ರಾಮದಾಸ್ ಅವರ ಹಣದಿಂದ ನನ್ನ ಸುಟ್ಟುಹಾಕಬಹುದು; ಪ್ರತಾಪ ಸಿಂಹ ತಿರುಗೇಟು
ಮೈಸೂರು; ಶಾಸಕ ರಾಮದಾಸ್ ಅವರ ಬಳಿಯಿರುವ ಹಣದಿಂದ ನನ್ನನ್ನು ಸುಟ್ಟು ಹಾಕಬಹುದು ಬೇಕಾದರೆ, ಆದ್ರೆ ನಾವ್ಯಾರು ಅವರಿಗೆ ಕಿರುಕುಳ ಕೊಡಲು ಎಂದು ಸಂಸದ ಪ್ರತಾಪ ಸಿಂಹ ಪ್ರತಿಕ್ರಿಯಿಸಿದ್ದಾರೆ. ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಶಾಸಕ ರಾಮದಾಸ್ ಬೆಳಗ್ಗೆ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದರು, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮೈಸೂರಿಗೆ ಬಂದಿದ್ದಾಗ ರಾಮದಾಸ್ ಅವರ ಬೆನ್ನು ತಟ್ಟಿದ್ದರು. ಪಕ್ಷದ ಅತ್ಯಂತ ಹಿರಿಯ ನೇತಾರ ಅವರು ಎಂದು ಹೇಳಿದಾರೆ.
ಪಕ್ಷ ಬಿಡಿಸಲು ನನಗೆ ಕಿರುಕುಳ ನೀಡಲಾಗುತ್ತದೆ ಎಂದು ರಾಮದಾಸ್ ಅವರು ಯಾವ ಕಾರಣಕ್ಕೆ ಹೇಳಿದ್ದಾರೋ ಗೊತ್ತಿಲ್ಲ. ಅವರಿಗೆ ಕಿರುಕುಳ ಕೊಡುವಷ್ಟು ನಾವು ದೊಡ್ಡವರಾಗಿ ಬೆಳೆದಿಲ್ಲ. ಅವರ ಬಳಿ ಇರುವ ಹಣದಿಂದ ನನ್ನನ್ನು ಸುಟ್ಟುಹಾಕಬಹುದು. ಅಷ್ಟೊಂದು ತಾಕತ್ತಿರುವವರಿಗೆ ಕಿರುಕುಳ ಕೊಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.
ಬಸ್ ನಿಲ್ದಾಣದ ಗೋಪುರ ಗುಂಬಜ್ ರೀತಿ ಕಾಣುತ್ತಿದೆ. ಇದನ್ನು ಕೆಡವಿದರೆ ಟಿಪ್ಪು ಅನುಯಾಯಿಗಳಿಗೆ ಅನ್ಯಾವಾಗಬಹುದು. ಶಿವಾಜಿ ಮಹಾರಾಜರ ಅನುಯಾಯಿಗಳಿಗಲ್ಲ. ಹೀಗಾಗಿ ಗುಂಬಜ್ ಮಾದರಿ ಬಸ್ ಶೆಲ್ಟರ್ ತೆರವಿನಿಂದ ಅವರಿಗೆ ನೋವಾಗುತ್ತದೆ ಎಂಬುದನ್ನು ನಂಬಲಾರೆ ಎಂದೂ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.