ಒಮಿಕ್ರಾನ್ ಭೀತಿ; ಬೂಸ್ಟರ್ ಡೋಸ್‌ಗೆ ತಜ್ಞರ ಶಿಫಾರಸು
ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರವಾಗಿರುವ ಕೊರೋನಾ ತಳಿ ಒಮಿಕ್ರಾನ್‌ನಿಂದ ಇದುವರೆಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಜೊತೆಗೆ ಇದರಿಂದ ತೊಂದರೆ ಇದೆ ಎಂಬುದೂ ದೃಢಪಟ್ಟಿಲ್ಲ. ಹೀಗಿದ್ದರೂ ಪ್ರಪಂಚದಾದ್ಯಂತ ಒಮಿಕ್ರಾನ್ ಬಗ್ಗೆ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವಂತೆ ಅಮೆರಿಕದ ರೋಗ ನಿಯಂತ್ರಣ, ತಡೆ ಕೇಂದ್ರ ಶಿಫಾರಸು ಮಾಡಿದೆ.
ಅಮೆರಿಕದಲ್ಲಿ ಫೈಜರ್ ಮತ್ತು ಮಡೆರ್ನಾ ಲಸಿಕೆಗಳನ್ನು ನೀಡಲಾಗಿದೆ. ಈ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ 6 ತಿಂಗಳ ನಂತರ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಪಡೆದು ಎರಡು ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯುವಂತೆ ತಜ್ಞರು ಸೂಚನೆ ನೀಡಿದ್ದಾರೆ. ೧೮ ವರ್ಷ ಮೀರಿದ ಎಲ್ಲಾ ವಯಸ್ಕರು ಬೂಸ್ಟರ್ ಡೋಸ್ ಪಡೆಯುವುದಕ್ಕೆ ಅರ್ಹರಿದ್ದಾರೆ. ಹೀಗಾಗಿ ಸರ್ಕಾರ ಬೂಸ್ಟರ್ ಡೋಸ್ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ತಜ್ಞರು ಹೇಳಿದ್ದಾರೆ.