ಮೇಕೆದಾಟು ಪಾದಯಾತ್ರೆ : ಸಭೆ ಬಳಿಕ ಪಾದಯಾತ್ರೆ ಭವಿಷ್ಯ ತಿಳಿಯಲಿದೆ
ರಾಮನಗರ : ಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್‌ನವರ ಪಾದಯಾತ್ರೆ ಪ್ಲಾನ್ ಪ್ರಕಾರ ಇಂದು ರಾಮನಗರದಿಂದ ಶುರು ಆಗಬೇಕಿದೆ. ಆದರೆ ಇದಕ್ಕೂ ಮುನ್ನ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಬೆಳಗ್ಗೆ 10ಕ್ಕೆ ರಾಮನಗರದ ಕೆಪಿಸಿಸಿ ಕಚೇರಿಯಲ್ಲಿ ಮೀಟಿಂಗ್ ಮಾಡಲಿದ್ದಾರೆ. ಈ ಸಭೆಯ ನಂತರವಷ್ಟೇ ಪಾದಯಾತ್ರೆಯನ್ನು ನಡೆಸುವುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
ರಾಮನಗರ ಸರ್ಕಲ್‌ನಲ್ಲಿ 1500 ಪೊಲೀಸರನ್ನು ನಿಯೋಜಿಸಲಾಗಿದ್ದು, ಒಂದು ವೇಳೆ ಪಾದಯಾತ್ರೆ ಮಾಡುವ ನಿರ್ಧಾರಕ್ಕೆ ಕಾಂಗ್ರೆಸ್ ಬಂದರೆ ಅದನ್ನು ತಡೆಯಲು ತಯಾರಿ ನಡೆಸಿಕೊಳ್ಳಲಾಗಿದೆ ಎಂಬ ಮಾಹಿತಿಗಳು ಕೇಳಿ ಬರುತ್ತಿದೆ.
ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಡಿ ಕೆ ಶಿವಕುಮಾರ್ ತಾವೊಬ್ಬರೇ ಆದರೂ ಸರಿ ಪಾದಯಾತ್ರೆ ಮಾಡ್ತೇನೆ ಎಂಬ ಮಾತುಗಳನ್ನು ಆಡಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಚೆಲುವರಾಯ ಸ್ವಾಮಿ ಕೂಡ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಡಿ ಕೆ ಸುರೇಶ್ ಅವರು ಕೂಡ ಇದನ್ನೇ ಹೇಳಿದ್ದಾರೆ.