DistrictsPolitics

ಕೋಲಾರದಲ್ಲಿ ಐಶಾರಾಮಿ ಮನೆ ಬಾಡಿಗೆ ಪಡೆದ ಸಿದ್ದರಾಮಯ್ಯ: ಬಾಡಿಗೆ ಎಷ್ಟು ಗೊತ್ತಾ..?

ಕೋಲಾರ; ಮಾಜಿ ಸಿ ಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಹಿನ್ನೆಲೆ ಕ್ಷೇತ್ರದಲ್ಲಿ ಐಶಾರಾಮಿ ಮನೆಯನ್ನ ಬಾಡಿಗೆಗೆ ಪಡೆದಿದ್ದಾರೆ.

ಕಳೆದ 10 ದಿನಗಳಿಂದ ಮನೆ ಹುಡುಕಾಟ ನಡೆಸ್ತಿದ್ದ ಸಿದ್ದರಾಮಯ್ಯಗೆ ಕೊನೆಗೂ ಭರ್ಜರಿಯಾದ ಐಶಾರಾಮಿ ಮನೆ ಸಿಕ್ಕಿದೆ. ಕೋಲಾರದ ಹೊರವಲಯದ ಕೋಗಿಲಹಳ್ಳಿ ಗ್ರಾಮದಲ್ಲಿರುವ ಕುರುವರ ಪೇಟೆ ನಿವಾಸಿ ಶಂಕರ್ ಎಂಬುವರ ಮನೆಯನ್ನ ಬಾಡಿಗೆ ಗೆ ಪಡೆಯಲಾಗಿದೆ. ಮನೆ ಮಾಲಿಕ ಶಂಕರ್ ಮೂಲತಃ ಸಿದ್ದರಾಮಯ್ಯ ಅಭಿಮಾನಿಯಾಗಿದ್ದು ಸಿದ್ದರಾಮಯ್ಯನವರಿಗೆ ಮನೆ ಬಾಡಿಗೆ ನೀಡಲು ಒಪ್ಪಿದ್ದಾರೆ.

ಸುಮಾರು ಒಂದು ಎಕರೆ ವಿಶಾಲ ಪ್ರದೇಶದ ತೋಟದಲ್ಲಿರುವ ಐಶಾರಾಮಿ ಮನೆಯನ್ನ 2018 ರಲ್ಲಿ ನಿರ್ಮಾಣ ಮಾಡಲಾಗಿತ್ತು. ವಾಸ್ತುಪ್ರಕಾರ ಪೂರದವ ಭಾಗಿಲು ಇರುವ ಮನೆ ಇದಾಗಿದ್ದು, 56×46 ಅಗಲ ವಿಸ್ತೀರ್ಣವಿದೆ. ನೆಲ ಮಹಡಿ ಮನೆಯಲ್ಲಿ ವಿಶಾಲವಾದ ಹಾಲ್ , ಡೈನಿಂಗ್ ಹಾಲ್, ಸುಸಜ್ಜಿತ ಎರಡು ರೂಂ, ಮನೆಯ ಮೊದಲ ಅಂತಸ್ತಿನಲ್ಲಿ ಒಂದು ರೂಂ ಇದೆ. ಮನೆಯ ಸುತ್ತಲೂ ತೋಟಗಾರಿಕೆ ಬೆಳೆಗಳಾದ ತೆಂಗು ಅಡಿಕೆ ಇದ್ದು ವಾತಾವರಣ ತಂಪಾಗಿದೆ. 20 ಗುಂಟೆ ಖಾಲಿ ಸ್ಥಳ ಇದ್ದು ಸಭೆ ಸಮಾರಂಭ ನಡೆಸಲು ಸೂಕ್ತವಾಗಿದೆ. ಮನೆ ಸುತ್ತ ವಿಸ್ತಾರವಾದ ಕಾಪೌಂಡ್ ಇದ್ದು ಭದ್ರತೆ ಇದೆ, ಮನೆ ಬಾಡಿಗೆ ಹಣ ಎಷ್ಟು ಎಂಬುದರ ಬಗ್ಗೆ ಸದ್ಯಕ್ಕೆ ತಿಳಿದು ಬಂದಿಲ್ಲ.

ಸಿದ್ದರಾಮಯ್ಯ ಹೇಳಿದಂತೆ ರಾಷ್ಟ್ರೀಯ ಹೆದ್ದಾರಿ 75 ರ ಪಕ್ಕದ ಸರ್ವಿಸ್ ರಸ್ತೆಯಲ್ಲಿಯೇ ಮನೆ ಸಿಕ್ಕಿದ್ದು ಓಡಾಡಲು ಅನುಕೂಲಕರವಾಗಿದೆ. ಕೈ ಕಾರ್ಯಕರ್ತರು ಮನೆಯನ್ನ ಹುಡಕಿದ್ದು ಇಂದು ಸಿದ್ದರಾಮಯ್ಯ ಮನೆಯನ್ನ ವಿಕ್ಷಣೆ ಮಾಡಲಿದ್ದಾರೆ. ಬಹುತೇಕ ಇದೆ ಮನೆಯನ್ನ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

Share Post