ಅಸಹಾಯಕರಿಬ್ಬರು ಸೇರಿ ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ; ಶೆಟ್ಟರ್
ಹುಬ್ಬಳ್ಳಿ; ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ಇದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಅವರು ಹುಬ್ಬಳ್ಳಿಯಲ್ಲಿ ಲೇವಡಿ ಮಾಡಿದ್ದಾರೆ.
ಹಿಂದೆಯೂ ಕೂಡಾ ಇವರಿಬ್ಬರೂ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದಿದ್ದರು. ಅನಂತರ ಅದು ಬ್ರೇಕ್ ಆಗಿತ್ತು. ಇನ್ನು ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ಫೈಟ್ ಮಾಡಿದ್ದವು. ಈಗ ಅವರೇ ಮೈತ್ರಿಯ ಮಾತನ್ನಾಡುತ್ತಿದ್ದಾರೆ. ಅನುಕೂಲವಾಗುವಾಗ ಮೈತ್ರಿ ಮಾಡಿಕೊಳ್ಳುವುದು, ಅನಾನುಕೂಲವಾದಾಗ ಬೇರೆಯಾಗುವುದು ಮಾಡಿದರೆ ಜನರ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಶೆಟ್ಟರ್ ಹೇಳಿದರು.