ಮುಕೇಶ್ ಅಂಬಾನಿಗೆ ಮೈಸೂರು ಮಸಾಲೆ ದೋಸೆ ಅಂದ್ರೆ ಪ್ರಾಣ!
ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಇತ್ತೀಚೆಗೆ ತನ್ನ ಮಗನ ಪ್ರೀ ವೆಡ್ಡಿಂಗ್ ಇವೆಂಟ್ ಅದ್ದೂರಿಯಾಗಿ ನಡೆಸಿದ್ದು ಗೊತ್ತೇ ಇದೆ. ಅದಕ್ಕಾಗಿ ನೂರಾರು ಕೋಟಿ ರೂಪಾಯಿ ಖರ್ಚೆ ಮಾಡಿದ್ದಾರೆ.. ದೇಶದ ನಾನಾ ಬಗೆಯ ಖಾದ್ಯಗಳನ್ನು ಈ ಈವೆಂಟ್‌ನಲ್ಲಿ ಮಾಡಲಾಗಿತ್ತು. ಅಂದಹಾಗೆ ಮುಕೇಶ್ ಅಂಬಾನಿ ವ್ಯಾಪಾರ ವ್ಯವಹಾರಗಳು ಎಷ್ಟೇ ಇದ್ದರೂ, ಅವರು ಪತ್ನಿ ಮಕ್ಕಳ ಜೊತೆ ಸುತ್ತಾಡಲು ಹೋಗುತ್ತಾರೆ. ಪತ್ನಿ ಜೊತೆ ಸಿನಿಮಾ ನೋಡುತ್ತಾರೆ. ಅಷ್ಟೇ ಅಲ್ಲ, ಅವರಿಗೆ ಚಿಕ್ಕ ವಯಸ್ಸಿನಿಂದಲೂ ಮುಂಬೈನಲ್ಲಿ ಒಂದು ಹೋಟೆಲ್ ಇದೆ. ಆ ಹೋಟೆಲ್‌ನ ದೋಸೆ ತಿನ್ನೋದಕ್ಕೆ ಈಗಲೂ ಹೋಗುತ್ತಾರೆ.
ಮೈಸೂರು ಮಸಾಲೆ ದೋಸೆ ಅಂದ್ರೆ ಅಂಬಾನಿಗೆ ಇಷ್ಟ;
ಮೈಸೂರು ಮಸಾಲೆ ದೋಸೆ ಅಂದ್ರೆ ಅಂಬಾನಿಗೆ ಇಷ್ಟ; ಸಂದರ್ಶನವೊಂದರಲ್ಲಿ ಮುಕೇಶ್ ಅಂಬಾನಿ ಹೇಳಿಕೊಂಡಿದ್ದಾರೆ. ನಾನು ವಾರಕ್ಕೊಮ್ಮೆಯಾದರೂ ಆ ರೆಸ್ಟೋರೆಂಟ್‌ಗೆ ಹೋಗಿ ದೋಸೆ ತಿನ್ನುತ್ತೇನೆ ಎಂದು. ಒಂದು ವೇಳೆ ಅಲ್ಲಿಗೆ ಹೋಗಲು ಆಗದಿದ್ದರೆ ಮನೆಗೇ ದೋಸೆ ತರಿಸಿಕೊಳ್ಳುತ್ತೇನ ಎಂದು ಮುಕೇಶ್ ಅಂಬಾನಿ ಹೇಳಿಕೊಂಡಿದ್ದಾರೆ.
ಮುಂಬೈನಲ್ಲಿರುವ ಆ ರೆಸ್ಟೋರೆಂಟ್ ಹೆಸರು ‘ಕೆಫೆ ಮೈಸೂರು’. ಮುಕೇಶ್ ಅಂಬಾನಿಯವರು ಕಾಲೇಜಿನಲ್ಲಿ ಓದುವಾಗ ಕೆಫೆ ಮೈಸೂರಿಗೆ ಯಾವಾಗಲೂ ಹೋಗುತ್ತಿದ್ದರಂತೆ. ಈಗ ಅಲ್ಲಿಗೆ ಹೋಗಲು ಸಾಧ್ಯವಾಗದಿದ್ದರೂ ಮನೆಗೆ ದೋಸೆ ತರಿಸಿಕೊಂಡು ತಿನ್ನುತ್ತಾರೆ. ಅಷ್ಟೇ ಅಲ್ಲ, ಸಾಧ್ಯವಾದರೆ ಆಗಾಗ ಅಲ್ಲಿಗೆ ಹೋಗುತ್ತಾರಂತೆ. ಮುಕೇಶ್ ಅಂಬಾನಿಯವರ ಮೆಚ್ಚಿನ ಆಹಾರ ಇಡ್ಲಿ, ದೋಸೆ. ಅವರು ದಕ್ಷಿಣ ಭಾರತದ ಆಹಾರಗಳನ್ನು ಇಷ್ಟಪಡುತ್ತಾರೆ.
ಕೆಫೆ ಮೈಸೂರು ಮುಂಬೈನ ಅತ್ಯಂತ ಹಳೆಯ ರೆಸ್ಟೋರೆಂಟ್;
ಕೆಫೆ ಮೈಸೂರು ಮುಂಬೈನ ಅತ್ಯಂತ ಹಳೆಯ ರೆಸ್ಟೋರೆಂಟ್; ಕೆಫೆ ಮೈಸೂರು ಮುಂಬೈನಲ್ಲಿರುವ ದಕ್ಷಿಣ ಭಾರತದ ಅತ್ಯಂತ ಹಳೆಯ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದೆ. ಈ ರೆಸ್ಟೋರೆಂಟ್ ಅನ್ನು 1936 ರಲ್ಲಿ ಸ್ಥಾಪನೆ ಮಾಡಲಾಯಿತು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಸ್ತೆಯಲ್ಲಿರುವ ಈ ರೆಸ್ಟೋರೆಂಟ್ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ. ಪ್ರತಿ ಬುಧವಾರ ಈ ರೆಸ್ಟೋರೆಂಟ್‌ಗೆ ರಜೆ ಇರುತ್ತದೆ. ದೋಸೆ ಮತ್ತು ಇಡ್ಲಿಯ ಹೊರತಾಗಿ, ಈ ರೆಸ್ಟೋರೆಂಟ್ ನಲ್ಲಿ ಸ್ಯಾಂಡ್‌ವಿಚ್‌ಗಳು, ಬೀದಿ ಆಹಾರ, ಸಿಹಿತಿಂಡಿಗಳು ಕೂಡಾ ಸಿಗುತ್ತವೆ. ಈ ರೆಸ್ಟೋರೆಂಟ್‌ನಲ್ಲಿ ಕನಿಷ್ಠ 81 ಬಗೆಯ ದೋಸೆಗಳು ಲಭ್ಯವಿವೆ. ಈ ರೆಸ್ಟೋರೆಂಟ್‌ನಿಂದ ನೀವು ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಬಹುದು. ಉಪ್ಮಾ, ಪೂರಿ, ಸಿಹಿತಿಂಡಿಗಳು, ಲಸ್ಸಿ, ಮಿಲ್ಕ್ ಶೇಕ್ ಇತ್ಯಾದಿ ಎಲ್ಲವನ್ನೂ ಆರ್ಡರ್ ಮಾಡಬಹುದು.
ದೇಶದ ಶ್ರೀಮಂತನಿಗೆ ಮೈಸೂರು ಮಸಾಲೆ ದೋಸೆ ಇಷ್ಟ;
ದೇಶದ ಶ್ರೀಮಂತನಿಗೆ ಮೈಸೂರು ಮಸಾಲೆ ದೋಸೆ ಇಷ್ಟ; ಮುಕೇಶ್ ಅಂಬಾನಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮಾತ್ರವಲ್ಲ, ವಿಶ್ವದ ಶ್ರೀಮಂತರ ಮೊದಲ ಹತ್ತು ಪಟ್ಟಿಯಲ್ಲೂ ಅವರ ಹೆಸರು ಇದೆ. ಇಂತಹ ವ್ಯಕ್ತಿಗೆ ಮೈಸೂರು ಮಸಾಲೆ ದೋಸೆ ಅಂದ್ರೆ ಇಷ್ಟ. ಅವರ ಮನೆಯಲ್ಲಿ ಈಗ ಸಂತಸದ ವಾತಾವರಣವಿದೆ. ಅಂಬಾನಿ ಕಿರಿಯ ಪುತ್ರ ಅನಂತ್ ವಿವಾಹವಾಗಲಿದ್ದಾರೆ. ಇತ್ತೀಚೆಗೆ ಗುಜರಾತ್ ನ ಜಾಮ್ ನಗರದಲ್ಲಿ ವಿವಾಹ ಪೂರ್ವ ಸಮಾರಂಭ ನಡೆದಿದ್ದು ಗೊತ್ತೇ ಇದೆ. ಅಂಬಾನಿ ಪುತ್ರನ ಮದುವೆ ಸಮಾರಂಭಕ್ಕೆ ಅಮೆರಿಕದ ಪಾಪ್ ಗಾಯಕಿ ರಿಹಾನ್ನಾ ಬಂದಿದ್ದರು. ಬಾಲಿವುಡ್ ತಾರೆಯರು ಮತ್ತು ವಿಶ್ವದ ದೊಡ್ಡ ಉದ್ಯಮಿಗಳು ಎಲ್ಲರೂ ಅಲ್ಲಿದ್ದಾರೆ. ಮತ್ತು ಮುಕೇಶ್ ಅಂಬಾನಿ ತಮ್ಮ ಮಗನ ಮದುವೆಯ ಮೂಲಕ ದಾಖಲೆ ನಿರ್ಮಿಸಲಿದ್ದಾರೆ. ಅನಂತ್ ಅಂಬಾನಿ-ರಾಧಿಕ್ ಮರ್ಚೆಂಟ್ ಮದುವೆ ಭಾರತದ ಅತ್ಯಂತ ದುಬಾರಿ ವಿವಾಹವಾಗಲಿದೆ.