Lifestyle

ಇಂತಹ ವ್ಯಕ್ತಿಗಳು ನಮ್ಮ ಲೈಫ್‌ನಲ್ಲಿ ಎಂಟ್ರಿ ಆದರೆ ಸರ್ವನಾಶ ಗ್ಯಾರೆಂಟಿ!

ಬೆಂಗಳೂರು; ನಮ್ಮ ಸುತ್ತಮುತ್ತ ನಮ್ಮನ್ನು ಪ್ರೀತಿಸುವವರು ಹಾಗೂ ದ್ವೇಷಿಸುವವರು ಇಬ್ಬರೂ ಇರುತ್ತಾರೆ.. ಜೊತೆಗೆ ನಮ್ಮ ಜೊತೆ ಚೆನ್ನಾಗಿಯೇ ಇದ್ದು, ಬೆನ್ನಿಗೆ ಚೂರಿ ಹಾಕುವವರೂ ಇರುತ್ತಾರೆ.. ಹೀಗಾಗಿ ಕೆಲವು ಮನಸ್ಥಿತಿಗಳಿರುವ ವ್ಯಕ್ತಿಗಳ ನಮ್ಮ ಜೊತೆ ಇದ್ದರೆ ನನ್ನ ಜೀವನ ಎಂದಿಗೂ ಸಂತೋಷದಿಂದ ಇರುವುದಿಲ್ಲ.. ಒತ್ತಡದ ಜೀವನವೇ ನಮ್ಮದಾಗುತ್ತದೆ.. ಅಂತಹ ಜನರನ್ನು ಗುರುತಿಸಿ ಆದಷ್ಟು ಅವರನ್ನು ದೂರ ಇಡುವುದೇ ಒಳ್ಳೆಯದು..

ಇದನ್ನೂ ಓದಿ; 45 ವರ್ಷಕ್ಕೇ ನಿವೃತ್ತಿ ಹೊಂದಿ ಸುಖವಾಗಿ ಬಾಳೋದಕ್ಕೆ ಇಲ್ಲಿದೆ ಸೂತ್ರ!

ಕೆಲವರು ಇರುತ್ತಾರೆ.. ಅವರು ಬೇರೆಯವರ ಕಷ್ಟವನ್ನು ನೋಡಿ ಎಂಜಾಯ್‌ ಮಾಡುತ್ತಿರುತ್ತಾರೆ.. ಇಂತಹ ಜನರು ನಿಮ್ಮ ಬಳಿ ಬರುತ್ತಾರೆ.. ನಿಮ್ಮ ರಹಸ್ಯಗಳನ್ನು ತಿಳಿಯುತ್ತಾರೆ.. ನಿಮ್ಮ ಸಂಕಷ್ಟಗಳ ಬಗ್ಗೆ ಅರಿಯುತ್ತಾರೆ.. ಅನಂತರ ಅಗತ್ಯದ ಸಂದರ್ಭದಲ್ಲಿ ನಿಮಗೆ ಅವರು ತೊಂದರೆ ಕೊಡಲು ಶುರು ಮಾಡುತ್ತಾರೆ.. ನೇರವಾಗಿ ಹೇಳಬೇಕು ಅಂದ್ರೆ ಅವರು ನಿಮ್ಮ ಬೆನ್ನಿಗೆ ಚೂರಿ ಹಾಕುವವರು.. ಅಂತಹವರು ಎಂದಿಗೂ ನಿಮ್ಮ ಜೊತೆಗೆ ಇಟ್ಟುಕೊಳ್ಳಬಾರದು..
ನಮ್ಮ ಜೀವನದಲ್ಲಿ ನಾವು ಯಾವಾಗಲೂ ಪಾಸಿಟಿವ್‌ ಆಗಿರಬೇಕು ಎಂದು ಬಯಸುತ್ತಿರುತ್ತೇವೆ.. ಆದ್ರೆ ಕೆಲವರು ನಮ್ಮ ಜೊತೆ ಇರುವವರು ಯಾವಾಗಲೂ ನೆಗೆಟಿವ್‌ ಮಾತಾಡುತ್ತಾರೆ.. ನಾವು ಪಾಸಿಟಿವ್‌ ಆಗಿ ಮಾತನಾಡಿದರೂ ಅದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ.. ಇಂತಹವರ ಜೊತೆ ಜಾಸ್ತಿ ಇದ್ದರೆ ನಮಗೂ ನಕಾರಾತ್ಮಕತೆ ಬರುತ್ತದೆ.. ಕೆಲವರು ನಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ಅವರು ಅದರಿಂದ ಖುಷಿಪಡುತ್ತಾರೆ.. ನಮ್ಮನ್ನು ನಮಗೆ ತಿಳಿಯದಂತೆಯೇ ನಿಯಂತ್ರಿಸುತ್ತಾ ಹೋಗುತ್ತಾರೆ..

ಇದನ್ನೂ ಓದಿ; 633 ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾವು..!

ನಮ್ಮ ಜೀವನದಲ್ಲಿ ಕೆಲವರು ನಮ್ಮ ಒಳಿತನ್ನು ಬಯಸುತ್ತಾರೆ. ಇತರರು ಸ್ವಾರ್ಥದಿಂದ ವರ್ತಿಸುತ್ತಾರೆ. ಅಂತಹ ಜನರು ನಿಮ್ಮ ಅಗತ್ಯತೆಗಳಲ್ಲಿ ನಿಮ್ಮೊಂದಿಗೆ ಇರುವುದಿಲ್ಲ. ಅವರು ತಮ್ಮ ಕೆಲಸ ಮತ್ತು ಅವರ ಕೆಲಸದ ಬಗ್ಗೆ ನಿಮ್ಮನ್ನು ಎಷ್ಟು ಕಾಲ ಬಳಸುತ್ತಾರೆ. ಇಂಥವರು ನಮ್ಮ ಜೀವನದಲ್ಲಿ ಇರಬಾರದು.

Share Post