ಕೋಲಾರದಲ್ಲಿ ಕೊತ್ತೂರು ಮಂಜು ಗೆಲ್ಲೋದಕ್ಕೆ ಸಾಧ್ಯನಾ..?; ಅವರ ಮುಂದಿರೋ ಚಾಲೆಂಜ್ಗಳೇನು..?
ಕೊತ್ತೂರು ಮಂಜು… ಕೋಲಾರ ಜಿಲ್ಲೆಯಲ್ಲಿ ಫೈರ್ ಬ್ರಾಂಡ್… ನಾನು ಕೋಲಾರ ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲಿ ಬೇಕಾದ್ರೂ ನಿಲ್ತೀನಿ ಅಂತಿದ್ದ ನಾಯಕ… ಆದ್ರೆ ಈಗ್ಯಾಕೋ ಕೊಂಚ ಸಪ್ಪಗಾದಂತೆ ಕಾಣ್ತಿದೆ… ಕೇಳದೇ ಇದ್ದರೂ ಕೊತ್ತೂರು ಮಂಜುಗೆ ಕಾಂಗ್ರೆಸ್ ಹೈಕಮಾಂಡ್ ಕೋಲಾರ ಕ್ಷೇತ್ರ ನೀಡಿದೆ… ಸಿದ್ದರಾಮಯ್ಯಗೆ ಬದಲಾಗಿ ಕೋಲಾರದಲ್ಲಿ ಕೊತ್ತೂರು ಮಂಜು ಅಭ್ಯರ್ಥಿ… ಇಲ್ಲಿ ಜೆಡಿಎಸ್ನಿಂದ ಸಿಎಂಆರ್ ಶ್ರೀನಾಥ್ ಅಖಾಡದಲ್ಲಿದ್ದಾರೆ… ಬಿಜೆಪಿಯಿಂದ ವರ್ತೂರ್ ಪ್ರಕಾಶ್ ತೊಡೆ ತಟ್ತಾ ಇದ್ದಾರೆ… ಸಿಎಂಆರ್ ಶ್ರೀನಾಥ್, ವರ್ತೂರು ಪ್ರಕಾಶ್ ಕೋಲಾರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದವರು.. ಆದ್ರೆ ಕೊತ್ತೂರು ಮಂಜುಗೆ ಕೋಲಾರ ಹೊಸದು… ನಾಯಕರೆಲ್ಲಾ ಪರಿಚಯ ಇದ್ದರೂ ಜನಕ್ಕೆ ಕೊತ್ತೂರು ಅಷ್ಟಾಗಿ ಗೊತ್ತಿಲ್ಲ… ಇನ್ನು ಸಿದ್ದರಾಮಯ್ಯಗೇ ಸೋಲಿನ ಭಯ ಬಂದಿರುವಾಗ ಕೊತ್ತೂರು ಇಲ್ಲಿ ಬಂದು ಗೆಲ್ತಾರಾ ಅನ್ನೋ ಮಾತುಗಳೂ ಇವೆ… ಈ ನಡುವೆಯೂ ಕೊತ್ತೂರು ನಾನು ಗೆಲ್ತೀನಿ.. ನಾನು ಗೆಲ್ತೀನಿ ಅಂತಿದ್ದಾರೆ…
ಅಂದಹಾಗೆ, ಬಿಜೆಪಿ, ಜೆಡಿಎಸ್ ಎರಡನ್ನು ಮಾತ್ರ ಎದುರಿಸೋ ಹಾಗಿದ್ದಿದ್ದರೆ ಕೊತ್ತೂರು ಏನೋ ಸರ್ಕಸ್ ಮಾಡಿ ಗೆದ್ದುಬಿಡುತ್ತಿದ್ದರೇನೋ… ಆದ್ರೆ ಕೊತ್ತೂರು ಮಂಜು ತಮ್ಮದೇ ಪಕ್ಷದೊಳಗಿನವರ ಜೊತೆಗೂ ಗುದ್ದಾಡಬೇಕಾದ ಪರಿಸ್ಥಿತಿ… ಕೊತ್ತೂರಿಗೆ ಕಾಂಗ್ರೆಸ್ ಪಕ್ಷದಲ್ಲೇ ವಿರೋಧವಿದೆ… ಇದಕ್ಕೆ ಲೋಕಸಭಾ ಚುನಾವಣೆ… ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪರನ್ನು ಸೋಲಿಸಲು ಕೊತ್ತೂರು ಮಂಜು ಪಣ ತೊಟ್ಟಿದ್ದರು… ಬಹಿರಂಗವಾಗಿಯೇ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಪರ ಪ್ರಚಾರ ಮಾಡಿದ್ದರು… ಸತತವಾಗಿ ಏಳೆಂಟು ಬಾರಿ ಗೆದ್ದಿದ್ದ ಕೆ.ಹೆಚ್.ಮುನಿಯಪ್ಪ ಸೋಲಿಗೆ ಕಾರಣರಾದವರಲ್ಲಿ ಕೊತ್ತೂರು ಮಂಜು ಕೂಡಾ ಒಬ್ಬರು… ಈಗ ಅದೇ ಕೊತ್ತೂರು ಮಂಜು ಕಾಂಗ್ರೆಸ್ನಲ್ಲಿದ್ದಾರೆ.. ಕೆ.ಹೆಚ್.ಮುನಿಯಪ್ಪ ಕೂಡಾ ಕಾಂಗ್ರೆಸ್ನಲ್ಲಿದ್ದಾರೆ… ಮುನಿಯಪ್ಪ ಬೆಂಬಲಿಗರು ಕೋಲಾರ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.. ಚುನಾವಣೆಯಲ್ಲಿ ಅವರ ನಿಲುವೇನು ಅನ್ನೋದು ಪ್ರಮುಖ ಪಾತ್ರ ವಹಿಸುತ್ತೆ… ನಮ್ಮ ನಾಯಕನನ್ನು ಸೋಲಿಸಿದರು ಅಂತ ಅವರೆಲ್ಲಾ ಬೇರೆಯವರಿಗೆ ಮತ ಚಲಾಯಿಸಿದರೆ ಕೊತ್ತೂರು ಮಂಜುಗೆ ಕಷ್ಟ ಕಷ್ಟ… ಹೀಗಾಗಿಯೇ ಕೊತ್ತೂರು ಮಂಜು ತಲೆಬಿಸಿ ಮಾಡಿಕೊಂಡಿದ್ದಾರೆ…
ಇನ್ನು ಸಿದ್ದರಾಮಯ್ಯಗೆ ಕೂಡಾ ಇದೇ ತರದ ಒಳ ಏಟು ಬೀಳುವ ಅಪಾಯವಿತ್ತು… ೨೦೧೩ರಲ್ಲಿ ಕೊರಟೆಗೆರೆಯಲ್ಲಿ ಪರಮೇಶ್ವರ್ ಅವರನ್ನು ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಕೆ.ಹೆಚ್.ಮುನಿಯಪ್ಪ ಸೋಲಿಗೆ ಸಿದ್ದರಾಮಯ್ಯ ಪಾತ್ರ ಇದೆ ಅನ್ನೋ ಆರೋಪಗಳಿವೆ… ಹೀಗಾಗಿ, ದಲಿತರು ಒಳಗೊಳಗೇ ಸಿದ್ದರಾಮಯ್ಯ ವಿರುದ್ಧ ಕ್ಯಾಂಪೇನ್ ಶುರು ಮಾಡಿದ್ದರು… ಇದರಿಂದಾಗಿ, ಆಂತರಿಕ ಸಮೀಕ್ಷೆಯಲ್ಲಿ ಸಿದ್ದರಾಮಯ್ಯಗೆ ಕೋಲಾರ ಕಷ್ಟ ಅನ್ನೋದು ಗೊತ್ತಾಗಿತ್ತು… ಹೀಗಾಗಿ ನೈಸಾಗಿ ಸಿದ್ದರಾಮಯ್ಯ ತಪ್ಪಿಸಿಕೊಂಡಿದ್ದಾರೆ… ಆ ಜಾಗಕ್ಕೆ ಕೊತ್ತೂರು ಮಂಜು ಬಂದಿದ್ದಾರೆ… ಕೊತ್ತೂರು ಮಂಜು ನೇರವಾಗೇ ಮುನಿಯಪ್ಪ ವಿರುದ್ಧ ಪ್ರಚಾರ ಮಾಡಿದ್ದರಿಂದ ಕೆ.ಹೆಚ್.ಮುನಿಯಪ್ಪರ ಬೆಂಬಲಿಗರು ಕೊತ್ತೂರು ಮಂಜುಗೆ ಒಳೇಟು ಕೊಡೋ ಚಾನ್ಸಸ್ ಜಾಸ್ತಿನೇ ಇರುತ್ತೆ…
ಇನ್ನು ಸಿಎಂಆರ್ ಶ್ರೀನಾಥ್ ಕೂಡಾ ದೊಡ್ಡ ಕುಳ… ಕೋಲಾರದಲ್ಲಿ ಸಾಕಷ್ಟು ಸಂಘಟನೆ ಮಾಡಿಕೊಂಡು ಬಂದಿದ್ದಾರೆ… ಜೆಡಿಎಸ್ಗೆ ಇಲ್ಲಿ ನೆಲೆ ಕೂಡಾ ಇದೆ… ಸಿಎಂಆರ್ ಶ್ರೀನಾಥ್ ಜನಪರ ಸೇವೆಗಳನ್ನೂ ಮಾಡಿಕೊಂಡು ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಗುರುತಿಸಿಕೊಂಡಿರೋದ್ರಿಂದ ಅವರ ಪರವಾದ ಅಲೆಯಂತೂ ಇದ್ದೇ ಇದೆ… ಇನ್ನು ವರ್ತೂರು ಪ್ರಕಾಶ್ ಈಗ ಬಿಜೆಪಿ ಅಭ್ಯರ್ಥಿ… ಅವರ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದವರು.. ಅವರಿಗೂ ಒಂದಷ್ಟು ಜನ ಬೆಂಬಲವಿದೆ… ಇನ್ನು ಕಾಂಗ್ರೆಸ್ ವಿಚಾರ ನೋಡೋದಾದರೆ, ಕೋಲಾರ ಕ್ಷೇತ್ರ ಕಾಂಗ್ರೆಸ್ ಸೊರಗಿಹೋಗಿ ಸಾಕಷ್ಟು ಸಮಯವೇ ಆಗಿದೆ… ಹೀಗಾಗಿ ಇರೋ ಕೆಲ ಸಮಯದಲ್ಲೇ ಜನರನ್ನು ಸಂಘಟಿಸೋ ಅನಿವಾರ್ಯತೆ ಕೊತ್ತೂರು ಮಂಜುಗಿದೆ…
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2 ಲಕ್ಷ 24 ಸಾವಿರದ 455 ಮತದಾರರಿದ್ದಾರೆ… ಇದರಲ್ಲಿ 49 ಸಾವಿರ ಎಸ್ಸಿ ಮತದಾರರು, 11 ಸಾವಿರ ಎಸ್ಟಿ ಮತದಾರರಿದ್ದಾರೆ… ಇವರು ಕೈಕೊಡ್ತಾರೇನೋ ಅನ್ನೋ ಭಿತಿ ಕೊತ್ತೂರು ಮಂಜು ಅವರದ್ದು… ಇನ್ನು 41 ಸಾವಿರ ಮುಸ್ಲಿಂ ಮತಗಳು, 38 ಸಾವಿರ ಒಕ್ಕಲಿಗ ಮತಗಳು, 25 ಸಾವಿರ ಕುರುಬ ಮತಗಳು, 53 ಸಾವಿರ ಇತರೆ ಮತಗಳಿವೆ… ಒಕ್ಕಲಿಗ ಹಾಗೂ ಕುರುಬ ಮತಗಳಲ್ಲಿ ಬಹುತೇಕ ಮತಗಳನ್ನು ಸಿಎಂಆರ್ ಶ್ರೀನಾಥ್ ಹಾಗೂ ಬಿಜೆಪಿಯ ವರ್ತೂರ್ ಪ್ರಕಾಶ್ ಸೆಳೆಯೋ ಸಾಧ್ಯತೆ ಇದೆ… ಎಸ್ಟಿ, ಎಸ್ಟಿ ಮತಗಳೂ ಈ ಇಬ್ಬರ ಪಾಲಾದರೆ ಕೊತ್ತೂರು ಮಂಜುಗೆ ಕಷ್ಟ… ಹೀಗಾಗಿ, ಅವರ ಬಳಿ ಹಣ ಇದ್ದರೂ, ಗೆಲ್ಲೋದರ ಬಗ್ಗೆ ಕೊಂಚ ಅಳುಕೇ ಇದೆ… ಆದ್ರೆ ಕೊನೇ ಕ್ಷಣದಲ್ಲಿ ಕೊತ್ತೂರು ಅದೇನು ಮೋಡಿ ಮಾಡ್ತಾರೋ ನೋಡಬೇಕು…