ದೇಹದಾನದ ವೇಳೆ ಎದ್ದು ಕುಳಿತ ಸತ್ತ ವ್ಯಕ್ತಿ!
ಅಮೆರಿಕ; ವ್ಯಕ್ತಿಯೊಬ್ಬರು ದೇಹ ದಾನ ಮಾಡಿದ್ದರು.. ಕೆಲ ದಿನಗಳ ನಂತರ ಮೃತಪಟ್ಟಿದ್ದರು.. ಆದ್ರೆ ಅಂಗಾಂಗ ಸಂಗ್ರಹಕ್ಕೆ ಆಪರೇಷನ್ ಮಾಡಳು ಹೋದಾಗ ವ್ಯಕ್ತಿ ಎದ್ದು ಕುಳಿತಿದ್ದಾನೆ.. ಅಮೇರಿಕದಲ್ಲಿ ಈ ಘಟನೆ ನಡೆದಿದೆ..
ಇಲ್ಲಿನ ಕೆಂಟಕಿ ಹಾಸ್ಪಿಟಲ್ ವೈದ್ಯರ ಯಡವತ್ತಿನಿಂದ ಈ ಘಟನೆ ನಡೆದಿದೆ.. ಕೆಂಟಕಿಯ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ವೈದ್ಯರು ವ್ಯಕ್ತಿ ಸತ್ತಿದ್ದಾನೆಂದು ಡಿಕ್ಲೇರ್ ಮಾಡಿದ್ದರು.. ಹೀಗಾಗಿ ಆ ವ್ಯಕ್ತಿಯ ಅಂಗಾಂಗ ಪಡೆಯಲು ಮುಂದಾಗಿದ್ದರು. ಈ ವೇಳೆ ವ್ಯಕ್ತಿ ಎದ್ದು ಕುಳಿತಿದ್ದಾನೆ..
36 ವರ್ಷದ ಥಾಮಸ್ ಟಿ ಜೆ ಹೂವರ್ ಎಂಬ ವ್ಯಕ್ತಿಯೇ ಎದ್ದು ಕುಳಿತವರು. ನಿಜ ಹೇಳಬೇಕಂದ್ರೆ ಇದು ಹಳೆ ಘಟನೆಯಗಿದ್ದು ಈಗ ವೈರಲ್ ಆಗುತ್ತಿದೆ.. ಟಿಜೆ ಹೂವರ್ ಗೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ಆತನನ್ನ ಕುಟುಂಬಸ್ಥರು ಕೆಂಟಕಿ ಆಸ್ಪತ್ರೆಗೆ ಕರೆತಂದಿದ್ದರು. ಡಾಕ್ಟರ್ ಆತನ ಬ್ರೈನ್ ಡೆಡ್ ಆಗಿದೆ ಎಂದು ಹೇಳಿದ್ದರು.