ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಕೇಸ್; ರಾಜಿಯಾಗಲು ಸಾಧ್ಯವೇ ಇಲ್ಲ – ಎಸ್.ಕೆ.ಬಸವರಾಜನ್
ಚಿತ್ರದುರ್ಗ; ಮುರುಘಾ ಶ್ರೀಗಳ ವಿರುದ್ಧ ಕೇಸ್ ದಾಖಲಿಸಿರುವ ಮಕ್ಕಳನ್ನು ನಾನು ಕೆಲ ದಿನ ನನ್ನ ಮನೆಯಲ್ಲಿ ಇಟ್ಟುಕೊಂಡಿದ್ದು ನಿಜ, ಮಕ್ಕಳಿಗೆ ನ್ಯಾಯ ಕೊಡಿಸಲು ನಾನು ಪ್ರಯತ್ನ ಪಟ್ಟಿದ್ದೇನೆ ಎಂದು ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಪ್ರತಿಕ್ರಿಯೆ ನೀಡಿದ್ದಾರೆ. ಮಠದ ಲೇಡಿ ವಾರ್ಡನ್ ರಶ್ಮಿ ದಾಖಲಿಸಿದ್ದ ಕೇಸ್‌ನಲ್ಲಿ ಜಾಮೀನು ಸಿಕ್ಕ ನಂತರ ಮೊದಲ ಬಾರಿಗೆ ಶ್ರೀಗಳ ವಿರುದ್ಧದ ಕೇಸ್ ಬಗ್ಗೆ ಬಸವರಾಜನ್ ಮಾತನಾಡಿದ್ದಾರೆ.
ಎಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಆರೋಪ ಸುಳ್ಳು ಎಂದು ಹೇಳಲು ಆಗಲ್ಲ. ಯಾರು ತಪ್ಪು ಮಾಡಿದ್ದಾರೆಂದು ಕೋರ್ಟ್‌ನಲ್ಲಿ ತೀರ್ಮಾನವಾಗುತ್ತೆ ಎಂದು ಎಸ್.ಕೆ.ಬಸವರಾಜನ್ ಇದೇ ವೇಳೆ ಹೇಳಿದ್ದಾರೆ. ಶ್ರೀಗಳ ವಿರುದ್ಧ ಕೇಸ್ ದಾಖಲಾಗಿದ್ದಕ್ಕೆ ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ. ಯಾರು, ಯಾರನ್ನೂ ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ. ಪೋಕ್ಸೋ ಪ್ರಕರಣದಲ್ಲಿ ರಾಜಿಯಾಗಲು ಸಾಧ್ಯವಿಲ್ಲ. ಶ್ರೀಗಳ ಜೊತೆ ನಾನು ರಾಜೀಯಾದರೆ ಪೋಕ್ಸೋ ಕೇಸ್ ರದ್ದಾಗುವುದಿಲ್ಲ ಎಂದು ಬಸವರಾಜನ್ ಇದೇ ವೇಳೆ ಸ್ಪಷ್ಟನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರ ಪತ್ನಿ ಸೌಭಾಗ್ಯ, ವಾರ್ಡನ್ ಯಾರೆಂದೇ ನನಗೆ ಗೊತ್ತಿರಲಿಲ್ಲ. ಮಠದಲ್ಲಿ ಪೂಜೆ ಮಾತ್ರ ಹೋಗುತ್ತಿದ್ದೆ. ವಿನಾಕಾರಣ ನನ್ನ ಮೇಲೂ ಕೇಸ್ ದಾಖಲಿಸಲಾಗಿದೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.