DistrictsPolitics

ಲಕ್ಷ್ಮಣ ಸವದಿ ಸೆಳೆಯಲು ಕಾಂಗ್ರೆಸ್‌ ಪ್ರಯತ್ನ; ಏನಿದು ತಂತ್ರಗಾರಿಕೆ..?

ಬೆಂಗಳೂರು; ಅಥಣಿ ಟಿಕೆಟ್‌ ವಿಚಾರವಾಗಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ನಡುವೆ ಹಲವು ದಿನಗಳಿಂದ ಟಾಕ್‌ ವಾರ್‌ ನಡೆಯುತ್ತಿದೆ. ಅಥಣಿ ಕ್ಷೇತ್ರದ ಟಿಕೆಟ್‌ಗಾಗಿ ಸವದಿ ಹೈಕಮಾಂಡ್‌ ಮುಂದೆ ಲಾಬಿ ನಡೆಸಿದ್ದಾರೆ. ಆದ್ರೆ ರಮೇಶ್‌ ಜಾರಕಿಹೊಳಿ ಮಾತ್ರ ಅಥಣಿ ಕ್ಷೇತ್ರದ ಟಿಕೆಟ್‌ನ್ನು ಮಹೇಶ್‌ ಕುಮಟಳ್ಳಿಗೇ ನೀಡಬೇಕು ಅಂತ ಪಟ್ಟು ಹಿಡಿದಿದ್ದಾರೆ. ಕುಮಟಳ್ಳಿಗೆ ಟಿಕೆಟ್‌ ನೀಡದಿದ್ದರೆ ನಾನೂ ಸ್ಪರ್ಧಿಸುವುದಿಲ್ಲ ಅಂತ ರಮೇಶ್‌ ಜಾರಕಿಹೊಳಿ ಬೆದರಿಕೆ ಕೂಡಾ ಹಾಕುತ್ತಿದ್ದಾರೆ. ಈ ನಡುವೆ ಇದರ ಲಾಭವನ್ನು ಕಾಂಗ್ರೆಸ್‌ ಪಕ್ಷ ಪಡೆಯಲು ಮುಂದಾಗಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯೋದಕ್ಕೆ ಕಾಂಗ್ರೆಸ್‌ ಸಿದ್ಧತೆ ನಡೆಸಿದಂತೆ ಕಾಣುತ್ತಿದೆ.

ರಮೇಶ್‌ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಸಮರವಿದೆ. ರಮೇಶ್‌ ಜಾರಕಿಹೊಳಿ ಪ್ರಾಬಲ್ಯ ಕಡಿಮೆ ಮಾಡೋದಕ್ಕಾಗಿ ಡಿಕೆಶಿ ಕಸರತ್ತು ಮಾಡಿದ್ದಾರೆ. ಈ ನಡುವೆ ಅಥಣಿ ಟಿಕೆಟ್‌ ವಿಚಾರದಲ್ಲಿ ಸವದಿ ಹಾಗೂ ರಮೇಶ್‌ ಜಾರಕಿಹೊಳಿ ವಿರುದ್ಧ ಫೈಟ್‌ ನಡೆದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್‌ ಲಕ್ಷ್ಮಣ ಸವದಿಯವರನ್ನು ಕಾಂಗ್ರೆಸ್‌ ಸೇಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.

ರಮೇಶ್‌ ಜಾರಕಿಹೊಳಿ ಬಿಗಿಪಟ್ಟು ಹಿಡಿದಿರುವುದರಿಂದ  ಅಥಣಿ ಕ್ಷೇತ್ರದಲ್ಲಿ ಕುಮಟಳ್ಳಿಗೆ ಟಿಕೆಟ್‌ ಸಿಗೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಹೀಗಾಗಿ, ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್‌ ನಾಯಕರು ಸಂಪರ್ಕಿಸುತ್ತಿದ್ದಾರೆ. ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನ ಹಲವು ನಾಯಕರು ಈಗಾಗಲೇ ಲಕ್ಷ್ಮಣ ಸವದಿಯವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರಂತೆ. ಇನ್ನು ಸವದಿಯವರು ಕೂಡಾ ಕೊಪ್ಪಳ ಕಾಂಗ್ರೆಸ್​ ಶಾಸಕರೊಬ್ಬರ ಜೊತೆ ಕಾಂಗ್ರೆಸ್‌ ಸೇರುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಲಕ್ಷ್ಮಣ ಅವದಿಯವರನ್ನು ಒಪ್ಪಿಸಿ  ಸೋನಿಯಾ, ರಾಹುಲ್ ಸಮ್ಮುಖದಲ್ಲೇ ಕಾಂಗ್ರೆಸ್‌ಗೆ ಬರಮಾಡಿಕೊಳ್ಳಲು ಕಾಂಗ್ರೆಸ್‌ ನಾಯಕರು ಕಸರತ್ತು ಮಾಡುತ್ತಿದ್ದಾರೆ. ಇನ್ನು ಸವದಿಯವರು ಕೂಡಾ ಎರಡು ದಿನ ಕಾಯಲು ನಿರ್ಧರಿಸಿದ್ದಾರೆ. ಬಿಜೆಪಿ ಪಟ್ಟಿ ರಿಲೀಸ್‌ ಆದ ಮೇಲೆ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಅಥಣಿ ಕ್ಷೇತ್ರದಲ್ಲಿ ಬಿಜೆಪಿಯಿಂದ ತಮಗೆ ಟಿಕೆಟ್‌ ಸಿಗದಿದ್ದರೆ ಕಾಂಗ್ರೆಸ್‌ಗೆ ಹಾರಲು ಸವದಿ ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಇದನ್ನು ತಿಳಿದೇ ಬಿಜೆಪಿ ನಾಯಕರು ಅಥಣಿ ಕ್ಷೇತ್ರಕ್ಕೆ ಟಿಕೆಟ್‌ ಫೈನಲ್‌ ಮಾಡಲಾಗದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಮೊದಲ ಪಟ್ಟಿಯಲ್ಲಿ ಅಥಣಿ ಕ್ಷೇತ್ರದ ಟಿಕೆಟ್‌ ಘೋಷಣೆಯಾವುದು ಅನುಮಾನ ಎಂದು ಹೇಳಲಾಗುತ್ತಿದೆ.

 

Share Post