ವಯಸ್ಸು 50 ದಾಟಿದರೂ ಯುವಕರಂತೆ ಕಾಣಬೇಕಾ..?; ಈ ಟಿಪ್ಸ್ ಫಾಲೋ ಮಾಡಿ
ಪ್ರತಿಯೊಬ್ಬರೂ ಕೂಡಾ ಎಷ್ಟೇ ವಯಸ್ಸಾದರೂ ಸುಂದರವಾಗಿ ಕಾಣಲು ಬಯಸುತ್ತಾರೆ.. ಅದಕ್ಕಾಗಿ ಹಲವಾರು ಪ್ರಾಡಕ್ಟ್‌ಗಳನ್ನು ಬಳಸುತ್ತಿರುತ್ತಾರೆ.. ಅದ್ರಲ್ಲೂ ಮಹಿಳೆಯರು ವಯಸ್ಸಾದಂತೆ ಮುಖದ ಮೇಲೆ ಉಂಟಾಗುವ ಸುಕ್ಕುಗಳನ್ನು ಮರೆಮಾಚಲು ನಾನಾ ಕಸರತ್ತು ಮಾಡುತ್ತಿರುತ್ತಾರೆ.. ಆದ್ರೆ ನಮ್ಮ ಆಹಾರಕ್ರಮದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡರೆ 50 ವರ್ಷ ವಯಸ್ಸಾದರೂ ಮುಖ ಸುಕ್ಕುಗಟ್ಟುವುದಿಲ್ಲ.. ದೀರ್ಘಕಾಲ ಯುವಕರಂತೆ ಕಾಣಬಹುದು.. ಈ ಬಗ್ಗೆ ತಿಳಿಯೋಣ ಬನ್ನಿ..
ಆರೋಗ್ಯಕರ ಆಹಾರ ಸೇವನೆ;
ಜಂಕ್ ಫುಡ್ ಹಾಗೂ ನಾಲಿಗೆ ಚಪಲಕ್ಕೆ ಅಂತ ಅನಾರೋಗ್ಯಕರ ಆಹಾರ ಸೇವನೆಯಿಂದ ಬಹುಬೇಗ ಮುದುಕರಂತೆ ಕಾಣುತ್ತಿದ್ದೇವೆ.. ಆದ್ರೆ ಆರೋಗ್ಯಕರ ಆಹಾರ ಸೇವನೆ ಮಾಡಿದರೆ ವಯಸ್ಸಾದರೂ ನಮ್ಮ ಮುಖದ ಮೇಲಿನ ಚರ್ಮ ಯಾವ ಕಾರಣಕ್ಕೂ ಸುಕ್ಕುಗಟ್ಟುವುದಿಲ್ಲ.. ದಿನವೂ ಹಲವು ರೀತಿಯ ಹಣ್ಣುಗಳು, ಹಸಿರು ತರಕಾರಿಗಳು, ಒಣ ಹಣ್ಣುಗಳು, ಬೀಜಗಳು, ಡೈರಿ ಉತ್ಪನ್ನಗಳನ್ನು ತೆಗೆದುಕೊಳ್ಳಬೇಕು.. ಅದರಲ್ಲೂ 30 ವರ್ಷದ ನಂತರ ಪ್ರತಿನಿತ್ಯ ಪೌಷ್ಟಿಕ ಆಹಾರ ಸೇವಿಸಬೇಕು. ನೀವು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿದರೆ, ನಿಮ್ಮ ಚರ್ಮ ಒಳಗಿನಿಂದ ಆರೋಗ್ಯಕರವಾಗಿರುತ್ತದೆ. ವಯಸ್ಸಾಗುವ ಲಕ್ಷಣಗಳು ಬೇಗ ಕಾಣಿಸುವುದಿಲ್ಲ.
ಧೂಮಪಾನ ಮತ್ತು ಮದ್ಯಪಾನ ಬೇಡ;
ಮದ್ಯಪಾನ ಮತ್ತು ಧೂಮಪಾನ ಮಾಡುವುದರಿಂದ ನಿಮ್ಮ ದೇಹದ ವಯಸ್ಸು ಬಹುಬೇಗ ಹೆಚ್ಚಾಗುತ್ತದೆ.. ಚಿಕ್ಕ ವಯಸ್ಸಿಗೇ ಮುದುಕರಂತೆ ಕಾಣುತ್ತೀರಿ.. ಅತಿಯಾಗಿ ಕುಡಿಯುವವರಲ್ಲಿ ವಯಸ್ಸಾದ ಚಿಹ್ನೆಗಳು ವೇಗವಾಗಿ ಕಾಣಿಸಿಕೊಳ್ಳುತ್ತವೆ.. ಇದು ತೂಕ ಸಂಬಂಧಿತ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ.
ಒತ್ತಡವೂ ಅಪಾಯಕಾರಿ;
ಅತಿಯಾದ ಮಾನಸಿಕ ಒತ್ತಡ ಮತ್ತು ಆತಂಕ ಕೂಡ ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ.. ಒಂದು ರೀತಿಯಲ್ಲಿ ಒತ್ತಡ ಅನ್ನೋದು ಮೂಕ ಕೊಲೆಗಾರನಂತೆ. ಇದು ನಿಮ್ಮನ್ನು ವಯಸ್ಸಾದವರಂತೆ ಮಾಡುತ್ತದೆ.. ನೀವು ಹೆಚ್ಚು ಕಾಲ ಯುವಕರಾಗಿರಲು ಬಯಸಿದರೆ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಿ.
ಸಾಕಷ್ಟು ನಿದ್ರೆ ಮಾಡಿ;
ಆರೋಗ್ಯಕರ ದೇಹ ಮತ್ತು ಚರ್ಮಕ್ಕಾಗಿ ನಿದ್ರೆ ಕೂಡಾ ಮುಖ್ಯವಾಗಗುತ್ತದೆ.. ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.. ನಿದ್ರೆಯ ಕೊರತೆಯು ಸಹ ಒತ್ತಡಕ್ಕೆ ಕಾರಣವಾಗಬಹುದು.. ಉತ್ತಮ ನಿದ್ರೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಿದ್ರೆಯ ಕೊರತೆ ಹೆಚ್ಚಾಗುತ್ತಿದ್ದು, ಅದನ್ನು ಹೋಗಲಾಡಿಸಬೇಕಿದೆ..
ದೈನಂದಿನ ವ್ಯಾಯಾಮ;
ನೀವು ಫಿಟ್ ಆಗಿರಲು ಬಯಸಿದರೆ ಪ್ರತಿದಿನ ವ್ಯಾಯಾಮ ಮಾಡಿ. ಸಕ್ರಿಯ ಜೀವನಶೈಲಿಯು ನಿಮ್ಮನ್ನು ದೀರ್ಘಕಾಲದವರೆಗೆ ಫಿಟ್ ಮತ್ತು ಯಂಗ್ ಆಗಿ ಇರಿಸಬಹುದು. ನೀವು ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಜಿಮ್‌ಗೆ ಹೋಗಲು ಸಮಯವಿಲ್ಲದಿದ್ದರೆ, ನೀವು ಮನೆಯಲ್ಲಿಯೂ ಕೆಲವು ಲಘು ವ್ಯಾಯಾಮಗಳನ್ನು ಮಾಡಬಹುದು. ವಾಕಿಂಗ್, ಯೋಗ, ಸೈಕ್ಲಿಂಗ್ ಮೂಲಕವೂ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳಬಹುದು.