Health

ಬರೀ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿದರೆ ಏನಾಗುತ್ತೆ ಗೊತ್ತಾ..?

ಬೆಂಗಳೂರು; ಬೆಳಗ್ಗೆ ಎದ್ದ ತಕ್ಷಣ ಬರೀ ಹೊಟ್ಟೆಯಲ್ಲಿ ನೀರು ಕುಡಿಯಬೇಕೆಂದು ಎಲ್ಲರೂ ಹೇಳುತ್ತಾರೆ.. ಬೆಳಗ್ಗೆ ಎದ್ದಾಗ ಹೆಚ್ಚು ನೀರು ಕುಡಿಯುವುದರಿಂದ ಆನೇಕ ಆರೋಗ್ಯ ಪ್ರಯೋಜನಗಳಿವೆ.. ಅದರಲ್ಲೂ ಉಗುರು ಬೆಚ್ಚಗಿನ ನೀರನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ಅಷ್ಟಿಷ್ಟಲ್ಲ.. ಆಯುರ್ವೇದದ ಪ್ರಕಾರ, ಬೆಳಗ್ಗೆ ಉಗುರು ಬೆಚ್ಚಗಿನ ನೀರು ಸೇವಿಸಿದರೆ ಏನೆಲ್ಲಾ ಪ್ರಯೋಜನ ನೋಡೋಣ ಬನ್ನಿ…

ಇದನ್ನೂ ಓದಿ; ಬಿಗ್‌ ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಅರೆಸ್ಟ್

ಜೀರ್ಣಕಾರಿ ಸಮಸ್ಯೆಗಳ ನಿವಾರಣೆ;

ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಸೇವಿಸಿದರೆ ನಮ್ಮ ದೇಹದಲ್ಲಿನ ವಿಷದ ಅಂಶಗನ್ನು ಹೊರಹೋಗುವಂತೆ ಮಾಡುತ್ತದೆ.. ಇದರ ಜೊತೆಗೆ, ನಮ್ಮ ದೇಹಕ್ಕೆ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಗ್ಗೆ ಬೆಚ್ಚಗಿನ ನೀರು ಸೇವನೆ ಮಾಡಿದ ನಂತರ ನಾವು ತಿಂದ ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ. ಇದರೊಂದಿಗೆ ಮಲಬದ್ಧತೆ, ಕೆಮ್ಮು, ಅಸಿಡಿಟಿ, ನೆಗಡಿ ಮುಂತಾದ ಸಮಸ್ಯೆಗಳು ನಮ್ಮಿಂದ ದೂರವಾಗುತ್ತವೆ. ಆದ್ದರಿಂದ, ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯದು. ಇದು ಕರುಳನ್ನು ಸ್ವಚ್ಛವಾಗಿಸುತ್ತದೆ. ಜೊತೆಗೆ ನಮ್ಮನ್ನು ಆರೋಗ್ಯಕರವಾಗಿರಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.

ಇದನ್ನೂ ಓದಿ; ಗನ್‌ ಹಿಡಿದುಬಂದ ಆಗಂತುಕನಿಗೆ ಬುದ್ಧಿ ಕಲಿಸಿದ ತಾಯಿ, ಮಗಳು!

ಮಲಬದ್ಧತೆ ನಿವಾರಿಸುತ್ತದೆ;

ಈಗಾಗಲೇ ನಾವು ಹೇಳಿದಂತೆ, ಬೆಚ್ಚಗಿನ ನೀರನ್ನು ಮುಂಜಾನೆಯೇ ಎದ್ದ ತಕ್ಷಣ ಕುಡಿಯುವುದರಿಂದ ದೇಹದಲ್ಲಿನ ವಿಷದ ಮಲಿನಗಳನ್ನು ನಿವಾರಿಸುತ್ತದೆ.  ವಾಯು, ಹೊಟ್ಟೆ ನೋವು ಮತ್ತು ಅಸ್ವಸ್ಥತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಮಲಬದ್ಧತೆಯನ್ನು ನಿವಾರಿಸುತ್ತದೆ.

ಇದನ್ನೂ ಓದಿ; ಒಟ್ಟು 24 ಕ್ಷೇತ್ರಗಳಿಗೆ ಕಾಂಗ್ರೆಸ್‌ ಟಿಕೆಟ್‌; 12 ಕಡೆ ಮಕ್ಕಳು, ಸಂಬಂಧಿಕರಿಗೇ ಮಣೆ!

ತೂಕ ಇಳಿಕೆ ಮಾಡಲು  ಕೂಡಾ ಸಹಾಯಕಾರಿ;

ಮುಂಜಾನೆಯೇ ಎದ್ದು ಬೆಚ್ಚಗಿನ ನೀರು ಕುಡಿದರೆ ನಮ್ಮ ದೇಹದ ತೂಕ ಕಡಿಮೆಯಾಗುವುದಕ್ಕೂ ಸಹಕಾರಿಯಾಗುತ್ತದೆ. ಇದು ನಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಚಯಾಪಚಯ ಪ್ರಕ್ರಿಯೆಯು ಸಹ ಚೆನ್ನಾಗಿ ಆಗುತ್ತದೆ. ದೇಹದಲ್ಲಿನ ಕ್ಯಾಲೋರಿಗಳು ಸುಡುವುದಕ್ಕೆ ಬೆಚ್ಚಗಿನ ನೀರು ಸಹಕರಿಸುತ್ತದೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದಕ್ಕೂ ಬೆಳಗ್ಗೆ ಬೆಚ್ಚಗಿನ ನೀರು ಕುಡಿಯುವುದಕ್ಕೆ ಸಹಕಾರಿಯಾಗುತ್ತದೆ.

ಇದನ್ನೂ ಓದಿ; Breaking; ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅರೆಸ್ಟ್

ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿರುತ್ತದೆ;

ಇನ್ನು ಬೆಚ್ಚಗಿನ ನೀರು ನಮ್ಮ ಹೊಟ್ಟೆಯ ಸ್ನಾಯುಗಳನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಹೊಟ್ಟೆ ಸೆಳೆತದಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರವೂ ಹೆಚ್ಚುತ್ತದೆ.

ಚರ್ಮದ ಆರೋಗ್ಯ ವೃದ್ಧಿಸುತ್ತದೆ;

ಬೆಚ್ಚಗಿನ ನೀರು ನಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದು ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ ಮತ್ತು ನಮ್ಮ ಚರ್ಮವನ್ನು ರಕ್ಷಿಸುತ್ತದೆ.
ಜೀವಾಣುಗಳ ಕೊರತೆಯಿಂದಾಗಿ ವಯಸ್ಸಾದ ಲಕ್ಷಣಗಳು ಕಂಡುಬರುತ್ತವೆ. ಆದರೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಆದ್ದರಿಂದ, ಬೆಳಿಗ್ಗೆ ಬೇಗನೆ ಬೆಚ್ಚಗಿನ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಇದನ್ನೂ ಓದಿ; ಅಂಗನವಾಡಿ ಮೊಟ್ಟೆ ಕದ್ದರು; ಇಲ್ಲಿ ಸಮಾಧಿಗಳನ್ನೇ ಧ್ವಂಸ ಮಾಡಿದರು!

Share Post