Politics

ಹಿಂದೆಂದಿಗಿಂತಲೂ ಹೆಚ್ಚಾಯ್ತಾ ಮೋದಿ ವರ್ಚಸ್ಸು..?; ರಾಜ್ಯದಲ್ಲೀಗ ಮೋದಿ ಮೇನಿಯಾ..!

ಬೆಂಗಳೂರು; ಲೋಕಸಭಾ ಚುನಾವಣೆಯ ಅಬ್ಬರ ದೇಶಾದ್ಯಂತ ಹೆಚ್ಚಾಗುತ್ತಿದೆ..  ಕರ್ನಾಟಕದಲ್ಲೂ ಚುನಾವಣಾ ಕಾವು ಜೋರಾಗಿದೆ.. ಬಿಜೆಪಿ-ಜೆಡಿಎಸ್‌ ಒಂದಾಗಿ ಚುನಾವಣೆ ಎದುರಿಸುತ್ತಿದ್ದರೆ, ಕಾಂಗ್ರೆಸ್‌ ಪಕ್ಷ ಗ್ಯಾರೆಂಟಿಗಳು ಕೈಹಿಡಿಯುತ್ತವೆ ಎಂಬ ವಿಶ್ವಾಸದಲ್ಲಿ ಏಕಾಂಗಿಯಾಗಿ ಅಖಾಡದಲ್ಲಿದೆ.. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್‌ ನಾಯಕರು ಅದರಲ್ಲೂ ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಪ್ರಧಾನಿ ನರೇಂದ್ರ ಮೋದಿ ಜಪ ಮಾಡುತ್ತಿದ್ದಾರೆ.. ಇನ್ನು ಜನ ಸಾಮಾನ್ಯರು ಕೂಡಾ ಈ ಬಾರಿ ಅತಿ ಹೆಚ್ಚಾಗಿ ಮೋದಿ ನಾಮ ಸ್ಮರಣೆ ಮಾಡುತ್ತಿದ್ದಾರೆ.. ಕಾಂಗ್ರೆಸ್‌ ಜನಪ್ರಿಯರ ಗ್ಯಾರೆಂಟಿಗಳ ನಡುವೆಯೂ ಮೋದಿ ಹೆಸರು ಕೇಳಿಬರುತ್ತಿರುವುದೇಕೆ..?, ಮೋದಿ ವರ್ಚಸ್ಸು ರಾಜ್ಯದಲ್ಲಿ ಬಿಜೆಪಿಗೆ ಬಹುದೊಡ್ಡ ಗೆಲುವು ತಂದುಕೊಡುತ್ತಾ..?

ಇದನ್ನೂ ಓದಿ; ಎಂ.ಎಸ್‌.ಧೋನಿ ಮಾಜಿ ಬ್ಯುಸಿನೆಸ್‌ ಪಾರ್ಟನರ್‌ ಅರೆಸ್ಟ್‌!

ಹಿಂದೆಂದಿಗಿಂತಲೂ ಮೋದಿ ವರ್ಚಸ್ಸು ಹೆಚ್ಚಾಯ್ತಾ..?;

ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಭಾರಿ ಸಮಾವೇಶ ನಡೆಸಿ ಹೋಗಿದ್ದಾರೆ.. ಮತ್ತೆ ಏಪ್ರಿಲ್‌ 14 ರಂದು ಮೈಸೂರು ಹಾಗೂ ಮಂಗಳೂರಿಗೆ ಬರುತ್ತಿದ್ದಾರೆ.. ಹಾಗೆ ನೋಡಿದರೆ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲೂ ಹಲವಾರು ಬಾರಿ ರಾಜ್ಯದಲ್ಲಿ ಮೋದಿ ರೋಡ್‌ ಶೋ, ಸಮಾವೇಶಗಳನ್ನು ನಡೆಸಿದ್ದರು.. ಆದ್ರೆ ಆಗ ಕಾಂಗ್ರೆಸ್‌ ಗ್ಯಾರೆಂಟಿ ಭರವಸೆಗಳು ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪದ ಮುಂದೆ ಮೋದಿ ಆಟ ನಡೆದಿರಲಿಲ್ಲ.. ಆದ್ರೆ ವಿಧಾನಸಭಾ ಚುನಾವಣೆ ಬೇರೆ, ಲೋಕಸಭಾ ಚುನಾವಣೆ ಬೇರೆ.. ಈಗ ನಡೆಯುತ್ತಿರೋದು ಲೋಕಸಭಾ ಚುನಾವಣೆ.. ಈ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ರಾಜ್ಯದಲ್ಲಿ ಮೋದಿ ವರ್ಚಸ್ಸು ಹೆಚ್ಚಾದಂತೆ ಕಾಣುತ್ತಿದೆ.. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಂತ ಬಂದಾಗ ಯಡಿಯೂರಪ್ಪ ಹೆಸರು ಕೇಳಿಬರುತ್ತಿತ್ತು.. ಆದ್ರೆ ಈಗ ಎಲ್ಲೆಲ್ಲೂ ಮೋದಿ ಹೆಸರೇ ಕೇಳಿಬರುತ್ತಿದೆ.. ಮೋದಿಗಾಗಿ ನಾವು ಈ ಬಾರಿ ಪ್ರಚಾರ ಮಾಡುತ್ತಿದ್ದೇವೆ.. ಬಿಜೆಪಿ 370 ಕ್ಷೇತ್ರಗಳನ್ನು ಗೆಲ್ಲಿಸಿಕೋಡೋದಕ್ಕಾಗಿ ನಮ್ಮ ರಾಜ್ಯದಿಂದಲೂ ಬೃಹತ್‌ ಕೊಡುಗೆ ನೀಡಲಿದ್ದೇವೆ ಎಂದು ಹೇಳುತ್ತಿದ್ದಾರೆ..

ಇದನ್ನೂ ಓದಿ; ಹೃದಯಾಘಾತ ಆಗುತ್ತೇನೋ ಎಂಬ ಭಯ ಕಾಡುತ್ತಿದೆಯೇ..?; ಹಾಗಾದ್ರೆ ಅದು ಇದೇ..!

ಜೆಡಿಎಸ್‌ ಮೋದಿ ಜಪ.. ಬಿಜೆಪಿಗೆ ಮತ್ತಷ್ಟು ಲಾಭ;

ಮೊದಲಿನಿಂದಲೂ ದೇವೇಗೌಡ ಹಾಗೂ ಅವರ ಬೆಂಬಲಿಗರು ಜಾತ್ಯತೀತ ಜಪ ಮಾಡಿಕೊಂಡು ಬಂದವರು.. ಜೊತೆಗೆ ಈ ಹಿಂದೆ ನಡೆದ ಚುನಾವಣೆಗಳೆಲ್ಲವೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಹೆಸರನಲ್ಲೇ ನಡೆದಿದ್ದವು.. ಆದ್ರೆ ಈ ಬಾರಿ ಜೆಡಿಎಸ್‌ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ.. ಇದರಿಂದ ಜೆಡಿಎಸ್‌ಗೆ ಸಿಕ್ಕಿರೋದು ಮೂರೇ ಕ್ಷೇತ್ರ.. ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.. ಇಲ್ಲಿ ಕೂಡಾ ಈ ಬಾರಿ ದೇವೇಗೌಡರು, ಕುಮಾರಸ್ವಾಮಿ ಹೆಸರಲ್ಲಿ ಚುನಾವಣೆ ನಡೆಯುತ್ತಿಲ್ಲ.. ಮೋದಿ ಹೆಸರಿನಲ್ಲೇ ಚುನಾವಣೆ ಎದುರಿಸಲಾಗುತ್ತಿದೆ.. ಸ್ವತಃ ಕುಮಾರಸ್ವಾಮಿಯವರು ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದಾರೆ.. ಅಲ್ಲೂ ಕೂಡಾ ಅವರು ಮೋದಿ ಜಪ ಮಾಡುತ್ತಿದ್ದಾರೆ.. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳುತ್ತಿದ್ದಾರೆ.. ದೇವೇಗೌಡರು ಕೂಡಾ ಮೋದಿಯಂತಹ ನಾಯಕರು ಇನ್ನೊಬ್ಬರಿಲ್ಲ ಎಂದು ಹೇಳಿದ್ದಾರೆ..

ಇದನ್ನೂ ಓದಿ; ಕಾಲ್‌ ಗರ್ಲ್‌ ಬೇಕಿದ್ದರೆ ಸಂಪರ್ಕಿಸಿ; ಪತ್ನಿ ಫೋಟೋ ಪೋಸ್ಟ್‌ ಮಾಡಿದ ಪತಿ!

28ಕ್ಕೆ 28 ಸೀಟು ಗೆಲ್ಲುತ್ತಾ ಮೈತ್ರಿ ಪಕ್ಷ..?;

ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಒಟ್ಟು 25 ಕ್ಷೇತ್ರಗಳಲ್ಲಿ ಗೆದ್ದಿತ್ತು.. ಇನ್ನು ಮಂಡ್ಯದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡಲಾಗಿತ್ತು.. ಜೆಡಿಎಸ್‌ ಹಾಸನದಲ್ಲಿ ಹಾಗೂ ಕಾಂಗ್ರೆಸ್‌ ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಗೆದ್ದಿತ್ತು.. ಆದ್ರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.. ಜೊತೆಗೆ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿದೆ.. ಕೋಟ್ಯಂತರ ಜನಕ್ಕೆ ನೇರವಾಗಿ ಈ ಯೀಜನೆಗಳು ತಲುಪುತ್ತಿವೆ.. ಹೀಗಾಗಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.. ಇದರ ನಡುವೆ ಬಿಜೆಪಿ ನಾಯಕರು ಈ ಬಾರಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು.. ಬಿಜೆಪಿಗೆ 370ಕ್ಕೂ ಹೆಚ್ಚಿನ ಸ್ಥಾನ ಬರಬೇಕು ಎಂದು ಛಲ ಹೊಂದಿದ್ದಾರೆ.. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರದಲ್ಲೂ ಗೆಲ್ಲಬೇಕೆಂಬ ಪಣ ತೊಟ್ಟಿದ್ದಾರೆ.. ಮೋದಿ ಮೇನಿಯಾ ಏನೋ ಹಿಂದೆಂದಿಗಿಂತ ಜಾಸ್ತಿ ಇದೆ.. ಆದ್ರೆ ಮೋದಿ ಹೆಸರೊಂದರಿಂದಲೇ 28 ಕ್ಕೆ 28 ಸೀಟು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಗೆಲ್ಲೋಕೆ ಸಾಧ್ಯವೇ ಎಂಬ ಪ್ರಶ್ನೆ ಇದೆ..

ಇದನ್ನೂ ಓದಿ; ಡಾ.ಸಿ.ಎನ್‌.ಮಂಜುನಾಥ್‌ ಪರ ಪ್ರಚಾರ ಮಾಡಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ!

 

Share Post