ಬರೀ 6 ಸಾವಿರಕ್ಕೆ ಹೆಣ್ಣು ಮಗುವನ್ನು ಮಾರಿದ ಮಹಾತಾಯಿ!
ಪ್ರಕಾಶಂ(Andhrapradesh); ಆಂಧ್ರಪ್ರದೇಶದಲ್ಲಿ ಹೆಣ್ಣು ಮಕ್ಕಳ ಮಾರಾಟ, ಸಾಗಾಟ ಸಂಚಲನ ಮೂಡಿಸುತ್ತಿದೆ.. ಅದ್ರಲ್ಲೂ ಕೂಡಾ ಪ್ರಕಾಶಂ ಸುತ್ತಮುತ್ತ ನವಜಾತ ಶಿಶುಗಳನ್ನೇ ಪೋಷಕರೇ ಮಾರಿಕೊಳ್ಳುತ್ತಿದ್ದಾರೆ.. ಇದನ್ನು ಡೀಲ್ ಮಾಡುವ ಗ್ಯಾಂಗ್ ಒಂದು ಹುಟ್ಟಿಕೊಂಡಿದೆ.. ಇನ್ನು ಮಹಿಳೆಯೊಬ್ಬರು ತನ್ನ ಮಗುವನ್ನು ಸಂಬಂಧಿಕರಿಗೆ ಬರೀ 6 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.. ಆರು ಸಾವಿರ ರೂಪಾಯಿ ಮಗು ಖರೀದಿ ಮಾಡಿದ ಮಹಿಳೆ ಅದನ್ನು ಮತ್ತೊಬ್ಬರಿಗೆ 10 ಸಾವಿರ ರೂಪಾಯಿ ಸೇಲ್ ಮಾಡಿದ್ದಾಳೆ..
ಇದನ್ನೂ ಓದಿ; ಬೆಟ್ಟಿಂಗ್ ಆಡಿ ಲಾಸ್ ಆಗಿದ್ದೀರಾ..?; ಬದುಕು ಗೆಲ್ಲೋದಕ್ಕೆ ಇದ್ದೇಇದೆ ದಾರಿ…
ನೆಲ್ಲೂರು ಜಿಲ್ಲೆಯ ಪೊನ್ನಲೂರು ಗ್ರಾಮದ ಅಂಗನವಾಡಿ ಶಿಕ್ಷಕಿ ಮಂಜುಳಾ ಎಂಬಾಕೆಯೇ ತನ್ನ ಹೆಣ್ಣುಮಗುವನ್ನು ಮಾರಾಟ ಮಾಡಿದ ಮಹಿಳೆಯಾಗಿದ್ದಾರೆ.. ಈಕೆ ಪತಿಯಿಂದ ದೂರವಾಗಿದ್ದಳು. ಇದೀಗ ಬೇರೆ ಪುರುಷನ ಜೊತೆ ಈಗ ವಾಸವಿದ್ದಾಳೆ.. ಇವರಿಗೆ ಹೆಣ್ಣ ಮಗು ಹುಟ್ಟಿದ್ದು, ಅದನ್ನು ಸಾಕೋಕೆ ಆಗಲ್ಲ ಅಂತ ಮಾರಾಟ ಮಾಡಿದ್ದಾಳೆ.. ಸಂಬಂಧಿಕಳೊಬ್ಬಳು ಈ ಮಗುವನ್ನು ಖರೀದಿ ಮಾಡಿಕೊಂಡು ಹೋಗಿದ್ದು, ಆಕೆ ಖಮ್ಮಂ ಜಿಲ್ಲೆಯ ಕಲ್ಲೂರಿನ ದಂಪತಿಯೊಬ್ಬರಿಗೆ ಈ ಮಗುವನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಆಗಸ್ಟ್ 24ರಂದು ಇದೇ ಒಂಗೋಲ್ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗುವಿನ ತಾಯಿ ಮಂಜುಳಾ, ಸಿಬ್ಬಂದಿಗೆ ಹೇಳದೆ ಮಗುವಿನೊಂದಿಗೆ ಹೊರಹೋಗಿದ್ದಳು.. ಈ ವೇಳೆ ಖಮ್ಮಂ ಜಿಲ್ಲೆಯ ಬಾಲಸುಂದರರಾವ್ ದಂಪತಿಗೆ ಮಗು ನೀಡಿದ್ದಾಳೆ.. ಇದಕ್ಕೆ ಬಾಲಸುಂದರರಾವ್ 10,000 ರೂಪಾಯಿ ನೀಡಿದರೆ, ಅದ್ರಲ್ಲಿ ತಾಯಿ ಮಂಜುಳಾ 6,000 ತೆಗೆದುಕೊಂಡರೆ, ಮಧ್ಯವರ್ತಿಯಾಗಿ ಬಂದಿದ್ದ ಸಂಬಂಧಿ ಮಹಿಳೆ 4,000 ರೂಪಾಯಿ ತೆಗೆದುಕೊಂಡಿದ್ದಾಳೆ..
ಇದನ್ನೂ ಓದಿ; ಚಿನ್ನದ ಅಸಲೀತನ ಪರೀಕ್ಷೆ ಮಾಡೋದು ಹೇಗೆ..?; ಯಾವುದು ಅಸಲಿ, ಯಾವುದು ನಕಲಿ?
ಆಸ್ಪತ್ರೆಯಿಂದ ಮಗುವಿನೊಂದಿಗೆ ಹೊರಹೋಗಿದ್ದ ಮಹಿಳೆ ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿರಲಿಲ್ಲ.. ಈ ಬಗ್ಗೆ ಅನುಮಾನಗೊಂಡು ವಿಚಾರಣೆ ಮಾಡಿದಾಗ ಮಗುವನ್ನು ಬೇರೆಯವರಿಗೆ ಕೊಟ್ಟಿದ್ದು ಗೊತ್ತಾಗಿದೆ.. ಕೂಡಲೇ ಆಸ್ಪತ್ರೆ ಸಿಬ್ಬಂದಿ ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.. ಈ ಬಗ್ಗೆ ಒಂಗೋಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..