Wife Murder Case; ಪತ್ನಿ ಕೊಲೆ ಪ್ರಕರಣ; 31 ವರ್ಷದ ನಂತರ ಸಿಕ್ಕಿಬಿದ್ದ ಆರೋಪಿ!
ಬೆಂಗಳೂರು; ಅದು 31 ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣ.. ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದ.. ಜೈಲು ವಾಸ ಕೂಡಾ ಅನುಭವಿಸಿದ್ದ.. ಆದ್ರೆ ಕೆಲ ದಿನಗಳಲ್ಲೇ ಜಾಮೀನು ಪಡೆದು ಜೈಲಿನಿಂದ ಹೊರಬಂದ ಆಸಾಮಿ, ಕೋರ್ಟ್‌ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ… ಪೊಲೀಸರು ಆತನನ್ನು ಹುಡುಕಿ ಬಂಧಿಸೋದಕ್ಕೆ 31 ವರ್ಷ ಬೇಕಾಯಿತು..
ಇದನ್ನೂ ಓದಿ; Jayapradha; ನಟಿ, ರಾಜಕಾರಣಿ ಜಯಪ್ರದಾ ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ; ಯಾಕೆ ಗೊತ್ತಾ..?
ಹೆಸರು, ಧರ್ಮ ಎಲ್ಲಾ ಬದಲಿಸಿಕೊಂಡಿದ್ದ;
ಹೆಸರು, ಧರ್ಮ ಎಲ್ಲಾ ಬದಲಿಸಿಕೊಂಡಿದ್ದ; 31 ವರ್ಷಗಳ ನಂತರ ಸಿಕ್ಕಿಬಿದ್ದ ಆಸಾಮಿ ಹೆಸರು ಸುಬ್ರಮಣಿ… ಆದ್ರೆ ಈತ ಹುಸೇನ್ ಸಿಕಂದರ್ ಎಂದು ಹೆಸರು ಬದಲಿಸಿಕೊಂಡಿದ್ದ… ಜಾಮೀನು ಸಿಗುತ್ತಲೇ ಕೇರಳಕ್ಕೆ ಎಸ್ಕೇಪ್ ಆರೋಪಿ ಸುಬ್ರಮಣಿ, ಅಲ್ಲಿ ಮುಸ್ಲಿಮನಾಗಿ ಬದಲಾಗಿದ್ದ.. ಮುಸ್ಲಿಂ ಸಂಪ್ರದಾಯಗಳನ್ನು ಕಲಿತಿದ್ದ.. ಜೊತೆಗೆ ಹೆಸರು ಕೂಡಾ ಬದಲಿಸಿಕೊಂಡು ಧರ್ಮ ಬದಲಾಯಿಸಿಕೊಂಡಿದ್ದ.. ಹೀಗಾಗಿ ಇಷ್ಟು ದಿನ ಆರೋಪಿಯನ್ನು ಹಿಡಿಯಲು ಪೊಲೀಸರಿಗೆ ಆಗಿರಲಿಲ್ಲ..
ಇದನ್ನೂ ಓದಿ; Dr.C.N.Mnajunath; ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್?
ಮಸೀದಿಯಲ್ಲಿ ಮೌಲ್ವಿಯೂ ಆಗಿದ್ದ ಆರೋಪಿ ಸುಬ್ರಮಣಿ;
ಮಸೀದಿಯಲ್ಲಿ ಮೌಲ್ವಿಯೂ ಆಗಿದ್ದ ಆರೋಪಿ ಸುಬ್ರಮಣಿ; ಜಾಮೀನು ಸಿಗುತ್ತಲೇ ಸುಬ್ರಮಣಿ ಕೇರಳದ ಪಟ್ಟಣವೊಂದಕ್ಕೆ ಎಸ್ಕೇಪ್ ಆಗಿದ್ದ.. ಸ್ಥಳೀಯ ಸ್ನೇಹ ಗಳಿಸು ಶಕ್ತನಾದ ಆತ, ಮುಸಲ್ಮಾನನಾಗಿ ಬದಲಾಗಿದ್ದ. ಅನಂತರ ಹೆಸರನ್ನು ಹುಸೇನ್ ಸಿಕಂದರ್ ಎಂದು ಬದಲಿಸಿಕೊಂಡು, ಮುಸ್ಲಿಂ ಆಚರಣೆ, ಪದ್ಧತಿಗಳಿಗೆ ಒಗ್ಗಿಕೊಂಡಿದ್ದಾರೆ. ಅಲ್ಲೇ ಕೆಲ ವರ್ಷ ಜೀವನ ಸಾಗಿಸಿದ್ದ ಆರೋಪಿ ನಂತರ ಚಿಕ್ಕಮಗಳೂರಿಗೆ ಬಂದು ನೆಲೆಸಿದ್ದ. ಈತ ಮಸೀದಿಯಲ್ಲಿ ಮೌಲ್ವಿಯೂ ಆಗಿದ್ದ ಎಂದು ಹೇಳಲಾಗುತ್ತಿದೆ.
ಆರೋಪಿ ಮುಸ್ಲಿಮನಾಗಿ ಬದಲಾಗಿ ಜೀವನ ಸಾಗಿಸುತ್ತಿದ್ದಾನೆಂದು ಬೆಂಗಳೂರಿನ ಹೆಬ್ಬಾಳ ಪೊಲೀಸರಿಗೆ ಗೊತ್ತಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ; Valentines Day; ಪ್ರೇಮಿಗಳ ದಿನದ ಹಿಂದೆ ಇಷ್ಟೊಂದು ಕತೆ ಇದೆಯಾ?
1993ರಲ್ಲಿ ನಡೆದಿದ್ದ ಕೊಲೆ ಪ್ರಕರಣ;
1993ರಲ್ಲಿ ನಡೆದಿದ್ದ ಕೊಲೆ ಪ್ರಕರಣ; ಆರೋಪಿ ಸುಬ್ರಮಣಿ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೀವನ ಸಾಗಿಸುತ್ತಿದ್ದ.. ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈತನಿಗೆ ಸುಧಾ ಎಂಬ ಸಂಗಾತಿ ಇದ್ದಳು.. ಪತ್ನಿ ಸುಧಾ ಬಗ್ಗೆ ಯಾವಾಗಲೂ ಸುಬ್ರಮಣಿಗೆ ಅನುಮಾನ. ಶೀಲ ಶಂಕಿಸಿ ಯಾವಾಗಲೂ ಗಲಾಟೆ ಮಾಡುತ್ತಿದ್ದ.. ಒಂದು ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಸಾಯಿಸಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಹೆಬ್ಬಾಳ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದ್ರೆ ಕೆಲ ದಿನಗಳಲ್ಲೇ ಜಾಮೀನು ಪಡೆದು ಹೊರಬಂದ ಆರೋಪಿ, ಕೇರಳಕ್ಕೆ ಎಸ್ಕೇಪ್ ಆಗಿದ್ದ.