DistrictsPolitics

Parashurama Themepark; ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ ವಿವಾದ; ಸಿಐಡಿ ತನಿಖೆಗೆ ವಹಿಸಿದ ಸರ್ಕಾರ

ಉಡುಪಿ; ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಎರ್ಲಪಾಡಿ ಗ್ರಾಮದ ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ ಕಳಪೆ ಹಾಗೂ ಅವ್ಯವಹಾರದ ಬಗ್ಗೆ ತನಿಖೆಗೆ ಮುಖ್ಯಮಂತ್ರಿಗಳು ಸಿಐಡಿಗೆ ಒಪ್ಪಿಸಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನವಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೀಗ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

ಇದನ್ನೂ ಓದಿ;CM Janaspandana; ಸಿಎಂ ಮುಂದೆ ಜನರ ಗೋಳು; ಕಣ್ಣೀರಿಟ್ಟು ನೆರವಿಗಾಗಿ ಗೋಗರೆಯುತ್ತಿರುವ ಜನ!

ಪರಶುರಾಮ್‌ ಥೀಮ್‌ ಪಾರ್ಕ್‌ ಅವ್ಯಹಾರದ ತನಿಖೆ ಸಿಐಡಿಗೆ

ಪರಶುರಾಮ್‌ ಥೀಮ್‌ ಪಾರ್ಕ್‌ ಅವ್ಯಹಾರದ ತನಿಖೆ ಸಿಐಡಿಗೆ; ಇದೇ 2ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್.‌ ಹೆಬ್ಬಾಳ್ಕರ್ ಅವರು, ಥೀಮ್‌ ಪಾರ್ಕ್‌ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅದರಂತೆ ಈಗ ಮುಖ್ಯಮಂತ್ರಿ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಪರಶುರಾಮ‌ ಥೀಮ್‌ ಪಾರ್ಕ್‌ ಕಾಮಗಾರಿಯಲ್ಲಿ ನಡೆದ ಕಳಪೆ ಕಾಮಗಾರಿ ಹಾಗೂ ಅವ್ಯವಹಾರದ ಬಗ್ಗೆ, ಜೊತೆಗೆ ಧಾರ್ಮಿಕ ಭಾವನೆಗಳಿಗೆ ಅಪಪ್ರಚಾರವಾಗಿರುವ ಸಂಬಂಧ ಸಾರ್ವಜನಿಕರಿಂದ ಭಾರೀ ದೂರು ಕೇಳಿ ಬಂದಿತ್ತು. ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಖುದ್ದು ಸಚಿವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿತ್ತು.

ಇದನ್ನೂ ಓದಿ;Snowfall; ಭಾರಿ ಹಿಮಪಾತಕ್ಕೂ ಜಗ್ಗದ ಸನ್ಯಾಸಿ; ಕೇದಾರ ಕಣಿವೆಯಲ್ಲಿ ಪವಾಡ!

11.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ

11.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ; ಕಾರ್ಕಳ ಶಾಸಕ ಅಂದಿನ ಸಚಿವ ಸುನಿಲ್‌ ಕುಮಾರ್‌ ಅವರು ಕಾರ್ಕಳದಲ್ಲಿ ಈ ಪರಶುರಾಮ್‌ ಥೀಮ್‌ ಪಾರ್ಕ್‌ ಸ್ಥಾಪನೆ ಮಾಡಿದ್ದರು. ಇದಕ್ಕೆ ಸರ್ಕಾರದಿಂದ 11.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 5 ಕೋಟಿ ರೂಪಾಯಿ ಪರಶುರಾಮ ಕಂಚಿನ ಪ್ರತಿಮೆ ಸ್ಥಾಪನೆಗೆ ಖರ್ಚು ಮಾಡಲಾಗಿತ್ತು. ಕಾರ್ಕಳದ ಗುಡ್ಡದ ಮೇಲೆ ಈ ಪರಶುರಾಮ್ ‌ಥೀಮ್‌ ಪಾರ್ಕ್‌ ಸ್ಥಾಪನೆ ಮಾಡಲಾಗಿದೆ. ಆದ್ರೆ ಬಿಜೆಪಿ ಸರ್ಕಾರದ ಕೊನೇ ಹಂತದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಕೆಲಸ ಅರ್ಧಂಬರ್ಧ ಆಗಿದ್ದರೂ, ಚುನಾವಣೆ ಹತ್ತಿರವಾಗಿದ್ದರಿಂದ ತರಾತುರಿಯಲ್ಲಿ ಇದನ್ನು ಉದ್ಘಾಟನೆ ಕೂಡಾ ಮಾಡಲಾಗಿತ್ತು.

ಇದನ್ನೂ ಓದಿ;Mandya Politics; ಮಂಡ್ಯದಲ್ಲಿ ಮತ್ತೆ ಸುಮಲತಾ-ನಿಖಿಲ್‌ ಕುಮಾರಸ್ವಾಮಿ ಫೈಟ್‌..?

ಪ್ರತಿಮೆಗೆ ಕಂಚು ಬದಲು ಫೈಬರ್‌ ಬಳಕೆ!

ಪ್ರತಿಮೆಗೆ ಕಂಚು ಬದಲು ಫೈಬರ್‌ ಬಳಕೆ!; ಸುನಿಲ್‌ ಕುಮಾರ್‌ ಕ್ರೆಡಿಟ್‌ ಅವರಿಗೇ ತೆಗೆದುಕೊಳ್ಳುವ ಉದ್ದೇಶದಿಂದ ಚುನಾವಣೆಗೆ ಮೊದಲು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಂದಹಾಗೆ ಹಂಚಿನ ಪ್ರತಿಮೆ ತಯಾರಿ ಪೂರ್ತಿ ಆಗಿರಲಿಲ್ಲ. ಹೀಗಾಗಿ ತರಾತುರಿಯಲ್ಲಿ ಪ್ರತಿಮೆ ಉದ್ಘಾಟನೆ ಮಾಡೋದಕ್ಕಾಗಿ, ತಾತ್ಕಾಲಿಕವಾಗಿ ಫೈಬರ್‌ ಬಳಸಿ ಪ್ರತಿಮೆಯ ಅರ್ಧ ಭಾಗ ತಯಾರಿಸಲಾಗಿತ್ತು. ಅದಕ್ಕೆ ಕಂಚಿನ ಬಣ್ಣ ಬಳಿದು ಯಾರಿಗೂ ಗೊತ್ತಾಗದಂತೆ ಮಾಡಿದ್ದರು ಎಂದು ಆರೋಪವಿದೆ. ಚುನಾವಣೆ ನಂತರ ಕಾಂಗ್ರೆಸ್‌ ಆಡಳಿತ ಬಂತು. ಈ ವೇಳೆ ಪರಿಶೀಲನೆ ಮಾಡಿದಾಗ, ಕಂಚಿನ ಬದಲಾಗಿ ಪ್ರತಿಮೆಗೆ ಫೈಬರ್‌ ಬಳಸಲಾಗಿದೆ ಅನ್ನೋದು ಗೊತ್ತಾಗಿತ್ತು. ಈ ಆರೋಪ ಕೇಳಿಬಂದ ಕೂಡಾ ರಾತ್ರೋರಾತ್ರಿ ಆ ಪ್ರತಿಮೆಯನ್ನು ಸ್ಥಳಾಂತರ ಮಾಡಲಾಗಿತ್ತು.

ಈ ಥೀಮ್‌ ಪಾರ್ಕ್‌ನಲ್ಲಿ ಏನೇನಿರುತ್ತೆ..?

ಈ ಥೀಮ್‌ ಪಾರ್ಕ್‌ನಲ್ಲಿ ಏನೇನಿರುತ್ತೆ..?; ಪರಶುರಾಮನ ಥೀಮ್‌ ಪಾರ್ಕ್‌ ಹಲವು ವಿಶೇಷತೆಯಿಂದ ಕೂಡಿದೆ. ಇಲ್ಲಿ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಮೂರ್ತಿ ಬರಲಿದೆ. ಭಜನಾ ಮಂದಿರ, ಆಧುನಿಕ ಆಡಿಯೋ- ವಿಶುವಲ್ ಮ್ಯೂಸಿಯಂ, ೫೦೦ ಆಸನಗಳ ಆಂಫಿಥಿಯೇಟರ್, ೪೫೦ ಅಡಿ ಬೆಟ್ಟದ ಮೇಲಿರುವ ವ್ಯೂಪಾಯಿಂಟ್, ಭಿತ್ತಿಚಿತ್ರಗಳ ಮೂಲಕ ಪರಶುರಾಮನ ಬಗ್ಗೆ ಬಿಡಿಸಲಾದ ಭಿತ್ತಿಚಿತ್ರಗಳನ್ನು ಜೋಡಿಸಿರುವ ಹಜಾರ ಮತ್ತು ರೆಸ್ಟೋರೆಂಟ್ ಕೂಡಾ ಹೊಂದಿರಲಿದೆ.

Share Post