CrimeNational

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಈಗ ಗರ್ಭಿಣಿ!

ಹೈದರಾಬಾದ್‌; ತೆಲಂಗಾಣದ 9ನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.. ಇದೀಗ ಈ ಬಾಲಕಿ ಗರ್ಭಿಣಿ ಅನ್ನೋದು ಆಘಾತಕಾರಿ ವಿಚಾರ ಬಯಲಾಗಿದೆ.. ಸಿದ್ದಿಪೇಟದ ದುಬ್ಬಾಕ ಮಂಡಲ್‌ ವ್ಯಾಪ್ತಿಯಲ್ಲಿ ಕಳೆದ ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.. ಬಾಲಕಿಗೆ ಆಮಿಷವೊಡ್ಡಿ ಮೋಸ ಮಾಡಿ ಈ ಕೃತ್ಯ ಎಸಗಿದ್ದರು ಎಂದು ತಿಳಿದುಬಂದಿದೆ..
ವಿದ್ಯಾರ್ಥಿನಿ ತೀವ್ರ ಅನಾರೋಗ್ಯಕ್ಕೀಡಾಗಿದ್ದಳು.. ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ಆಕೆಯನ್ನು ಸಿದ್ದಿಪೇಟ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು.. ಈ ವೇಳೆ ನಡೆಸಿದ ಪರೀಕ್ಷೆ ವೇಳೆ ಬಾಲಕಿ ಅತ್ಯಾಚಾರಕ್ಕೊಳಗಾಗಿರುವುದು ಪತ್ತೆಯಾಗಿದೆ.. ಬಾಲಕಿ ನೀಡಿದ ಮಾಹಿತಿ ಮೇರೆಗೆ ಅಕ್ಬರ್‌ಪೇಟ್‌ ಭೂಂಪಲ್ಲಿ ಮಂಡಲ್‌ಗೆ ಸೇರಿದ ಇಬ್ಬರು ಹಾಗೂ ದುಬ್ಬಾಕ ಮಂಡಲ್‌ಗೆ ಸೇರಿದ ಒಬ್ಬ ಯುವಕನನ್ನು ಬಂಧಿಸಲಾಗಿದೆ.. ಈಗ ಈ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದ್ದು, ಪೋಷಕರು ಆತಂಕಕ್ಕೊಳಗಾಗಿದ್ದಾರೆ..

Share Post