ಕಾಲೇಜಿನೊಳಗೆ ಬಿಟ್ಟಿಲ್ಲ ಅಂತ ಸೆಕ್ಯೂರಿಟಿ ಗಾರ್ಡ್ ಕೊಲೆ ಮಾಡಿದ ವಿದ್ಯಾರ್ಥಿ
ಬೆಂಗಳೂರು; ಕಾಲೇಜಿನೊಳಗೆ ಬಿಟ್ಟಿಲ್ಲ ಅಂತ ವಿದ್ಯಾರ್ಥಿಯೋರ್ವ ಸೆಕ್ಯೂರಿಟಿ ಗಾರ್ಡ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.. ಬೆಂಗಳೂರಿನ ಅಮೃತಹಳ್ಳಿಯಲ್ಲಿರುವ ಸಿಂಧಿ ಕಾಲೇಜಿನಲ್ಲಿ ಈ ದುರ್ಘಟನೆ ನಡೆದಿದೆ.. ಭಾರ್ಗವ್ ಎಂಬ ವಿದ್ಯಾರ್ಥಿ ಕಾಲೇಜಿನ ಸೆಕ್ಯೂರಿಟಿ ಗಾರ್ಡ್ ಜೈ ಕಿಶೋರ್ ರಾಯ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ..
ಯಾವ ಕಾರಣಕ್ಕೋ ಏನೋ ಸೆಕ್ಯೂರಿಟಿ ಗಾರ್ಡ್ ವಿದ್ಯಾರ್ಥಿಯನ್ನು ಕಾಲೇಜಿನ ಒಳಗೆ ಬಿಟ್ಟಿಲ್ಲ.. ಇದರಿಂದ ಆಕ್ರೋಶಗೊಂಡ ಆತ ಚಾಕುವಿನಿಂದ ಇರಿದಿದ್ದಾನೆ.. ಗಂಭೀರವಾಗಿ ಗಾಯಗೊಂಡ ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.. ವಿದ್ಯಾರ್ಥಿ ಮದ್ಯಪಾನ ಮಾಡಿ ಕಾಲೇಜಿಗೆ ಬಂದಿದ್ದನೆಂಬ ಅನುಮಾನ ವ್ಯಕ್ತವಾಗಿದೆ..
ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ..