CinemaNational

ಸಿನಿಮಾ ಆಯ್ತಾ ನಟ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಲವ್‌ ಸ್ಟೋರಿ..?; ಯಾರು ಹೀರೋ ಗೊತ್ತಾ..?

ಹೈದರಾಬಾದ್‌; ತೆಲುಗು ನಟ ನರೇಶ್‌ ಹಾಗೂ ಖ್ಯಾತ ನಟಿ ಪವಿತ್ರಾ ಲೋಕೇಶ್‌ ಲವ್‌ ಸ್ಟೋರಿ ಸಿನಿಮಾ ಆಗಿದೆ ಎಂದು ಹೇಳಲಾಗುತ್ತಿದೆ.. ಈಗಾಗಲೇ ಸಿನಿಮಾ ಚಿತ್ರೀಕರಣ ಕೂಡಾ ಮುಗಿದಿದೆಯಂತೆ. ಕಳೆದ ಜನವರಿಯಲ್ಲಿ ನರೇಶ್‌ ಅವರು ಪವಿತ್ರಾ ಲೋಕೇಶ್‌ಗೆ ಮುತ್ತಿಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಆ ವಿಡಿಯೋ ತುಣುಕ ಈ ಚಿತ್ರದ್ದೇ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಅವರೇ ನಟಿಸಿದ್ದಾರೆ ಎನ್ನಲಾಗಿದೆ.

ಈ ಇಬ್ಬರು ಸಂಬಂಧದ ಮೇಲೆಯೇ ಚಿತ್ರ ಮಾಡಲಾಗಿದೆ ಎನ್ನಲಾಗಿದೆ. ಎಂ.ಆರ್‌.ರಾಜು ಎಂಬುವವರು ಈ ಚಿತ್ರ ನಿರ್ದೇಶಿಸಿದ್ದಾರೆ. ಮಾಹಿತಿ ಪ್ರಕಾರ ಶೂಟಿಂಗ್‌ ಎಲ್ಲಾ ಮುಕ್ತಾಯವಾಗಿದ್ದು, ಎಡಿಟಿಂಗ್‌ ಕಾರ್ಯ ನಡೆಯುತ್ತಿದೆಯಂತೆ. ಪವಿತ್ರಾ ಲೋಕೇಶ್ ಅವರು ನರೇಶ್‌ ಬಾಳಿನಲ್ಲಿ ಬಂದದ್ದು ಹೇಗೆ? ನರೇಶ್‌ರ ಹಿಂದಿನ ವೈವಾಹಿಕ ಜೀವನ ಹೀಗೆ ಎಲ್ಲ ಸಂಗತಿಗಳನ್ನು ಚಿತ್ರಕಥೆಯಲ್ಲಿ ಬೆರೆಸಿದ್ದಾರಂತೆ. ಸದ್ಯದಲ್ಲೇ ಈ ಚಿತ್ರ ರಿಲೀಸ್‌ ಆಗಲಿದೆಯಂತೆ. ಆದ್ರೆ ಈ ಬಗ್ಗೆ ನರೇಶ್‌ ಆಗಲೀ, ಪವಿತ್ರಾ ಲೋಕೇಶ್‌ ಆಗಲೀ, ಚಿತ್ರ ನಿರ್ದೇಶಕರಾಗಲೀ ಯಾವುದೇ ಮಾಹಿತಿ ನೀಡಿಲ್ಲ. ಬಲ್ಲ ಮೂಲಗಳು ಮಾತ್ರ ಇದನ್ನು ಹೌದು ಎನ್ನಲಾಗುತ್ತಿದೆ. ಆದ್ರೆ ಕನ್ಫರ್ನ್‌ ಆಗುವವರೆಗೂ ಇದನ್ನು ನಾವು ಗಾಸಿಪ್‌ ಎಂದೇ ನಂಬಬೇಕು.

Share Post