ಮಗಳ ಮದುವೆಗೆ ಕೂಡಿಟ್ಟ ಹಣದೊಂದಿಗೆ ಪ್ರಿಯಕರ ಜೊತೆ ತಾಯಿ ಎಸ್ಕೇಪ್!
ಬಿಹಾರ; ಅಪ್ಪ ಮಗಳ ಮದುವೆಗೆಂದು ಹಣ ಕೂಡಿಟ್ಟಿದ್ದ.. ಅದು ಸಾಲೋದಿಲ್ಲ ಅಂತ ದುಡಿಯೋದಕ್ಕಾಗಿ ಮುಂಬೈಗೆ ಹೋಗಿದ್ದ.. ಇದೇ ಸಮಯ ಎಂದುಕೊಂಡ ಆತನ ಹೆಂಡತಿ ಮಗಳ ಮದುವೆಗೆಂದು ಕೂಡಿಟ್ಟಿದ್ದ ಹಣವನ್ನು ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.. ಇದರಿಂದಾಗಿ ಕುಟುಂಬ ದಿಕ್ಕುತೋಚದಂತಾಗಿದೆ.. ಮುಂದೆ ನಿಂತು ಮಗಳ ಮದುವೆ ಮಾಡಬೇಕಾಗಿದ್ದ ತಾಯಿ ಬೇರೊಬ್ಬನ ಜೊತೆ ಓಡಿಹೋಗಿದ್ದು, ತಂದೆ ಮಗಳ ಮದುವೆಯಾಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದಾನೆ..
ಇದನ್ನೂ ಓದಿ; ಬಸ್ ನಿಲ್ದಾಣದಲ್ಲಿ ಕಣ್ಣು ಹೊಡೆದ ಕಾಮುಕ; ಚಾಮುಂಡಿಯಾಗಿ ಅಟ್ಟಾಡಿಸಿದ ಮಹಿಳೆ!
ಬಿಹಾರದ ಮುಜಾಫರ್‌ಪುರದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. ಓಡಿಹೋಗಿರುವ ಮಹಿಳೆ 18 ವರ್ಷಗಳ ಹಿಂದೆ ಪ್ರೀತಿಸಿಯೇ ಮದುವೆಯಾಗಿದ್ದಳು.. ಗಂಡ ಕೂಡಾ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ.. ಇವರಿಗೆ ಒಂದು ಹೆಣ್ಣು ಹಾಗೂ ಗಂಡು ಮಕ್ಕಳಿದ್ದಾರೆ.. ಹೀಗಿದ್ದರೂ ಕೂಡಾ ಸಾಮಾಜಿಕ ಜಾಲತಾಣದ ಮೂಲಕ ಮತ್ತೊಬ್ಬನ ಪರಿಚಯ ಮಾಡಿಕೊಂಡು ಆಕೆ ಆತನೊಂದಿಗೆ ಎಸ್ಕೇಪ್ ಆಗಿದ್ದಾಳೆ..
ಇದನ್ನೂ ಓದಿ; ಕುಡಿದುಬಂದು ತಾಯಿಯ ಮೇಲೇ ಅತ್ಯಾಚಾರ ಮಾಡಿದ ಪಾಪಿ ಮಗ!
ಇದರಿಂದಾಗಿ ಗಂಡ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಓಡಿಹೋಗಿದ್ದ ಇಬ್ಬರನ್ನೂ ಕರೆತಂದಿದ್ದಾರೆ.. ಆದ್ರೆ ಮಹಿಳೆ ಗಂಡನ ಜೊತೆ ಹೋಗೋದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಮೂರು ವರ್ಷದಿಂದ ಗಂಡ ನನಗೆ ಹಿಂಸೆ ಕೊಡುತ್ತಿದ್ದ ಎಂದು ಆರೋಪಿಸಿದ್ದಾಳೆ..