CrimeDistricts

ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಶಾಲಾ ಬಾಲಕಿ ಸಾವು

ಬೆಳಗಾವಿ;  ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಎಂಟು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲ್ಲೂಕಿನ  ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಪಕ್ಕದ ಮನೆಗ ಓದಲು ಹೋಗಿ ವಾಪಸ್ ಮನೆಗೆ ಬರುವಾಗ ಈ ದುರ್ಘಟನೆ ನಡೆದಿದ್ದು, ಎಂಟು ವರ್ಷದ ಬಾಲಕಿ ಚೂನವನ್ನ ಸರ್ವಿ ಸಾವನ್ನಪ್ಪಿದ್ದಾಳೆ.

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಂಡರಿಸಿ ಬಿದ್ದಿದ್ದ ತಂತಿಯ ಮೇಲೆ ಕಾಲಿಟ್ಟು ವಿದ್ಯುತ್ ಸ್ಪರ್ಶಿಸಿ ಚೂನವ್ವ ಸರ್ವಿ ಮೃತಪಟ್ಟಿದ್ದಾಳೆ. ಈ ಘಟನೆ ಜೂ.24ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು, ಕುಟುಂಬಸ್ಥರು ಒತ್ತಾಯಿಸಿದ್ದಾರೆ.

 

Share Post