EconomyHealth

ವರ್ಷಕ್ಕೆ 436 ರೂಪಾಯಿ ಕಟ್ಟಿದರೆ 2 ಲಕ್ಷ ರೂಪಾಯಿ ವಿಮೆ!

ಬೆಂಗಳೂರು; ನಮಗೆ ಯಾವಾಗ ಏನಾಗುತ್ತದೋ ಗೊತ್ತಿಲ್ಲ.. ಇದಕ್ಕಿದ್ದಂತೆ ನಾವು ತೀರಿ ಹೋದರೆ ನಮ್ಮನ್ನು ನಂಬಿಕೊಂಡವರು ಅನಾಥರಾಗಿಬಿಡುತ್ತಾರೆ.. ಅವರಿಗೆ ಆಸರೆ ಇಲ್ಲದಂತಾಗುತ್ತದೆ.. ಹೀಗಾಗಿ ನಮ್ಮನ್ನು ನಂಬಿಕೊಂಡವರಿಗಾಗಿ ಒಂದು ವಿಮೆ ಬೇಕು.. ಇನ್ನು ನಾವು ಅನಾರೋಗ್ಯಕ್ಕೀಡಾದರೆ ಆಗ ಸಾಲ ಮಾಡಿಕೊಂಡು ಕೂರಲು ಆಗುವುದಿಲ್ಲ.. ಒಂದು ಆರೋಗ್ಯ ವಿಮೆ ಇದ್ದರೆ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು.. ಆದ್ರೆ ಚೆನ್ನಾಗಿ ಸಂಪಾದನೆ ಮಾಡುವವರು ವಿಮೆ ಮಾಡಿಸುತ್ತಾರೆ.. ಬಡವರಿಗೆ ಕಷ್ಟದ ಮಾತು.. ದಿನಾ ದುಡಿದು ತಿಂದರೆ ಸಾಕು ಅಂತ ಇರುವ ನಾವು ಹೇಗೆ ವಿಮೆ ಮಾಡಿಸೋದು ಎಂದು ನೀವು ಕೇಳಬಹುದು.. ಅಂತವರಿಗಾಗಿಯೇ ಕೇಂದ್ರ ಸರ್ಕಾರ ಒಂದು ಉತ್ತಮ ವಿಮಾ ಯೋಜನೆ ಪರಿಚಯಿಸಿದೆ.. ಇದರಲ್ಲಿ ವರ್ಷಕ್ಕೆ 436 ರೂಪಾಯಿ ಪಾವತಿಸಿದರೆ ಸಾಕು, 2 ಲಕ್ಷ ರೂಪಾಯಿ ವೈದ್ಯಕೀಯ ವಿಮೆ ಪಡೆಯಬಹುದು..

ಇದನ್ನೂ ಓದಿ; ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ!

ಕೇಂದ್ರ ಸರ್ಕಾರ ಹಲವು ಉಳಿತಾಯ ಹಾಗೂ ವಿಮಾ ಯೋಜನೆಗಳನ್ನು ಪರಿಚಯಿಸಿದೆ.. ಅದ್ರಲ್ಲಿ ಜೀವನ್‌ ಜ್ಯೋತಿ ಬಿಮಾ ಯೋಜನೆ ಕೂಡಾ ಒಂದು.. ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದವರಿಗೆ 2 ಲಕ್ಷದವರೆಗೆ ವೈದ್ಯಕೀಯ ವಿಮೆಯನ್ನು ಒದಗಿಸುತ್ತದೆ. ನೀವು ಈ ಯೋಜನೆಯಿಂದ ಲಾಭವನ್ನು ಪಡೆಯಲು ಬಯಸಿದರೆ, ವರ್ಷಕ್ಕೆ ರೂ.436 ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕು. ಅಂದರೆ ತಿಂಗಳಿಗೆ ರೂ.40ಕ್ಕಿಂತ ಕಡಿಮೆ ಹೂಡಿಕೆ ಮಾಡಿದರೆ ರೂ.2 ಲಕ್ಷ ವಿಮೆ ಸಿಗುತ್ತದೆ. ಬಹುಶಃ ಪಾಲಿಸಿದಾರನು ಸತ್ತರೆ, ಹಣವು ಅವನ ನಾಮಿನಿ ಅಥವಾ ಕುಟುಂಬ ಸದಸ್ಯರಿಗೆ ಹೋಗುತ್ತದೆ.

ಇದನ್ನೂ ಓದಿ; ಕರ್ತವ್ಯದಲ್ಲಿದ್ದಾಗಲೇ ಶಿರಸ್ತೇದಾರ್‌ಗೆ ಚಾಕುವಿನಿಂದ ಇರಿದ ವ್ಯಕ್ತಿ!

Share Post