CrimeDistricts

ಗದಗದಲ್ಲಿ ನಾಲ್ವರ ಕೊಲೆ ಪ್ರಕರಣ; ಪೊಲೀಸರ ಜೊತೆಯೇ ನಿಂತಿದ್ದ ಪ್ರಮುಖ ಆರೋಪಿ..!

ಗದಗ; ಗದಗದಲ್ಲಿ ಎರಡು ದಿನಗಳ ಹಿಂದೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲಾಗಿತ್ತು.. ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.. ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.. ಮನೆಯ ಮಗನೇ ಈ ಕೊಲೆಗೆ ಸುಪಾರಿ ಕೊಟ್ಟಿದ್ದು, ತನಿಖೆ ವೇಳೆ ಆರೋಪಿ ಪೊಲೀಸರ ಜೊತೆಯೇ ಏನೂ ಗೊತ್ತಿಲ್ಲದಂತೆ ತಿರುಗಾಡಿಕೊಂಡಿದ್ದ.. ಕೊನೆಗೂ ಪ್ರಮುಖ ಆರೋಪಿ ಸೇರಿ ಎಂಟು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ..

48 ಗಂಟೆಗಳಲ್ಲೇ ಪ್ರಕರಣ ಬೇಧಿಸಿದ ಪೊಲೀಸರು..!;

ಪ್ರಕಾಶ್‌ ಬಾಕಳೆಯ ಮೊದಲ ಪತ್ನಿಯ ಮಗ ವಿನಾಯಕ್‌ ಬಾಕಳೆ ಪ್ರಕರಣದ ಪ್ರಮುಖ ಆರೋಪಿ… ಈತನ ಜೊತೆಗೆ ಇತರ ಆರೋಪಿಗಳಾದ ಫೈರೋಜ್ ಖಾಜಿ, ಜಿಶಾನ್ ಖಾಜಿ, ಮೀರಜ್​ ಮೂಲದ ಸಾಹಿಲ್, ಸೋಹೆಲ್ ಖಾಜಿ, ಸುಲ್ತಾನ್ ಶೇಖ್, ಮಹೇಶ್ ಸಾಳೋಂಕೆ, ವಾಹಿದ್ ಬೇಪಾರಿ ಬಂಧಿತರು..

65 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದ ವಿನಾಯಕ್‌;

ಆರೋಪಿ ವಿನಾಯಕ್‌, ಮನೆಯ ಯಜಮಾನ ಪ್ರಕಾಶ್‌ ಬಾಕಳೆ ಮೊದಲ ಪತ್ನಿಯ ಮಗನಾಗಿದ್ದ.. ಈತನಿಗೆ ತಂದೆ ಪ್ರಕಾಶ್‌ ಬಾಕಳೆ ಜೊತೆಗೆ ವ್ಯವಹಾರಿಕವಾಗಿ ವೈಮಸ್ಯ ಉಂಟಾಗಿತ್ತು.. ಈ ಕಾರಣದಿಂದಾಗಿ ವಿನಾಯಕ್‌, ಫೈರೋಜ್‌ ಎಂಬಾತನಿಗೆ 65 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದ… ಪ್ರಕಾಶ್‌ ಬಾಕಳೆ, ಅವರ ಪತ್ನಿ ಸುನಂದಾ ಹಾಗೂ ಪುತ್ರ ಕಾರ್ತೀಕ್‌ ಕೊಲೆಗೆ ಸುಪಾರಿ ಕೊಟ್ಟಿದ್ದ.. ಆದ್ರೆ ಆ ದಿನ ಸಂಬಂಧಿಕರು ಮನೆಗೆ ಬಂದಿದ್ದರಿಂದ ಸುಪಾರಿ ಹಂತಕರು, ತಿಳಿಯದೇ ಅವರನ್ನು ಕೊಲೆ ಮಾಡಿದ್ದರು..

ಸಂಬಂಧಿಕರು ಬಂದಿದ್ದರಿಂದ ಬಚಾವ್‌;

ಪ್ರಕಾಶ್‌ ಬಾಕಳೆ ಹಾಗೂ ಅವರ ಪತ್ನಿ ಸುನಂದಾ ಯಾವಾಗಲೂ ಮೊದಲ ಮಹಡಿಯಲ್ಲಿ ಮಲಗುತ್ತಿದ್ದರು.. ಆದ್ರೆ ಸಂಬಂಧಿಕರು ಬಂದಿದ್ದರಿಂದ ಆ ದಿನ ಸಂಬಂಧಿಕರನ್ನು ಮೊದಲ ಮಹಡಿಯಲ್ಲಿ ಮಲಗಿಸಿ, ಇವರಿಬ್ಬರೂ ನೆಲದ ಮಹಡಿಯಲ್ಲಿ ಮಲಗಿದ್ದರು.. ಮಗ ಕೂಡಾ ನೆಲ ಮಹಡಿಯಲ್ಲೇ ಮಲಗಿದ್ದ.. ಸುಪಾರಿ ಹಂತಕರು, ಮೊದಲ ಮಹಡಿಯಲ್ಲಿ ನುಗ್ಗಿದ್ದರಿಂದ ಅಲ್ಲಿದ್ದವರನ್ನು ಹತ್ಯೆ ಮಾಡಿದ್ದಾರೆ.. ಏನಾಗ್ತಿದೆ ಎಂದು ನೋಡಲು ಬಂದ ಪುತ್ರ ಕಾರ್ತೀಕ್‌ ನನ್ನೂ ಕೊಲೆ ಮಾಡಿ ಪರಾರಿಯಾಗಿದ್ದರು.. ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಇವರನ್ನು ಹತ್ಯೆ ಮಾಡಿದ್ದರು.

ಆಸ್ತಿ ವಿಚಾರವಾಗಿ ಜಗಳ ಮಾಡಿಕೊಂಡಿದ್ದ ಅಪ್ಪ-ಮಗ!;

ಮೊದಲ ಪತ್ನಿಯ ಮಗ ವಿನಾಯಕ್‌ ಹೆಸರಲ್ಲಿ ಪ್ರಕಾಶ್‌ ಅವರು ಸಾಕಷ್ಟು ಆಸ್ತಿ ಮಾಡಿದ್ದರು.. ಆದ್ರೆ ವಿನಾಯಕ್‌ ಅದನ್ನು ಮಾರಿಕೊಂಡು ಬರುತ್ತಿದ್ದ.. ಹೀಗಾಗಿ ಇಬ್ಬರ ನಡುವೆ ಜಗಳ ನಡೆದಿತ್ತು.. ಇದೇ ಕಾರಣಕ್ಕೆ ಈ ಸುಪಾರಿ ಕೊಡಲಾಗಿತ್ತು ಅನ್ನೋದು ಗೊತ್ತಾಗಿದೆ..

 

Share Post