CrimeDistricts

ಪ್ರೀತಿಗೆ ನಿರಾಕರಿಸಿದ ಯುವತಿ; ಮನನೊಂದ ಯುವಕ ಸೂಸೈಡ್‌!

ರಾಯಚೂರು; ಯುವತಿಯೊಬ್ಬಳು ಪ್ರೀತಿ ಮಾಡುವುದಕ್ಕೆ ನಿರಾಕರಿಸಿದಳು ಎಂಬ ಕಾರಣಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.. ರಾಯಚೂರು ತಾಲ್ಲೂಕಿನ ಮಲಿಯಾಬಾದ್‌ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ..

ಹನುಮೇಶ್‌ ರಾಯಚೂರಿನ ನವಯುಗ ಕಾಲೇಜಿನಲ್ಲಿ ಓದುತ್ತಿದ್ದ.. ಆತ ಓರ್ವ ಯುವತಿಯನ್ನು ಪ್ರೀತಿ ಮಾಡುತ್ತಿದ್ದ.. ಆದ್ರೆ ಯುವತಿ ಮನೆಯವರು ಇವರಿಬ್ಬರ ಮದುವೆ ನಿರಾಕರಣೆ ಮಾಡಿದ್ದಾರೆ.. ಇದರಿಂದಾಗಿ ಮನನೊಂದ ಯುವಕ ಹನುಮೇಶ್‌, ಅರಣ್ಯ ಪ್ರದೇಶಕ್ಕೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

ಯರಗೇರಾ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಿನಲ್ಲಿ ಬಿದ್ದಿದ್ದ ಹನುಮೇಶ್‌ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

 

Share Post