ಮತದಾನ ಮಾಡದಿದ್ದರೆ ಕೊಡಗಿನ ಪ್ರವಾಸಿ ತಾಣಗಳಿಗೆ ಪ್ರವೇಶವಿಲ್ಲ
ಮಡಿಕೇರಿ; ಮತದಾನಕ್ಕೆ ರಜೆ ಇದೆ. ಯಾರು ಮತ ಹಾಕ್ತಾರೆ. ಕೂರ್ಗ್‌ಗೆ ಹೋಗಿ ಸುತ್ತಾಡಿಕೊಂಡು ಬರೋಣ ಅಂತ ಏನಾದರೂ ಪ್ಲಾನ್ ಹಾಕಿಕೊಂಡಿದ್ದೀರಾ..? ಹಾಗಾದರೆ ನಿಮಗೆ ನಿರಾಸೆಯಾಗುತ್ತೆ. ಯಾಕಂದ್ರೆ ಮತದಾನದ ದಿನ ಮಡಿಕೇರಿ ಪ್ರವಾಸ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಮತದಾನ ಮಾಡದೇ ಯಾರೇ ಬಂದರೂ ಪ್ರವಾಸಿತಾಣಗಳಿಗೆ ಪ್ರವೇಶವಿಲ್ಲ. ಮತದಾನ ಮಾಡಿದ್ದಕ್ಕೆ ಸಾಕ್ಷಿಯಾಗಿದ ಬೆರಳಿನ ಮೇಲೆ ಶಾಯಿ ತೋರಿಸಿದರೆ ಮಾತ್ರ ಪ್ರವಾಸಿ ತಾಣಗಳಿಗೆ ಎಂಟ್ರಿ ಎಂದು ಕೊಡಗು ಜಿಲ್ಲಾಧಿಕಾರಿ ಡಾ.ಸತೀಶ್ ಹೇಳಿದ್ದಾರೆ.
ಐದು ವರ್ಷಕ್ಕೊಮ್ಮೆ ಸಾರ್ವತ್ರಿಕ ಚುನಾವಣೆ ಬರುತ್ತದೆ. ಆದ್ರೆ ಸುಶಿಕ್ಷತರೇ ಚುನಾವಣೆ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ. ಮತದಾನ ಮಾಡದೇ ರಜೆಮಜೆ ಅನುಭವಿಸುತ್ತಾರೆ. ಹೀಗಾಗಿ ಜನರಿಗೆ ತನ್ನ ಹಕ್ಕು ಚಲಾಯಿಸುವಂತೆ ಮಾಡಲು ಕೊಡಗು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಕೊಡಗು ಜಿಲ್ಲಾಧಿಕಾರಿಯ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.