ತುರ್ತು ಸಂದರ್ಭದಲ್ಲಿ ಕೋವಿಡ್ ಲಸಿಕೆ ಬಳಕೆಗೆ DCGI ಅನುಮತಿ
ದೆಹಲಿ: ಅಪ್ರಾಪ್ತ ಮಕ್ಕಳಿಗೆ (12 ರಿಂದ 18)ವಯಸ್ಸಿನಲ್ಲಿರುವವರಿಗೆ ತುರ್ತು ಅವಶ್ಯಕತೆ ಇದ್ದಲ್ಲಿ ಕೋವಿಡ್ ಲಸಿಕೆ ನೀಡಬಹುದೆಂದು ಭಾರತೀಯ ಪ್ರಧಾನ ಔಷಧ ನಿಯಂತ್ರಕ ಅನುಮತಿ ನೀಡಿದೆ. ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆಯೊಂದು ಟ್ವೀಟ್ ಮಾಡಿ ಭಾರತೀಯ ಬಯೋಟೆಕ್ ಸಂಸ್ಥೆಗೆ ಅನುಮತಿ ದೊರಕಿರುವುದಾಗಿ ತಿಳಿಸಿದೆ.
ಇದರ ಜೊತೆಗೆ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿಯವರು ಮುಂದಿನ ವರ್ಷದಿಂದ ಜನವರಿ 3ರಿಂದ 15-18ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ.