BusinessEconomy

ಮಕ್ಕಳಿಗಾಗಿ ಕೆಲಸ ಬಿಟ್ಟಳು; ಮನೆಯಲ್ಲೇ ಗಂಟೆಗೆ 16 ಸಾವಿರ ದುಡಿಯುವ ಮಹಿಳೆ!

ತಂತ್ರಜ್ಞಾನ ಬೆಳೆದಂತೆಲ್ಲಾ ಕೆಲಸಗಳು ಸುಲಭವಾಗುತ್ತಿದೆ.. ಸೋಷಿಯಲ್‌ ಮೀಡಿಯಾಗಳ ಪ್ರಭಾವ ಹೆಚ್ಚಾದ ಮೇಲಂತೂ ಜನ ಏನನ್ನು ಬೇಕಾದರೂ ಮಾರಾಟ ಮಾಡುವ, ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದನೆ ಮಾಡುವ ಶಕ್ತಿಯನ್ನು ಪಡೆಯುತ್ತಿದೆ.. ದುಡಿಮೆ ಮಾಡುವ ಮನಸ್ಸು ಹಾಗೂ ಶ್ರದ್ಧೆ ಇದ್ದರೆ ಮನೆಯಲ್ಲಿ ಕುಳಿತು ಕೂಡಾ ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದು ಎಂಬುದನ್ನು ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ..

ಇದನ್ನೂ ಓದಿ; ದೇಶದ ಏಳು ಶ್ರೀಮಂತ ರಾಜ್ಯಗಳು ಯಾವುವು..?; ಕರ್ನಾಟಕಕ್ಕೆ ಎಷ್ಟೇ ಸ್ಥಾನ..?

ದಿನಕ್ಕೆ ಒಂದೇ ಗಂಟೆ ಕೆಲಸ, 16 ಸಾವಿರ ರೂ. ದುಡಿಮೆ!

ಇನ್ನು ಅಚ್ಚರಿಯಾದರೂ ಸತ್ಯ.. ಮಹಿಳೆಯೊಬ್ಬರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.. ಆದ್ರೆ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ.. ಹೀಗಾಗಿ ಕೆಲಸ ಬಿಟ್ಟರೆ ಹೇಗೆ ಎಂದು ಯೋಚಿಸಿದಳು.. ಕೆಲಸ ಬಿಟ್ಟರೆ ಮನೆಯ ನಿರ್ವಹಣೆಯ ಬಗ್ಗೆ ಚಿಂತೆಯಾಯಿತು.. ಆದ್ರೆ ಮನೆಯಿಂದಲೇ ಏನಾದರೂ ಕೆಲಸ ಮಾಡೋಣ ಎಂದು ಆಕೆ ಕೆಲಸಕ್ಕೆ ರಾಜೀನಾಮೆ ಕೊಟ್ಟಳು.. ಮನೆಯಲ್ಲೇ ಸೈಡ್‌ ಬ್ಯುಸಿನೆಸ್‌ ಶುರು ಮಾಡಿದಳು.. ಆಕೆ ಈಗ ದಿನಕ್ಕೆ ಒಂದು ಗಂಟೆ ಮಾತ್ರ ಕೆಲಸ ಮಾಡಿ ದಿನಕ್ಕೆ 16 ಸಾವಿರ ರೂಪಾಯಿ ದುಡಿಯುತ್ತಿದ್ದಾಳೆ.. ಮನಸ್ಸಿದ್ದೆ ಮಾರ್ಗ ಅನ್ನೋದಕ್ಕೆ ಇದೇ ಉದಾಹರಣೆ..

ಇದನ್ನೂ ಓದಿ; ಶ್ರೀರಾಮನ ಬಿಲ್ಲು, ಬಾಣದಂತಿರುವ ಗಾಜಿನ ಸೇತುವೆ; ಉದ್ಘಾಟನೆಗೆ ರೆಡಿ

ದ್ರಾಕ್ಷಿಯಿಂದ ದುಡಿಯಲು ಕಲಿತ ಮಹಿಳೆ!

ದ್ರಾಕ್ಷಿ ಹಣ್ಣು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.. ಇದೇ ದ್ರಾಕ್ಷಿ ಕೆಲಸಕ್ಕೆ ರಾಜೀನಾಮೆ ಕೊಟ್ಟ ಮಹಿಳೆಯ ಕೈಹಿಡಿದಿದೆ.. ಆ ಮಹಿಳೆಯ ಹೆಸರು ಬ್ರಿಜಾ ಗಿಜೆಲ್. ದಿ ಸನ್ ಪತ್ರಿಕೆಯಲ್ಲಿನ ವರದಿಯ ಪ್ರಕಾರ, ಈಕೆ ಕೆಲಸ ಮಾಡುತ್ತಿದ್ದಾಗ ತನ್ನ ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಅದಕ್ಕಾಗಿಯೇ ಬ್ರಿಜಾ ಕೆಲಸ ಬಿಡಲು ಯೋಚಿಸಿದಳು. ಕೆಲಸ ಬಿಟ್ಟರೆ ಬದುಕುವುದಕ್ಕೆ ಏನು ಮಾಡುವುದು ಎಂದು ಯೋಚಿಸಿದಳು.. ಆಗ ಹೊಳೆದಿದ್ದೇ ದ್ರಾಕ್ಷಿಯಿಂದ ಮಾಡಬಹುದಾದ ವಿಶೇಷ ಕ್ಯಾಂಡಿ..

ದ್ರಾಕ್ಷಿಯಿಂದ ವಿಶೇಷ ಕ್ಯಾಂಡಿ ತಯಾರಿಕೆ;

ಬ್ರಿಜಾ ‘ಸೈಡ್ ಹಸ್ಲ್’ ಅಂದರೆ ಒಂದು ರೀತಿಯ ಸೈಡ್ ಬಿಸಿನೆಸ್ ಆರಂಭಿಸಲು ನಿರ್ಧರಿಸಿದರು. ಮನೆಯಲ್ಲಿ ಕುಳಿತು ಉತ್ತಮವಾಗಿ ಹಣವನ್ನು ಗಳಿಸಬಹುದು. ಅದೇ ಸಮಯದಲ್ಲಿ ಮಕ್ಕಳನ್ನೂ ನೋಡಿಕೊಳ್ಳಬಹುದು ಎಂದುಕೊಂಡಳು. ವರದಿಗಳ ಪ್ರಕಾರ, ಬ್ರಿಜಾ ದ್ರಾಕ್ಷಿಯನ್ನು ಬಳಸಿ ವಿಶೇಷ ಕ್ಯಾಂಡಿಯನ್ನು ತಯಾರಿಸುತ್ತಾರೆ. ಇದು ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ದ್ರಾಕ್ಷಿ ಗೊಂಚಲು 158 ರೂಪಾಯಿಗೆ ಖರೀದಿಸಿ, ಕೇವಲ 10 ದ್ರಾಕ್ಷಿ ಬಳಸಿ ಕ್ಯಾಂಡಿ ಪ್ಯಾಕೆಟ್ ತಯಾರಿಸಿ ಸುಮಾರು 844 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ದ್ರಾಕ್ಷಿ ಗೊಂಚಲುಗಳಿಂದ ಹಲವು ಸಿಹಿ ಪ್ಯಾಕೆಟ್ ಗಳನ್ನು ತಯಾರಿಸಿ ಮಾರಾಟ ಮಾಡಿ ಸುಮಾರು ದಿನಕ್ಕೆ 16 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾಳಂತೆ.

ಇದನ್ನೂ ಓದಿ; IPLನಲ್ಲಿ ಸಿಕ್ಸರ್‌ಗಳ ದರ್ಬಾರ್‌; ಇವರೇ ನೋಡಿ ರನ್‌ ಮಾಂತ್ರಿಕರು..!

ಮಾರುಕಟ್ಟೆಯಲ್ಲಿ ಸಿಹಿತಿಂಡಿಗಳಿಗೆ ಬೇಡಿಕೆ;

ದ್ರಾಕ್ಷಿಯಿಂದ ತಯಾರಿಸಿದ ಕ್ಯಾಂಡಿಗೆ ಭಾರಿ ಬೇಡಿಕೆ ಇದೆ. ಈ ಕ್ಯಾಂಡಿ ತಯಾರಿಸಲು ತಾನು ಸಕ್ಕರೆ, ಕಾರ್ನ್ ಸಿರಪ್, ರೆಡ್ ಫುಡ್ ಕಲರ್ ಮತ್ತು ಮೆಕ್ಸಿಕನ್ ಮಸಾಲೆ ತಾಜಿನ್ ಬಳಸುತ್ತಿದ್ದೇನೆ ಎಂದು ಬ್ರಿಜಾ ಹೇಳುತ್ತಾರೆ. ಬ್ರಿಜಾ ತಯಾರಿಸುವ ಸಿಹಿತಿಂಡಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಅನೇಕರು ಈಕೆಯ ಮನೆಗೆ ಬಂದು ಆರ್ಡರ್ ಮಾಡಿ ಅದನ್ನು ತಯಾರಾದ ನಂತರ ತೆಗೆದುಕೊಂಡು ಹೋಗುತ್ತಾರೆ, ಇದನ್ನು ಮಾಡುವ ಮೂಲಕ ತಮ್ಮ ವಿತರಣಾ ವೆಚ್ಚವನ್ನು ಉಳಿಸುತ್ತಾರೆ.

ಇದನ್ನೂ ಓದಿ; ಹಿಂದೆಂದಿಗಿಂತಲೂ ಹೆಚ್ಚಾಯ್ತಾ ಮೋದಿ ವರ್ಚಸ್ಸು..?; ರಾಜ್ಯದಲ್ಲೀಗ ಮೋದಿ ಮೇನಿಯಾ..!

Share Post