CinemaNational

ಕರಿಬೆಕ್ಕು ಅಂತ ಹೀಯಾಳಿಸ್ತಿದ್ದರು ಅಂತ ಗೋಳು ತೋಡಿಕೊಂಡ ಪ್ರಿಯಾಂಕಾ ಛೋಪ್ರಾ

ಮುಂಬೈ; ನಾನು ಸಿನಿಮಾ ಇಂಡಸ್ಟ್ರೀಗೆ ಬಂದಾಗ ನನಗೂ ಬಾಡಿ ಶೇಮಿಂಗ್‌ ಮಾಡುತ್ತಿದ್ದರು. ನಾನು ಆಗ ಸ್ವಲ್ಪ ದಪ್ಪ ಇದ್ದೆ. ನನ್ನ ಬಣ್ಣ ಕೂಡಾ ಕಪ್ಪು ಇತ್ತು. ಹೀಗಾಗಿ ಕೆಲವರು ನನ್ನನ್ನು ಪ್ರಾಣಿಗಳಿಗೆ ಹೋಲಿಸಿ ಹೀಯಾಳಿಸುತ್ತಿದ್ದರು. ಕರಿಬೆಕ್ಕು ಎಂದು ಕರೆಯುತ್ತಿದ್ದರು ಎಂದು ಬಾಲಿವುಡ್‌ ನಟಿ ಪ್ರಿಯಾಂಕಾ ಛೋಪ್ರಾ ತಮ್ಮ ನೋವನ್ನು ಹೊರಹಾಕಿದ್ದಾರೆ.

ದಕ್ಷಿಣ ಏಷ್ಯಾಗೆ ಸಂಬಂಧಿಸಿದ ಸಭೆಯಲ್ಲಿ ಪ್ರಿಯಾಂಕಾ ಛೋಪ್ರಾ ಮಾತನಾಡಿದ್ದಾರೆ. ಮೊದಲಿಗೆ ನನ್ನನ್ನು ಎಲ್ಲರೂ ಹೀಯಾಳಿಸುತ್ತಿದ್ದರು. ಆಗ ನನಗೆ ತುಂಬಾನೇ ನೋವಾಗುತ್ತಿತ್ತು. ಇದರಿಂದಾಗಿ ಎಷ್ಟೋ ಬಾರಿ ಅತ್ತುಬಿಟ್ಟಿದ್ದೇವೆ ಎಂದು ಹಿಂದೆ ಆದ ಕಹಿ ಅನುಭವವನ್ನು ಪ್ರಿಯಾಂಕಾ ಭಾವುಕವಾಗಿಯೇ ಹಂಚಿಕೊಂಡಿದ್ದಾರೆ.

Share Post