DistrictsHealth

ಬಚ್ಚಲು ಮನೆ ಬಳಿ ಇದ್ದಾಗ ಸಿಡಿಲಾಘಾತ; ಡಿಗ್ರಿ ವಿದ್ಯಾರ್ಥಿ ದಾರುಣ ಸಾವು!

ಉಡುಪಿ; ರಾಜ್ಯದಲ್ಲಿ ಮಳೆ ಅಬ್ಬರ ಶುರುವಾಗಿದೆ.. ಇದರ ಜೊತೆಗೆ ಸಿಡಿಲಿನಿಂದಾಗಿ ಹಲವು ಅನಾಹುತಗಳು ನಡೆಯುತ್ತಿವೆ.. ನಿನ್ನೆ ಸಂಜೆ ಮನೆಯ ಬಳಿ ನಿಂತಿದ್ದ ಬಿಸಿಎ ವಿದ್ಯಾರ್ಥಿ ಸಿಡಿಲಿಗೆ ಬಲಿಯಾಗಿದ್ದಾನೆ.. ಬಚ್ಚಲ ಮನೆಯ ಬಳಿ ನಿಂತಿದ್ದಾಗ ಸಿಡಿಲಾಘಾತದಿಂದ ವಿದ್ಯಾರ್ಥಿ ರಕ್ಷಿತ್‌ ಪೂಜಾರಿ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ..

ಉಡುಪಿ ಜಿಲ್ಲೆ ಶಿರ್ವ ಪಂಚಾಯ್ತಿಗೆ ಸೇರಿದ ಮಾಣಿಬೆಟ್ಟು ಎಂಬಲ್ಲಿ ಈ ದುರ್ಘಟನೆ ನಡೆದಿದೆ.. ಶಿರ್ವ ಮಾಣೆಬೆಟ್ಟ ನಿವಾಸಿ ರಕ್ಷಿತ್‌ ಪೂಜಾರಿ ಸಾವನ್ನಪ್ಪಿದ್ದಾನೆ.. ನಿನ್ನೆ ರಾತ್ರಿ ಮಿಂಚು, ಸಿಡಿಲುನೊಂದಿಗೆ ಮಳೆ ಸುರಿಯುತ್ತಿತ್ತು.. ಈ ವೇಳೆ ರಕ್ಷಿತ್‌ ಪೂಜಾರಿ ಮನೆಯ ಬಚ್ಚಲು ಬಳಿ ನಿಂತಿದ್ದ.. ಈ ವೇಳೆ ಆತನಿಗೆ ಸಿಡಿಲು ಬಡಿದಿದೆ.. ಕೂಡಲೇ ಅವನು ಕುಸಿದುಬಿದ್ದಿದ್ದಾನೆ..

ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರಕ್ಷಿತ್‌ ಪೂಜಾರಿ ಸಾವನ್ನಪ್ಪಿದ್ದಾನೆ.. ರಕ್ಷಿತ್‌ ಪೂಜಾರಿ ಶಿರ್ವದ MSRS ಕಾಲೇಜಿನಲ್ಲಿ 2ನೇ ವರ್ಷದ BCA ಓದುತ್ತಿದ್ದಾನೆ ಎಂದು ತಿಳಿದುಬಂದಿದೆ..

 

Share Post