CrimeNational

ಗೋಡಂಬಿ ತುಂಬಿದ್ದ ಟ್ರಕ್ ಪಲ್ಟಿ; 7 ಮಂದಿ ದುರ್ಮರಣ!

ಅಮರಾವತಿ; ಗೋಡಂಬಿ ಸಾಗಿಸುತ್ತಿದ್ದ ಟ್ರಕ್ ಪಲ್ಟಿ ಆಗಿ 7 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ದೇವರಪಲ್ಲಿ ಬಳಿಯ ಚಿಲಕ ಪಾಕಲಾ ಎಂಬಲ್ಲಿ ಈ ದುರಂತ ನಡೆದಿದೆ..

  ಗೋಡಂಬಿ ಮೂಟೆಗಳನ್ನು ಹೊತ್ತು ಹೋಗುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ.. ಈ ವೇಳೆ ಗೋಡಂಬಿ ಮೂಟೆಗಳ ಕೆಳಗೆ ಸಿಲುಕಿ ಉಸಿರುಗಟ್ಟಿದೆ. ಇದರಿಂದ 7 ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ.

 ಗೋಣಿಚೀಲದ ಅಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಕೊವ್ವೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

 

Share Post