DistrictsNational

ಎ.ಮಂಜು ಜೊತೆ ಹೊಂದಾಣಿಕೆ ಆರೋಪ; ಎ.ಟಿ.ರಾಮಸ್ವಾಮಿ ವಿರುದ್ಧ ರೇವಣ್ಣ ಕಿಡಿ

ಹಾಸನ: ತನ್ನ ಮಗನ ಮೇಲಿರುವ ಕೇಸಿನ ವಿಚಾರವಾಗಿ ಎ.ಮಂಜು ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಶಾಸಕ ಎ.ಟಿ ರಾಮಸ್ವಾಮಿ ಅವರ ಹೇಳಿಕೆಗೆ ನಗರದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಕಿಡಿ ಕಾರಿದ್ದಾರೆ

ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಮಗನ ಮೇಲಿನ ಪ್ರಕರಣದ ವಿಚಾರವಾಗಿ ತಾವು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅದನ್ನು ಸಾಬೀತು ಮಾಡಲಿ, ಸುಮ್ಮನೆ ನಾಮಕಾವಸ್ಥೆ ಗೆ ಮನ ಬಂದಂತೆ ಮಾತನಾಡಬಾರದು ಎಂದರು

ರಾಮಸ್ವಾಮಿ ಹಾಗೂ ಶಿವಲಿಂಗ ಗೌಡ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ, ಕಳೆದ ಎರಡು ವರ್ಷ ಗಳಿಂದ ಕಾಂಗ್ರೆಸ್ ಪಕ್ಷದ ಮನೆ ಬಾಗಿಲು ತಟ್ಟುತ್ತಿದ್ದಾರೆ,

ದೇವೇಗೌಡರನ್ನು ನಾವೇ ಮನೆಯಿಂದ ಆಚೆ ಅಟ್ಟಿದ್ದೇವೆ ಎಂಬ ಹೇಳಿಕೆಯನ್ನು ರಾಮಸ್ವಾಮಿ ಅವರು ಹಿಂಪಡೆಯಬೇಕು, ದೇವೇಗೌಡರನ್ನು ನಾವು ಹೇಗೆ ನೋಡಿಕೊಂದಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿದೆ, ಈ ರೀತಿಯ ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದು ಸಲಹೆ ನೀಡಿದ ಅವರು ನಾವೇನಾದರೂ ಎ. ಮಂಜು ಅವರ ಜೊತೆ ಕಳೆದ ಒಂದು ವರ್ಷದಿಂದ ಸಂಪರ್ಕದಲ್ಲಿ ಇರುವುದನ್ನು ಸಾಬೀತು ಮಾಡಿದ್ದರೆ ಅವರು ಹೇಳಿದ ಶಿಕ್ಷೆ ಅನುಭವಿಸುವೆ, ಅವರಂತೆ ನಾನು ಯಾರ ಮನೆ ಬಾಗಿಲನ್ನು ಬಡಿಯುವ ಕೆಲಸ ಮಾಡಿಲ್ಲ ಎಂದರು

ಕೆಲವರು ಪಕ್ಷದ ಒಳಗೆ ಇದ್ದುಕೊಂಡು ಚಾಕು ಹಾಕುವ ಕೆಲಸ ಮಾಡುವವರ ನಡುವೆ, ಪಕ್ಷಕ್ಕೆ ಬರುವವರನ್ನು ಪ್ರೀತಿಯಿಂದ ಆಹ್ವಾನ ಮಾಡುತ್ತಿದ್ದೇವೆ ಅಂತೆ ಮಂಜು ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ,

ನಾನು ರಾಮಸ್ವಾಮಿ ಅವರ ವಿರುದ್ಧ ಅರಕಲಗೂಡು ಕ್ಷೇತ್ರದ ಜನರನ್ನು ಎತ್ತಿ ಕಟ್ಟಿ ಅವರ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದರೆ ಅದನ್ನು ದೇವರು ನೋಡಿಕೊಳ್ಳಲಿ, ನಾನು ಎಂದಿಗೂ ಈ ರೀತಿಯ ಯೋಚನೆ ಮಾಡಿಲ್ಲ, ನನ್ನ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಜನರನ್ನು ಪಕ್ಷ ತೀರ್ಮಾನ ಮಾಡಲಿದೆ ಅಲ್ಲಿಯ ವರೆಗೂ ಎಲ್ಲರೂ ಸುಮ್ಮನೆ ಇರುವಂತೆ ನಾನೇ ಹೇಳಿದ್ದೇನೆ ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಪಡುವುದು ಬೇಡ ಎಂದರು

Share Post