CinemaCrimeNational

ಸಿನಿಮಾದಲ್ಲಿ ಚಾನ್ಸ್‌ ಕೊಡಿಸುತ್ತೇನೆಂದು ಅತ್ಯಾಚಾರಕ್ಕೆ ಯತ್ನಿಸಿದ ಅಸಿಸ್ಟೆಂಟ್‌ ಡೈರೆಕ್ಟರ್‌!

ಹೈದರಾಬಾದ್‌; ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ನಿರ್ಭಯಾದಂತಹ ಕಠಿಣ ಕಾನೂನು ಜಾರಿಗೆ ತರಲಾಗಿದೆ.. ಅತ್ಯಾಚಾರ ಪ್ರಕರಣಗಳನ್ನು ಬೇಗ ವಿಚಾರಣೆ ನಡೆಸಿ ಶಿಕ್ಷೆ ಕೂಡಾ ವಿಧಿಸಲಾಗುತ್ತಿದೆ.. ಹೀಗಿದ್ದರೂ, ಅತ್ಯಾಚಾರಗಳು ನಡೆಯುತ್ತಲೇ ಇವೆ.. ಮೊನ್ನೆಯಷ್ಟೇ ಚಲಿಸುತ್ತಿದ್ದ ಬಸ್‌ನಲ್ಲೇ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು.. ಇಂತಹ ಪ್ರಕರಣಗಳು ಹೈದರಾಬಾದ್‌ನಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ.. ಇದೀಗ ಮತ್ತೊಂದು ದಾರುಣ ಘಟನೆ ನಡೆದಿದೆ.. ನೀನು ತುಂಬಾ ಸುಂದರವಾಗಿದ್ದೀಯ.. ಸಿನಿಮಾದಲ್ಲಿ ಚಾನ್ಸ್‌ ಕೊಡಿಸುತ್ತೇನೆ ಎಂದು ಹೇಳಿ ಸಾಫ್ಟ್‌ವೇರ್‌ ಎಂಜಿನಿಯರ್‌ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿರುವ ಆರೋಪ ಕೇಳಿಬಂದಿದೆ..

ಇದನ್ನೂ ಓದಿ; ನೀವು ಚಿಕನ್‌ ಲಿವರ್‌ ಪ್ರಿಯರಾ..?; ಹಾಗಾದ್ರೆ ಈ ವರದಿ ಓದಲೇಬೇಕು..

ಅಸಿಸ್ಟೆಂಟ್‌ ಡೈರೆಕ್ಟರ್‌ ಸಿದ್ಧಾರ್ಥ್‌ ವರ್ಮಾ ಎಂಬಾತನ ಮೇಲೆ ಈ ಆರೋಪ ಕೇಳಿಬಂದಿದೆ.. ವೈಜಾಗ್‌ ಮೂಲದ ಸಿದ್ಧಾರ್ಥ್‌ ವರ್ಮಾ ಹೈದರಾಬಾದ್‌ನ ಕೊಂಡಾಪುರ್‌ ಕಾಲನಿಯಲ್ಲಿ ವಾಸವಿದ್ದಾನೆ.. ಈತ ಸಿನಿಮಾಗಳಲ್ಲಿ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದು, ಈತ ಯುವತಿಯನ್ನು ಟ್ರ್ಯಾಪ್‌ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.. ಅನಂತಪುರ ಮೂಲದ ಮಹಿಳಾ ಎಂಜಿನಿಯರ್‌ ಐಟಿ ಕಾರಿಡಾರ್‌ನಲ್ಲಿ ಕೆಲಸ ಮಾಡುತ್ತಿದ್ದು, ಹೈದರಾಬಾದ್‌ನ ಪುಪ್ಪಲಗೂಡದಲ್ಲಿ ವಾಸವಿದ್ದಾಳೆ.. ಈಕೆಯ ಪರಿಚಯ ಮಾಡಿಕೊಂಡ ಸಿದ್ಧಾರ್ಥ್‌, ನೀನು ತುಂಬಾ ಸುಂದರವಾಗಿದ್ದೀಯ, ನಿನಗೆ ಸಿನಿಮಾದಲ್ಲಿ ಚಾನ್ಸ್‌ ಕೊಡಿಸುತ್ತೇನೆ ಎಂದು ಹೇಳಿದ್ದಾನೆ.. ಇದನ್ನು ಆಕೆ ಕೂಡಾ ನಂಬಿದ್ದಾಳೆ..

ಇದನ್ನೂ ಓದಿ; ಮೂತ್ರ ಕುಡಿಸಿ, ಭೀಕರವಾಗಿ ಥಳಿಸಿ ಪ್ರಿಯಕರನ ಕೊಲೆ ಮಾಡಿದ ಯುವತಿ!

ಆಕೆಯ ನಂಬರ್‌ ತೆಗೆದುಕೊಂಡು ಆಗಾಗ ಕಾಲ್‌ ಮಾಡುತ್ತಿದ್ದ ಎಂದು ತಿಳಿದುಬಂದಿದೆ.. ಒಂದು ದಿನ ಡಿನ್ನರ್‌ ಎಂದು ಹೇಳಿ ತಾನಿದ್ದ ಮನೆಗೆ ಕರೆದಿದ್ದಾನೆ.. ಈ ವೇಳೆ ಕೂಲ್‌ ಡ್ರಿಂಕ್‌ನಲ್ಲಿ ಮತ್ತು ಬರುವ ಪದಾರ್ಥ ಕಲಿಸಿ ಯುವತಿಗೆ ನೀಡಿದ್ದಾನೆ.. ಇದೇ ವೇಳೆ ಆತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪ ಮಾಡಲಾಗಿದೆ.. ಈತನ ಜೊತೆಗೆ ಮನೆಯಲ್ಲಿದ್ದ ಇನ್ನೂ ಹಲವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.. ಈ ಬಗ್ಗೆ ಯುವತಿ ಗಚ್ಚಿಬೌಲಿ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲು ಮಾಡಿದ್ದಾಳೆ.. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಸಿದ್ಧಾರ್ಥ್‌ ವರ್ಮಾನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ..

ಇದನ್ನೂ ಓದಿ; ಟೆಕ್ಕಿ ಯುವತಿ ಮೇಲೆ ದೇವಸ್ಥಾನವೊಂದರ ಪೂಜಾರಿಯಿಂದ ಅತ್ಯಾಚಾರ!

Share Post