಪ ನಡೆಯುವುದಕ್ಕೂ ಸಾಧ್ಯವಾಗುತ್ತಿದೆ. ಇದಕ್ಕೆ ಕಾರಣ ಕೊರೊನಾ ಲಸಿಕೆ ಎಂದು ಹೇಳಲಾಗುತ್ತಿದೆ.
ಹೌದು, ದುಲರ್‌ಚಂದ್‌ನ ಸಾಲ್ಗಡಿ ಗ್ರಾಮದ ವ್ಯಕ್ತಿಯೊಬ್ಬರಿಗೆ ನಾಲ್ಕು ವರ್ಷದ ಹಿಂದೆ ಪಾರ್ಶ್ವವಾಯು ಆಗಿತ್ತು. ಅಂದಿನಿಂದ ಹಾಸಿಗೆ ಹಿಡಿದಿದ್ದರು. ಆದರೆ ಅವರಿಗೆ ಇತ್ತೀಚೆಗೆ ಕೋವಿಶೀಲ್ಡ್ ಕೊರೊನಾ ಲಸಿಕೆ ಹಾಕಿಸಲಾಗಿತ್ತು. ಲಸಿಕೆ ಹಾಕಿದ ಸ್ವಲ್ಪ ಸಮಯದ ನಂತರ ಪಾರ್ಶ್ವವಾಯು ಪೀಡಿತ ವ್ಯಕ್ತಿ ಸ್ವತಂತ್ರವಾಗಿ ಎದ್ದು ಕೂತಿದ್ದಾನೆ. ಸಾಲದೆಂಬಂತೆ ನಡೆಯಲು ಕೂಡಾ ಪ್ರಯತ್ನ ಪಡುತ್ತಿದ್ದಾನೆ.
ಇತ್ತೀಚೆಗೆ ಇದೇ ರೀತಿ ವ್ಯಕ್ತಿಯೊಬ್ಬರಿಗೆ ಕೊರೊನಾ ಲಸಿಕೆ ಪಡೆದ ನಂತರ ಮಾತು ಬಂದಿತ್ತೆಂದು ವರದಿಯಾಗಿತ್ತು.

