Lifestyle

ಇಂದು ಅನಂತ್‌ ಅಂಬಾನಿ ಮದುವೆ; 2 ಸಾವಿರ ಕೋಟಿ ಖರ್ಚು!

ಮುಂಬೈ; ಭಾರತದಲ್ಲಿ ಮದುವೆ ಸಮಾರಂಭ ಅನ್ನೋದು ಪ್ರತಿಷ್ಠೆಯಾಗಿಬಿಟ್ಟಿದೆ.. ಇಡೀ ಜೀವಮಾನದಲ್ಲಿ ಸಂಪಾದಿಸಿದ ದುಡ್ಡನ್ನು ಜನ ಮಕ್ಕಳ ಮದುವೆಗೆ ಖರ್ಚು ಮಾಡಲು ತಯಾರಿರುತ್ತಾರೆ.. ಅದ್ರಲ್ಲೂ ಶ್ರೀಮಂತರಾದರೆ ಖರ್ಚಿಗೆ ಲೆಕ್ಕವೇ ಇರೋದಿಲ್ಲ.. ಅದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತವೆ.. ನಮ್ಮ ಕಣ್ಣು ಮುಂದೆ ಸದ್ಯಕ್ಕಿರುವ ಉದಾಹರಣೆ ಮುಖೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆ.. ಇಂದು ಇವರ ಮದುವೆ ನಡೆಯುತ್ತಿದೆ.. ಸಾವಿರಾರು ಕೋಟಿ ಒಡೆಯರಾಗಿರುವ ಅಂಬಾನಿ ಕುಟುಂಬ, ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಿದೆ.. ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ..

ಇದನ್ನೂ ಓದಿ; ವರ್ಷಕ್ಕೆ 436 ರೂಪಾಯಿ ಕಟ್ಟಿದರೆ 2 ಲಕ್ಷ ರೂಪಾಯಿ ವಿಮೆ!

ಅಂದಾಜಿನ ಪ್ರಕಾರ ಅನಂತ್‌ ಅಂಬಾನಿ ಮದುವೆಗೆ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.. ಕಳೆದ ರಾತ್ರಿಯ ರಿಸೆಪ್ಷನ್‌ಗಾಗಿ ಸುಮಾರು 2000 ಕ್ಕೂ ಹೆಚ್ಚು ವೈವಿಧ್ಯಮಯ ಭಕ್ಷ್ಯಗಳನ್ನು ತಯಾರಿಸಲಾಗಿತ್ತು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸೆಲೆಬ್ರಿಟಿಗಳೊಂದಿಗೆ ಸ್ಟೇಜ್ ಶೋಗಳನ್ನು ಆಯೋಜಿಸಲಾಗಿದೆ. ಅದಕ್ಕಾಗಿ ಅವರಿಗೆ ಸಂಭಾವನೆಯಾಗಿ ಹತ್ತಾರು ಕೋಟಿ ರೂಪಾಯಿ ನೀಡಲಾಗಿದೆ..
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯನ್ನು ಅದ್ಧೂರಿಯಾಗಿ ಮಾಡಲು, ಅಂಬಾನಿ ಕುಟುಂಬ ಪ್ರೀ ವೆಡ್ಡಿಂಗ್‌ ಇವೆಂಟ್‌ಗಳಿಗಾಗಿಯೇ ನೂರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.. ಮದುವೆಯ ಪೂರ್ವ ಆಚರಣೆಗಳು ಮಾರ್ಚ್‌ನಲ್ಲಿ ಪ್ರಾರಂಭವಾಗಿ ಜುಲೈವರೆಗೆ ನಡೆದಿವೆ. ದುಬಾರಿ ಮದುವೆ ಕಾರ್ಡ್‌ಗಳ ಜೊತೆಗೆ ಉಡುಗೊರೆಗಳನ್ನು ನೀಡಿದ್ದಾರೆ. ಪ್ರಪಂಚದಾದ್ಯಂತದ ಅತಿಥಿಗಳನ್ನು ಮದುವೆ ಮಂಟಪಕ್ಕೆ ಸಾಗಿಸಲು ಹತ್ತಾರು ವಿಮಾನಗಳ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ; ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣವಿಲ್ಲ; ಬಸವರಾಜರಾಯ ರೆಡ್ಡಿ

ಅಂಬಾನಿ ಮದುವೆ ಅಷ್ಟೇ ಅಲ್ಲ, ನಮ್ಮ ದೇಶದಲ್ಲಿ ಮದುವೆ ಮಾರುಕಟ್ಟೆ ವರ್ಷಕ್ಕೆ 10 ಲಕ್ಷ ಕೋಟಿ ಮಟ್ಟದಲ್ಲಿದೆ.

Share Post