ಬಂಧಿಸಲು ಪೊಲೀಸರು ಬಂದರು; ಆತ ನದಿಗೆ ಹಾರಿ ತಪ್ಪಿಸಿಕೊಂಡ!
ಭೋಪಾಲ್; ಡ್ರಗ್ಸ್ ಮಾರಾಟ ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಬಂದಿದ್ದರು. ಇದನ್ನು ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ನದಿಗೆ ಹಾರಿದ್ದಾನೆ. ಪೊಲೀಸರು ಎಷ್ಟೇ ಹೇಳಿದರೂ ಆತ ಶರಣಾಗದೇ ನದಿಯಲ್ಲಿ ಈಜಿಕೊಂಡು ಮತ್ತೊಂದು ದಡಕ್ಕೆ ಹೋಗಿ ಪರಾರಿಯಾಗಿದ್ದಾನೆ. ಮಧ್ಯಪ್ರದೇಶದ ಶಿಯೋಪುರ್ ಎಂಬಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಆರೋಪಿಯನ್ನು ಖಾನ್ ಎಂದು ಗುರುತಿಸಲಾಗಿದೆ. ಖಾನ್ ಹಲವಾರು ದಿನಗಳಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸರು ಆಗಮಿಸಿದ್ದರು. ಹೀಗಾಗಿ ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪಿ ಖಾನ್ ನದಿಗೆ ಹಾರಿ ಈಜಿಕೊಂಡು ಬೇರೊಂದು ದರ ಸೇರಿ ಪರಾರಿಯಾಗಿದ್ದಾನೆ.