ಬಸ್ ನಿಲ್ದಾಣದಲ್ಲಿ ಕಣ್ಣು ಹೊಡೆದ ಕಾಮುಕ; ಚಾಮುಂಡಿಯಾಗಿ ಅಟ್ಟಾಡಿಸಿದ ಮಹಿಳೆ!
ವಿಜಯಪುರ; ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಬೀದಿ ಕಾಮಣ್ಣನೊಬ್ಬ ಕಣ್ಣು ಹೊಡೆದಿದ್ದಾನೆ.. ಇದರಿಂದ ಚಂಡಿ ಚಾಮುಂಡಿಯಾದ ಮಹಿಳೆ ಆ ಕಾಮುಕನನ್ನು ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆ.. ವಿಜಯಪುರದ ಕೇಂದ್ರ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯಗಳು ಮೊಬೈಲ್‌ಗಳಲ್ಲಿ ಸೆರೆಯಾಗಿವೆ..
ಇದನ್ನೂ ಓದಿ; ಕುಡಿದುಬಂದು ತಾಯಿಯ ಮೇಲೇ ಅತ್ಯಾಚಾರ ಮಾಡಿದ ಪಾಪಿ ಮಗ!
ಮಹಿಳೆಯೊಬ್ಬರು ಬಸ್‌ಗಾಗಿ ನಿಂತದ್ದಾಗ ಬೀದಿ ಕಾಮಣ್ಣನೊಬ್ಬ ಕಣ್ಣು ಹೊಡೆದು ಸನ್ನೆ ಮಾಡಿದ್ದಾನೆ.. ಕೋಪ ಬಂದರೂ ಮೊದಲಿಗೆ ಆಕೆ ಸುಮ್ಮನಿದ್ದಾಳೆ.. ಆದ್ರೆ ಅನಂತರವೂ ಆತ ಅಸಭ್ಯವಾಗಿ ವರ್ತಿಸೋದಕ್ಕೆ ಶುರು ಮಾಡಿದ್ದಾನೆ.. ಇದ್ರಿಂದ ಮಹಿಳೆ ಸಿಟ್ಟು ನೆತ್ತಿಗೇರಿದೆ.. ಚಪ್ಪಲಿ ಕೈಲಿಡಿದು ಅಟ್ಟಾಡಿಸಿದ್ದಾಳೆ.. ಹಿಗ್ಗಾಮುಗ್ಗಾ ಬಾರಿಸಿದ್ದಾಳೆ..
ಇದನ್ನೂ ಓದಿ; ನಿಮ್ಮ ಸಂಪಾದನೆ 25 ಸಾವಿರಕ್ಕಿಂತ ಕಡಿಮೆ ಇದ್ದರೂ ಕೋಟ್ಯಧಿಪತಿಗಳಾಗಬಹುದು..!
ಮಹಿಳೆ ರೊಚ್ಚಿಗೇಳುತ್ತಿದ್ದಂತೆ ಇತರ ಪ್ರಯಾಣಿಕರು ಕೂಡಾ ಮಹಿಳೆಯ ನೆರವಿಗೆ ಬಂದಿದ್ದಾರೆ.. ಆರೋಪಿಯನ್ನು ಹಿಡಿದು ಚೆನ್ನಾಗಿ ತದಕಿದ್ದಾರೆ.. ನಂತರ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.. ಈ ಬಗ್ಗೆ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..