ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ; ಬೆಂಗಳೂರಲ್ಲಿ ಶಾಲೆ ಬಂದ್
ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಕೊವಿಡ್ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ. ನೈಟ್ ಕರ್ಫ್ಯೂ ಇನ್ನೂ ಎರಡು ವಾರ ಮುಂದುವರೆಯಲಿದ್ದು, ವೀಕೆಂಡ್ ಕರ್ಫ್ಯೂವನ್ನು ಕೂಡಾ ಜಾರಿ ಮಾಡಲಾಗಿದೆ. ಬೆಂಗಳೂರಿಗೆ ಹಾಗೂ ರಾಜ್ಯಕ್ಕೆ ಪ್ರತ್ಯೇಕವಾಗಿ ಗೈಡ್‌ಲೈನ್ಸ್‌ನ್ನು ಸರ್ಕಾರ ಜಾರಿ ಮಾಡಿದೆ. ನಾಳೆ ರಾತ್ರಿ ೧೦ ಗಂಟೆಯಿಂದಲೇ ಹೊಸ ರೂಲ್ಸ್ ಜಾರಿ ಮಾಡಲಾಗಿದೆ.
ಈ ಬಗ್ಗೆ ಸಚಿವರಾದ ಆರ್.ಅಶೋಕ್ ಹಾಗೂ ಡಾ.ಕೆ.ಸುಧಾಕರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸಿಎಂ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು
೧. ಬೆಂಗಳೂರಲ್ಲಿ ಹತ್ತು ಮತ್ತು ಹನ್ನೆರಡನೇ ತರಗತಿ ಹೊರತುಪಡಿಸಿ ಉಳಿದೆಲ್ಲಾ ತರಗತಿಗಳ ಬೌತಿಕ ತರಗತಿಗಳು ಇರುವುದಿಲ್ಲ. ಎರಡು ವಾರಗಳ ಕಾಲ ಆನ್‌ಲೈನ್ ಕ್ಲಾಸ್‌ಗೆ ಸೂಚನೆ
೨. ಶ್ರುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ
೩. ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ
೪. ಸರ್ಕಾರಿ ಕಚೇರಿಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ
೫. ಚಿತ್ರಮಂದಿರ, ಮಾಲ್, ಪಬ್, ಬಾರ್ ಸೇರಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಶೇ. ೫೦ ಜನಕ್ಕೆ ಅವಕಾಶ
೬. ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವವರು ಎರಡೂ ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ
೬. ಒಳಾಂಗಣದಲ್ಲಿ ಮದುವೆ ನಡೆದರೆ ೧೦೦ ಮಂದಿಗೆ ಹಾಗೂ ಹೊರಾಂಗಣದಲ್ಲಿ ಮದುವೆ ನಡೆದರೆ ೨೦೦ ಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ
೭. ಬಸ್, ಮೆಟ್ರೋಗಳಲ್ಲಿ ಎಷ್ಟು ಜನ ಓಡಾಡಬೇಕು ಎಂಬುದರ ಬಗ್ಗೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಆರ್‌ಟಿಸಿ ಮಾರ್ಗಸೂಚಿ ಪ್ರಕಟಿಸುತ್ತವೆ
೮. ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರಗಳಲ್ಲಿ ಕೊವಿಡ್ ಸೆಂಟರ್‌ಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ಅಂಬುಲೆನ್ಸ್
೯. ನಾಳೆಯಿಂದ ಯಾರೂ ಪ್ರತಿಭಟನೆ ಮಾಡುವಂತಿಲ್ಲ. ಪ್ರತಿಭಟನೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತಿಲ್ಲ