ಕಳಚಿಕೊಂಡ ತುಂಗಭದ್ರಾ ಡ್ಯಾಮ್ ಗೇಟ್ ಲಿಂಕ್!; ಭಾರೀ ಆತಂಕ!
ಕೊಪ್ಪಳ; ತುಂಗಭದ್ರಾ ಜಲಾಶಯದ 19ನೇ ಗೇಟ್ ಲಿಂಕ್ ತುಂಡಾಗಿದ್ದು, ಭಾರೀ ಅವಾಂತರ ಸೃಷ್ಟಿಯಾಗಿದೆ.. ಕಳೆದ ರಾತ್ರಿ ಈ ಲಿಂಕ್ ತುಂಡಾಗಿದೆ.. ಇದರಿಂದಾಗಿ 1 ಲಕ್ಷ ಕ್ಯೂಸೆಕ್ ನೀರು ವ್ಯರ್ಥವಾಗಿ ಹೊರಹೋಗುತ್ತಿದೆ.. ಭಾರೀ ಪ್ರಮಾಣದಲ್ಲಿ ನೀರು ಹೊರಹೋಗುತ್ತಿರುವುದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.. ಜೊತೆಗೆ ತುಂಬಿರುವ ಡ್ಯಾಮ್ ಖಾಲಿಯಾಗುವ ಭೀತಿ ಎದುರಾಗಿದೆ..
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನ ಬಳಿ ಇರುವ ತುಂಗಭದ್ರಾ ಜಲಾಶಯದಲ್ಲಿ ಈ ಘಟನೆ ನಡೆದಿದೆ.. ರಾತ್ರಿಯಿಂದಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.. ಶಾಸಕ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಜಲಾಶಯಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.. ಅನಂತರ ಮಾತನಾಡಿದ ಸಚಿವರು, ಒಳಹರಿವು ಹೆಚ್ಚಾಗಿದೆ.. ಹೀಗಾಗಿ ಕೆಳಗಿಳಿದು ನೋಡೋದಕ್ಕೆ ಸಾಧ್ಯವಾಗುತ್ತಿಲ್ಲ.. ಡ್ಯಾಂನಲ್ಲಿ 20 ಅಡಿ ನೀರು ಖಾಲಿಯಾದರಷ್ಟೇ ಸಮಸ್ಯೆ ಏನು ಅನ್ನೋದು ಅರ್ಥವಾಗುತ್ತದೆ.. ಇದರಿಂದಾಗಿ ಡ್ಯಾಮ್‌ನಲ್ಲಿರುವ ನೀರು ಖಾಲಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ..
ಡ್ಯಾಂನ 32 ಗೇಟ್ ಪೈಕಿ 28 ಗೇಟ್ಗಳನ್ನು ತೆರಯಲಾಗಿದೆ. ನೀರು ಕಡಿಮೆಯಾದ ಮೇಲೆ ಸಮಸ್ಯೆಗೆ ಪರಿಹಾರ ಹುಡುಕಲಾಗುತ್ತದೆ.. ಡ್ಯಾಂ ಸುತ್ತಮುತ್ತ ಬಿಗ ಬಂದೋಬಸ್ತ್ ಏರ್ಪಡಿಸಲಾಗಿದ್ದು, ನದಿ ಪಾತ್ರಕ್ಕೆ ಬರದಂತೆ ಜನರಿಗೆ ಎಚ್ಚರಿಕೆ ನೀಡುತ್ತಾ ಡಂಗುರ ಸಾರಿಸಲಾಗುತ್ತಿದೆ..