HealthNational

ಅಣ್ಣನ ನಿವೃತ್ತಿಯ ಸಂಭ್ರಮ; ಕುಣಿಯುತ್ತಿದ್ದ ಸಹೋದರನಿಗೆ ಹೃದಯಾಘಾತ!

ಜೈಪುರ; ಸಾವು ಯಾವಾಗ ಹೇಗೆ ಸಂಭವಿಸುತ್ತದೋ ಗೊತ್ತಾಗೋದಿಲ್ಲ.. ಸಾವು ಅನಿರೀಕ್ಷಿತ ಅನ್ನೋದು ಇದಕ್ಕೇನೇ.. ಇತ್ತೀಚಿನ ದಿನಗಳಲ್ಲಿ ಜನರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ.. ಇದೀಗ ಶಿಕ್ಷಕನೊಬ್ಬನ ನಿವೃತ್ತಿಯ ದಿನ ಖುಷಿಯಿಂದ ಡ್ಯಾನ್ಸ್‌ ಮಾಡುತ್ತಾ ಕುಸಿದುಬಿದ್ದು ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕ ಸಾವನ್ನಪ್ಪಿದ್ದಾನೆ.. ರಾಜಸ್ಥಾನದ ಜೈಪುರ ಜಿಲ್ಲೆ ಕಿಶ್‌ನಗರ-ರೆನ್ವಾಲ್ ಪ್ರದೇಶದ ಈ ಘಟನೆ ನಡೆದಿದೆ.. ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸಿದ್ದರಾಮಯ್ಯ ಅಭಿಮಾನಿ!

ಕಿಶ್‌ನಗರ-ರೆನ್ವಾಲ್ ಪ್ರದೇಶದ ಸರ್ಕಾರಿ ಶಿಕ್ಷಕ ಮಂಗಲ್ ಜಖರ್ ಎಂಬುವವರೇ ನಿವೃತ್ತರಾದರು.. ಇವರು ಇತ್ತೀಚೆಗೆ ಕೆಲಸದಿಂದ ನಿವೃತ್ತಿ ಹೊಂದಿದ್ದರು.. ಇದರ ಖುಷಿಗೆ ಅವರ ಕುಟುಂಬದವರು ಸ್ಥಳೀಯ ದೇವಸ್ಥಾನವೊಂದರಲ್ಲಿ ಸಮಾರಂಭ ಆಯೋಜನೆ ಮಾಡಿದ್ದರು.. ಇದರಲ್ಲಿ ಪಾಲ್ಗೊಂಡಿದ್ದ ಶಿಕ್ಷಕ ಹಾಗೂ ಮಂಗಲ್‌ ಜಖರ್‌ ಅವರ ಸಹೋದರ ಮನ್ನಾರಾಮ್‌ ಜಾಖರ್‌ ಕೂಡಾ ಪಾಲ್ಗೊಂಡಿದ್ದರು.. ಮನ್ನಾರಾಮ್‌ ಜಾಖರ್‌ ಸಮಾರಂಭದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದರು… ಈ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾರೆ.. ಕೂಡಲೇ ಅವರಿಗೆ ಸಿಪಿಆರ್‌ ಮಾಡಿ, ಆಸ್ಪತ್ರೆಗೆ ಕರೆದೊಯ್ಯಲಾಯಿತು.. ಆದ್ರೆ ಏನೂ ಪ್ರಯೋಜನವಾಗಲಿಲ್ಲ..

ಇದನ್ನೂ ಓದಿ; ಬಸ್‌ ನಿಲ್ದಾಣದಲ್ಲಿ ಕಣ್ಣು ಹೊಡೆದ ಕಾಮುಕ; ಚಾಮುಂಡಿಯಾಗಿ ಅಟ್ಟಾಡಿಸಿದ ಮಹಿಳೆ!

ಮನ್ನಾರಾಮ್‌ ಅವರು ಜೋಧಪುರದ ಜೂಡ್‌ ಗ್ರಾಮದಲ್ಲಿ ಸರ್ಕಾರಿ ಶಿಕ್ಷಕರಾಗಿದ್ದರು ಎಂದು ತಿಳಿದುಬಂದಿದೆ.. ಅವರು ಕೂಡಾ ನಿವೃತ್ತಿಯ ಅಂಚಿನಲ್ಲಿದ್ದರು ಎಂದು ಹೇಳಲಾಗಿದೆ..

Share Post