BengaluruNationalPolitics

ಯಡಿಯೂರಪ್ಪ ವಿದಾಯ ಭಾಷಣ ಶ್ಲಾಘಿಸಿದ ಪ್ರಧಾನಿ ಮೋದಿ

ನವದೆಹಲಿ; ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಇಂದು ಅವರು ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ್ದಾರೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಯಡಿಯೂರಪ್ಪ ಅವರ ಭಾಷಣ ನೈತಿಕತೆಯನ್ನು ಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಭಾಷಣವನ್ನು ಮೋದಿ ಮರು ಟ್ವೀಟ್‌ ಮಾಡಿದ್ದು, ಯಡಿಯೂರಪ್ಪ ಭಾಷಣ ಬಿಜೆಪಿಯ ಒಬ್ಬ ಕಾರ್ಯಕರ್ತನಾಗಿ ನನಗೆ ಸ್ಪೂರ್ತಿದಾಯಕ ಎನಿಸಿದೆ ಎಂದಿದ್ದಾರೆ.

 

Share Post