ಅಶ್ಲೀಲ ವಿಡಿಯೋ ತೋರಿಸಿ ಮಹಿಳೆಗೆ ಬ್ಲ್ಯಾಕ್‌ಮೇಲ್; ಆರೋಪಿ ಅರೆಸ್ಟ್
ಶಿವಮೊಗ್ಗ; ಮೊಬೈಲ್ ಅಪ್ಲಿಕೇಷನ್ ಒಂದರ ಮೂಲಕ ಪರಿಚಯ ಮಾಡಿಕೊಂಡು, ಮಹಿಳೆ ಅಶ್ಲೀಲ ವಿಡಿಯೋ ಪಡೆದು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಶಿರಾಳಕೊಪ್ಪ ಬಳಿಯ ಗ್ರಾಮವೊಂದರ ಮಹಿಳೆಯೊಬ್ಬರಿಗೆ ಮೊಬೈಲ್ ಆಪ್ ಒಂದರಲ್ಲಿ ರೋಜರ್ ರಾಜಾ ಎಂಬ ಹೆಸರಿನ ವ್ಯಕ್ತಿ ಪರಿಚಯವಾಗಿದ್ದ. ಇದು ಸಲುಗೆಯಾಗಿ ಮಾರ್ಪಟ್ಟಿತ್ತು. ಫೋನ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು. ಇದರಲ್ಲಿ ಇಬ್ಬರೂ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಮಹಿಳೆ ಆತನನ್ನು ನಂಬಿ ಬೆತ್ತಲೆ ವಿಡಿಯೋಗಳನ್ನು ಕಳುಹಿಸಿಕೊಟ್ಟಿದ್ದಳು. ಈ ವಿಡಿಯೋಗಳನ್ನಿಟ್ಟುಕೊಂಡ ಆರೋಪಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಇದ್ರಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಿಹಾರದ ಚಕ್ಲ ಗ್ರಾಮದ ರೋಜರ್ ರಾಜಾನನ್ನು (22) ಬಂಧಿಸಿದ್ದಾರೆ. ಅಲ್ಲದೇ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.