ರಾಜ್ಯದಲ್ಲಿ 107 ಹೊಸ ಓಮಿಕ್ರಾನ್ ಪ್ರಕರಣಗಳು ದೃಢ : ಸುಧಾಕರ್
ಬೆಂಗಳೂರು : ರಾಜ್ಯದಲ್ಲಿ ಗುರುವಾರ 107 ಹೊಸ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಓಮಿಕ್ರಾನ್ ಸಂಖ್ಯೆ 333 ಕ್ಕೆ ಏರಿದೆ. ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಪತ್ರಕರ್ತರೊಬ್ಬರು ನಿನ್ನೆ 107 ಓಮಿಕ್ರಾನ್ ಕೇಸ್ ದೃಢಪಟ್ಟಿದೆಯಂತೆ ಎಂದು ಕೇಳಿದಾಗ, “ನನಗೆ ಇದರ ಬಗ್ಗೆ ಮಾಹಿತಿ ಇಲ್ಲ ತಿಳಿದುಕೊಂಡ ನಂತರ ನಾನು ಪ್ರತಿಕ್ರಿಯೆ ನೀಡ್ತೇನೆ” ಎಂದು ಹೇಳಿ ಹೊರಟಿದ್ದರು.
ಈಗ ಸುಧಾಕರ್ ಅವರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಮೂರನೇ ಅಲೆ ಶುರು ಆಗಿದೆ. ಓಮಿಕ್ರಾನ್ ಕೂಡ ನಿಯಂತ್ರಣ ತಪ್ಪುತ್ತಿದೆಯಾ ಎಂಬ ಭೀತಿ ಎದುರಾಗಿದೆ.
ರಾಜ್ಯಕ್ಕೆ ಮತ್ತು ಬೆಂಗಳೂರಿಗೆ ಪ್ರತ್ಯೀಕ ಮಾರ್ಗಸೂಚಿಯನ್ನು ಪ್ರಕಟಿಸಿರುವ ಸರ್ಕಾರ ಮುಂದಿನ ದಿನಗಳಲ್ಲಿ ಲಾಕ್‌ಡೌನ್ ಮೊರೆ ಹೋದರೂ ಅಚ್ಚರಿಪಡುವಂತಿಲ್ಲ ಎಂದು ಸಾರ್ವಜನಿಕರು ಮಾತನಾಡಿ ಕೊಳ್ಳುತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಸುಧಾಕರ್, ಯಾವುದೇ ಕಾರಣಕ್ಕೂ ಸಂಪೂರ್ಣ ಲಾಕ್‌ಡೌನ್ ಮಾಡಲ್ಲ, ಅದು ಸರ್ಕಾರದ ಹಳೇ ನೀತಿ ಎಂದು ಹೇಳಿದರು.
107 new Omicron cases have been confirmed in Karnataka on Jan 6th taking the overall tally to 333.@BSBommai@mansukhmandviya#COVID19 #Omicron #OmicronInIndia #Karnataka #Bangalore
— Dr Sudhakar K (@mla_sudhakar) January 7, 2022