ಸಂತ್ರಸ್ತೆ ಜೊತೆ ರೇವಣ್ಣ ನಿವಾಸಕ್ಕೆ ಬಂದ ಎಸ್ ಐಟಿ ಅಧಿಕಾರಿಗಳು
ಹಾಸನ; ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ತೀವ್ರಗೊಂಡಿದೆ.. ಇಂದು ಎಸ್ ಐಟಿ ಅಧಿಕಾರಿಗಳು ಸಂತ್ರಸ್ತೆಯ ಜೊತೆ ಹೊಳೆ ನರಸೀಪುರದ ರೇವಣ್ ಅವರ ಚೆನ್ನಾಂಬಿಕೆ ನಿವಾಸಕ್ಕೆ ಬಂದಿದ್ದಾರೆ.. ಸ್ಥಳ ಮಹಜರು ಮಾಡುವುದಕ್ಕಾಗಿ ಸಂತ್ರಸ್ತೆಯನ್ನು ಕರೆತರಲಾಗಿದೆ..
ಮನೆಯಲ್ಲಿ ಏನೆಲ್ಲಾ ನಡೆಯಿತು..? ಎಲ್ಲಿ ದೌರ್ಜನ್ಯ ನಡೆಯಿತು ಎಂಬುದರ ಬಗ್ಗೆ ಅಧಿಕಾರಿಗಳು ಮಹಜರು ಮಾಡುತ್ತಿದ್ದಾರೆ.. ಆದ್ರೆ ಮನೆಯಲ್ಲಿ ರೇವಣ್ಣ ಕುಟುಂಬದವರು ಯಾರೂ ಇಲ್ಲ.. ಕೆಲಸದಾಳುಗಳು ಮಾತ್ರ ಇದ್ದು, ಅಧಿಕಾರಿಗಳು ಸಂತ್ರಸ್ತೆಯಿಂದ ಮಾಹಿತಿ ಪಡೆಯುತ್ತಿದ್ದಾರೆ..
ಘಟನೆ ನಡೆದ ದಿನ ಏನೆಲ್ಲಾ ನಡೆಯಿತು ಎಂಬುದರ ಬಗ್ಗೆ ಮಹಿಳೆಯಿಂದ ವಿವರಣೆ ಪಡೆಯಲಾಗುತ್ತಿದೆ.. ಮಹಿಳಾ ಅಧಿಕಾರಿಗಳು ಸಂತ್ರಸ್ತೆಯಿಂದ ಮಾಹಿತಿ ಪಡೆಯುತ್ತಿದ್ದಾರೆ. ಇದರ ಚಿತ್ರೀಕರಣ ಕೂಡಾ ನಡೆಯುತ್ತಿದೆ..