ದೇಶದ ಏಳು ಶ್ರೀಮಂತ ರಾಜ್ಯಗಳು ಯಾವುವು..?; ಕರ್ನಾಟಕಕ್ಕೆ ಎಷ್ಟೇ ಸ್ಥಾನ..?
ಭಾರತ ದೇಶದ ಎಲ್ಲಾ ರೀತಿಯಿಂದಲೂ ತುಂಬಾ ವೈವಿಧ್ಯತೆಯ ದೇಶ.. ಒಂದೊಂದು ರಾಜ್ಯವೂ ಒಂದೊಂದು ಕಾರಣಕ್ಕೆ ವಿಶೇಷತೆ ಹೊಂದಿದೆ.. ಒಂದೊಂದು ರಾಜ್ಯದಲ್ಲೂ ಒಂದೊಂದು ರೀತಿಯ ವ್ಯಾಪಾರ ವಹಿವಾಟುಗಳು ನಡೆಯುತ್ತವೆ.. ಪ್ರತಿ ರಾಜ್ಯಕ್ಕೂ ತನ್ನದೇ ಆದ ಆದಾಯದ ಮೂಲವಿದೆ.. ದೇಶದ ಹಲವು ರಾಜ್ಯಗಳಲ್ಲಿ ಅತ್ಯಂತ ಶ್ರೀಮಂತರು ವಾಸಿಸುತ್ತಾರೆ.. ಬಡವರೇ ಹೆಚ್ಚಿರುವ ರಾಜ್ಯಗಳೂ ಇವೆ.. ಹಾಗಾದ್ರೆ ನಮ್ಮ ದೇಶದಲ್ಲಿ ಯಾವುದೇ ಅತ್ಯಂತ ಶ್ರೀಮಂತ ರಾಜ್ಯ..? ಟಾಪ್ ಸೆವೆಲ್ ಶ್ರೀಮಂತ ರಾಜ್ಯಗಳು ಯಾವುವು..? ದೇಶದಕ್ಕೆ ಅವುಗಳ ಕೊಡುಗೆ ಏನು..? ನೋಡೋಣ ಬನ್ನಿ..
ಇದನ್ನೂ ಓದಿ; ಶ್ರೀರಾಮನ ಬಿಲ್ಲು, ಬಾಣದಂತಿರುವ ಗಾಜಿನ ಸೇತುವೆ; ಉದ್ಘಾಟನೆಗೆ ರೆಡಿ
ದೇಶದ ಏಳು ಶ್ರೀಮಂತ ರಾಜ್ಯಗಳ ಪಟ್ಟಿ;
ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ;
ದೇಶದಲ್ಲಿ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಮೊದಲ ಸ್ಥಾನ ಮಹಾರಾಷ್ಟ್ರಕ್ಕೆ ಸಲ್ಲುತ್ತದೆ.. ಈ ರಾಜ್ಯದ ಜಿಡಿಪಿ 38.79 ಲಕ್ಷ ಕೋಟಿ ರೂಪಾಯಿ. ಇದರ ರಾಜಧಾನಿ ಮುಂಬೈಯನ್ನು ದೇಶದ ಆರ್ಥಿಕ ರಾಜಧಾನಿ ಎಂದೂ ಕರೆಯಲಾಗುತ್ತದೆ.
ತಮಿಳುನಾಡಿಗೆ ಎರಡನೇ ಸ್ಥಾನ;
ತಮಿಳುನಾಡು ರಾಜ್ಯ ಭಾರತದ ಎರಡನೇ ಶ್ರೀಮಂತ ರಾಜ್ಯ.. ತಮಿಳುನಾಡಿನ ಜಿಡಿಪಿ 28.03 ಲಕ್ಷ ಕೋಟಿ ರೂಪಾಯಿ. ಇಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಜನಸಂಖ್ಯೆ ನಗರಗಳಲ್ಲಿ ವಾಸಿಸುತ್ತಿದೆ.
ಗುಜರಾತ್ ಗೆ ಮೂರನೇ ಸ್ಥಾನ;
ಗುಜರಾತ್‌ನ ಜಿಡಿಪಿ 26.62 ಲಕ್ಷ ಕೋಟಿ ರೂಪಾಯಿ. ಇದು ತಂಬಾಕು, ಹತ್ತಿ ಬಟ್ಟೆ, ಬಾದಾಮಿ ಉತ್ಪಾದನೆಯಲ್ಲಿ ಹೆಸರು ಮಾಡಿದೆ. ದೇಶದಲ್ಲಿ ತಯಾರಾಗುವ ಒಟ್ಟು ಔಷಧಿಗಳಲ್ಲಿ ಮೂರನೇ ಒಂದು ಭಾಗ ಇಲ್ಲಿಯೇ ತಯಾರಾಗೋದು.
ಇದನ್ನೂ ಓದಿ; IPLನಲ್ಲಿ ಸಿಕ್ಸರ್‌ಗಳ ದರ್ಬಾರ್; ಇವರೇ ನೋಡಿ ರನ್ ಮಾಂತ್ರಿಕರು..!
ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ;
ಭಾರತದ ಅತಿ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೂ ಸ್ಥಾನವಿದೆ.. ಇದನ್ನು ಸಿಲಿಕಾನ್ ಸಿಟಿ ಎಂದೇ ಕರೆಯುತ್ತಾರೆ.. 25 ಲಕ್ಷ ಕೋಟಿ ಜಿಡಿಪಿಯೊಂದಿಗೆ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.
ಉತ್ತರ ಪ್ರದೇಶಕ್ಕೆ ಐದನೇ ಸ್ಥಾನ;
ಉತ್ತರ ಪ್ರದೇಶದ ಜಿಡಿಪಿ 24.39 ಲಕ್ಷ ಕೋಟಿ ರೂಪಾಯಿ. ನೋಯ್ಡಾ ಮತ್ತು ಗಾಜಿಯಾಬಾದ್‌ನಂತಹ ಅನೇಕ ನಗರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಅನೇಕ ಕಂಪನಿಗಳು ಇಲ್ಲಿ ತಮ್ಮ ಶಾಖೆಗಳನ್ನು ತೆರೆದಿವೆ. ಹೀಗಾಗಿ ಇತ್ತೀಚೆಗೆ ಉತ್ತರ ಪ್ರದೇಶ ವೇಗವಾಗಿ ಬೆಳೆಯುತ್ತಿದೆ.
ಇದನ್ನೂ ಓದಿ; ಹಿಂದೆಂದಿಗಿಂತಲೂ ಹೆಚ್ಚಾಯ್ತಾ ಮೋದಿ ವರ್ಚಸ್ಸು..?; ರಾಜ್ಯದಲ್ಲೀಗ ಮೋದಿ ಮೇನಿಯಾ..!
ಪಶ್ಚಿಮ ಬಂಗಾಳ;
ಪಶ್ಚಿಮ ಬಂಗಾಳದ ಜಿಡಿಪಿ 17.19 ಲಕ್ಷ ಕೋಟಿ ರೂಪಾಯಿ. ಇದರ ಆರ್ಥಿಕತೆ ಮುಖ್ಯವಾಗಿ ಕೃಷಿ. ಮಧ್ಯಮ ಕೈಗಾರಿಕೆಗಳ ಮೇಲೆ ಈ ರಾಜ್ಯ ಹೆಚ್ಚು ಅವಲಂಬಿತವಾಗಿದೆ.
ಏಳನೇ ಸ್ಥಾನದಲ್ಲಿ ರಾಜಸ್ಥಾನ;
ಈ ರಾಜ್ಯದ ಆರ್ಥಿಕತೆಯು ಕೃಷಿ, ಗಣಿಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಚಿನ್ನ, ಬೆಳ್ಳಿ, ಮರಳುಗಲ್ಲು, ಅಮೃತಶಿಲೆ, ರಾಕ್ ಫಾಸ್ಫೇಟ್, ಸುಣ್ಣದ ಕಲ್ಲು, ತಾಮ್ರ ಮತ್ತು ಲಿಗ್ನೈಟ್ ನಿಕ್ಷೇಪಗಳಿವೆ. ಇದರ ಜಿಡಿಪಿ 15.7 ಕೋಟಿ ರೂಪಾಯಿ.
ಇದನ್ನೂ ಓದಿ; ಎಂ.ಎಸ್.ಧೋನಿ ಮಾಜಿ ಬ್ಯುಸಿನೆಸ್ ಪಾರ್ಟನರ್ ಅರೆಸ್ಟ್!