EconomyLifestyle

ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್‌ ಲೋನ್‌ ಬೇಕಾ..?; ಹಾಗಾದರೆ ಈ ವಿಧಾನ ಅನುಸರಿಸಿ!

ಆಧುನಿಕ ಜೀವನಶೈಲಿಯಲ್ಲಿ ಮನುಷ್ಯಕ ಹೆಚ್ಚು ಕೊಳ್ಳುಬಾಕನಾಗುತ್ತಿದ್ದಾರೆ.. ಅವಶ್ಯಕತೆಗಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ.. ಇದರಿಂದಾಗಿ ಅವಶ್ಯಕತೆಗಳು ಹೆಚ್ಚಾಗುತ್ತಿದ್ದು, ಆದಾಯ ಕಡಿಮೆಯಾಗುತ್ತಿದೆ.. ದುಡಿಯುವ ಹಣದಲ್ಲಿ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಮನುಷ್ಯನಿಗೆ ಕಷ್ಟವಾಗುತ್ತಿದೆ.. ಈ ಹಿನ್ನೆಲೆಯಲ್ಲಿ ಮನುಷ್ಯ ಅಗತ್ಯ ಎಂದು ಬಂದಾಗ ಸುಲಭವಾಗಿ ಸಿಗುವ ಪರ್ಸನಲ್‌ ಲೋನ್‌ ತೆಗೆದುಕೊಳ್ಳುತ್ತಿದ್ದಾನೆ.. ಆದ್ರೆ ಹೆಚ್ಚಿನ ಬಡ್ಡಿಯಿಂದಾಗಿ ಇನ್ನಷ್ಟು ಸಂಕಷ್ಟಕ್ಕೆ ಈಡಾಗುತ್ತಿದ್ದಾನೆ.

ಇದನ್ನೂ ಓದಿ; ಕೇಕ್‌ನಲ್ಲೇ ಇದ್ದ ಯಮರಾಯ; ಹುಟ್ಟಹಬ್ಬದಂದೇ ಬಾಲಕಿ ಕೇಕ್‌ಗೆ ಬಲಿ!

ಕಡಿಮೆ ಬಡ್ಡಿ ದರದಲ್ಲೂ ಸಿಗುತ್ತೆ ಪರ್ಸನಲ್‌ ಲೋನ್‌;

ನಮ್ಮ ಮಾಸಿಕ ಆದಾಯ ಎಷ್ಟಿದೆ ಎಂಬುದರ ಮೇಲೆ ಪರ್ಸನಲ್‌ ಲೋನ್‌ ಸಿಗುತ್ತದೆ.. ತಿಂಗಳ ಸಂಬಳ ಪಡೆಯುವವರಿಗಾದರೆ ಸುಲಭವಾಗಿ ಸಾಲ ಸೌಲಭ್ಯ ಲಭ್ಯವಾಗುತ್ತದೆ.. ಪ್ರತಿ ತಿಂಗಳೂ ಕಂತಿನ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ.. ಇತರ ಸಾಲಗಳಿಗೆ ಹೋಲಿಸಿದರೆ, ವೈಯಕ್ತಿಕ ಸಾಲಗಳಿಗೆ ಹೆಚ್ಚಿನ ದಾಖಲೆಗಳು ಬೇಕಾಗುವುದಿಲ್ಲ.. ಯಾವುದೇ ಶ್ಯೂರಿಟಿ ಕೂಡಾ ಅಗತ್ಯವಿರುವುದಿಲ್ಲ.. ಹೀಗಾಗಿಯೇ, ಬ್ಯಾಂಕುಗಳು ಇವುಗಳನ್ನು ಅಸುರಕ್ಷಿತ ಸಾಲಗಳೆಂದು ಪರಿಗಣಿಸುತ್ತವೆ. ಆದ್ದರಿಂದ ಪರ್ಸನಲ್‌ ಲೋನ್‌ಗೆ ಬಡ್ಡಿ ದರವೂ ಹೆಚ್ಚು. ಆದರೆ ವೈಯಕ್ತಿಕ ಸಾಲಗಳು ಕಡಿಮೆ ಬಡ್ಡಿದರದಲ್ಲಿ ಲಭ್ಯವಿವೆ. ಅದಕ್ಕಾಗಿ, ನೀವು ಒಂದಷ್ಟು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.. ಅವುಗಳ ಮೂಲಕ ನಾವು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ಗಳಿಂದ ವೈಯಕ್ತಿಕ ಸಾಲ ಪಡೆಯಬಹುದು.

ಇದನ್ನೂ ಓದಿ; ಬಿಜೆಪಿ ಅಭ್ಯರ್ಥಿಗೆ ಅಡುಗೆ ಮಾಡಲು ಲಾಯಕ್ಕು; ಶಾಮನೂರು ಹೇಳಿಕೆಗೆ ಸೈನಾ ನೆಹ್ವಾಲ್‌ ಕಿಡಿ

ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು;

ವೈಯಕ್ತಿಕ ಸಾಲ ಸಿಗಬೇಕಾದರೆ ಕ್ರೆಡಿಟ್‌ ಸ್ಕೋರ್‌ ಅಥವಾ ಸಿಬಿಲ್‌ ಸ್ಕೋರ್‌ ಚೆನ್ನಾಗಿರಬೇಕು.. ಅದನ್ನು ಪರಿಶೀಲನೆ ಮಾಡಿಯೇ ನಿಮಗೆ ಲೋನ್‌ ಕೊಡೋದು.. ಕ್ರೆಡಿಟ್‌ ಸ್ಕೋರ್‌ ಎಷ್ಟಿದೆ ಎಂಬುದರ ಮೇಲೆ ನಿಮ್ಮ ಸಾಲದ ಮೇಲಿನ ಬಡ್ಡಿ ದರ ನಿರ್ಧಾರ ವಾಗುತ್ತದೆ..  ಅದಕ್ಕಾಗಿಯೇ ನಾವು ಕ್ರೆಡಿಟ್ ಸ್ಕೋರ್ ಅನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು.. ಕ್ರೆಡಿಟ್‌ ಸ್ಕೋರ್‌ 750ಕ್ಕಿಂತ ಹೆಚ್ಚಿರಬೇಕು.. ಇದರಿಂದ ನಿಮಗೆ ವೈಯಕ್ತಿಕ ಸಾಲ ಸುಲಭವಾಗಿ ಸಿಗುತ್ತದೆ.. ಜೊತೆಗೆ ಬಡ್ಡಿದರವೂ ಕಡಿಮೆಯಾಗಲಿದೆ.. ಕ್ರೆಡಿಟ್ ಸ್ಕೋರ್ ಡೀಫಾಲ್ಟ್ ಇಲ್ಲದೆ ಸಮಯಕ್ಕೆ ಕಂತುಗಳನ್ನು ಪಾವತಿಸುವ ನಿಮ್ಮ ಸಾಮರ್ಥ್ಯವನ್ನು ಸೂಚಿಸುತ್ತದೆ. ನಾವು ನಮ್ಮ ಹಿಂದಿನ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದರೆ, ನಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಿರುತ್ತದೆ. ಅದರ ಪ್ರಕಾರ ನಾವು ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯವನ್ನು ನಿರ್ಣಯಿಸುತ್ತೇವೆ.

ಇದನ್ನೂ ಓದಿ; ಅಪ್ಪ ಯೋಗೇಶ್ವರ್‌ ಬಿಜೆಪಿ ನಾಯಕ; ಮಗಳಿಗೆ ಕಾಂಗ್ರೆಸ್‌ ಸೇರೋ ಬಯಕೆ!

ಅವಲೋಕನ ಅಗತ್ಯ;

ನಾವು ತೆಗೆದುಕೊಳ್ಳುವ ಸಾಲಕ್ಕೆ ಅನೇಕ ಇತರೆ ಶುಲ್ಕಗಳನ್ನು ಬ್ಯಾಂಕ್‌ಗಳವರು ಸೇರಿಸುತ್ತಾರೆ.. ಇವೆಲ್ಲವೂ ಸಾಲದ ಮರುಪಾವತಿ ಮೊತ್ತವನ್ನು ಹೆಚ್ಚಿಸುತ್ತವೆ.. ಆದ್ದರಿಂದ ಸಾಲವನ್ನು ತೆಗೆದುಕೊಳ್ಳುವ ಮೊದಲು, ಯಾವ ಬ್ಯಾಂಕ್‌ ನವರು ಎಷ್ಟು ಶುಲ್ಕಗಳನ್ನು ವಿಧಿಸುತ್ತಿದ್ದಾರೆ.. ಎಷ್ಟು ಬಡ್ಡಿ ವಿಧಿಸುತ್ತಿದ್ದಾರೆ ಎಲ್ಲವನ್ನೂ ತಿಳಿದುಕೊಳ್ಳಬೇಕು.. ಇಲ್ಲದಿದ್ದರೆ ನೀವು ಬಡ್ಡಿ ಮತ್ತು ಇತರ ಶುಲ್ಕಗಳ ರೂಪದಲ್ಲಿ ನಷ್ಟವನ್ನು ಅನುಭವಿಸುವ ಅಪಾಯವಿದೆ.

ಬಡ್ಡಿದರಗಳ ವಿವರಗಳು;

ಸಾಲದ ಮೇಲಿನ ಬಡ್ಡಿ ದರಗಳು ಎಲ್ಲಾ ಬ್ಯಾಂಕ್‌ಗಳಲ್ಲಿ ಒಂದೇ ರೀತಿ ಇರುವುದಿಲ್ಲ. ವಿವಿಧ ಬ್ಯಾಂಕ್‌ಗಳು ವಿಭಿನ್ನವಾಗಿ ಶುಲ್ಕ ವಿಧಿಸುತ್ತವೆ. ಸಂಸ್ಕರಣಾ ಶುಲ್ಕಗಳು ಸಹ ಬದಲಾಗುತ್ತವೆ. ಅಲ್ಲದೆ ಸಾಲದ ವಿಷಯದಲ್ಲಿ ನಿಯಮಗಳು ಮತ್ತು ಷರತ್ತುಗಳು ಸಹ ಬ್ಯಾಂಕುಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಹಾಗಾಗಿ ಸಾಲ ಪಡೆಯುವ ಮುನ್ನ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಯಾವ ಬ್ಯಾಂಕ್ ನಿಯಮಾವಳಿಗಳು ಅನುಕೂಲಕರವಾಗಿವೆ ಮತ್ತು ಎಲ್ಲೆಲ್ಲಿ ಕಡಿಮೆ ಶುಲ್ಕವಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಅವುಗಳನ್ನು ಪರಿಶೀಲಿಸಿದ ನಂತರ ಸಾಲಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ; ಸುಮಲತಾ ಕಣಕ್ಕಿಳಿಯೋದು ಬಹುತೇಕ ಫಿಕ್ಸ್‌; ಏಪ್ರಿಲ್‌ 3ಕ್ಕೆ ಘೋಷಣೆ!

ಪಾವತಿಸುವ ಸಾಮರ್ಥ್ಯ;

ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವ ಮೊದಲು ಪರಿಗಣಿಸಬೇಕಾದ ಮುಖ್ಯ ಅಂಶವೆಂದರೆ ನಿಮ್ಮ ಆರ್ಥಿಕ ಸ್ಥಿತಿ. ಸಾಲವನ್ನು ತೆಗೆದುಕೊಂಡ ನಂತರ, ನೀವು ಸಮಯಕ್ಕೆ ಕಂತುಗಳನ್ನು ಪಾವತಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ನೀವು ಲೆಕ್ಕ ಹಾಕಬೇಕು. ನಿಮ್ಮ ಆದಾಯ ಮತ್ತು ವೆಚ್ಚಗಳ ಜೊತೆಗೆ, ನೀವು ತುರ್ತು ಪರಿಸ್ಥಿತಿಗಳಿಗಾಗಿ ಸ್ವಲ್ಪ ಮೊತ್ತವನ್ನು ಮೀಸಲಿಡಬೇಕು. ಇಷ್ಟೆಲ್ಲ ಆದ ನಂತರ, ಕಂತುಗಳಲ್ಲಿ ಪಾವತಿಸಲು ನಿಮಗೆ ಅನುಕೂಲವಿದ್ದರೆ, ನೀವು ಯಾವುದೇ ಹಿಂಜರಿಕೆಯಿಲ್ಲದೆ ಸಾಲವನ್ನು ತೆಗೆದುಕೊಳ್ಳಬಹುದು..

ಇದನ್ನೂ ಓದಿ; ಕಣದಲ್ಲಿರುವ ಮೂರೂ ಪಕ್ಷಗಳ ಅಭ್ಯರ್ಥಿಗಳ ಯಾರು..?; 28 ಕ್ಷೇತ್ರಗಳ ಫುಲ್‌ ಡಿಟೇಲ್ಸ್‌

 

Share Post