ಹೊತ್ತಿದ ಉರಿಯುತ್ತಿರುವ ವಸ್ತ್ರ ವಿವಾದ- ಹಲವೆಡೆ ಲಾಠಿಚಾರ್ಜ್, ಕಾಲೇಜುಗಳಿಗೆ ರಜೆ
ಬೆಂಗಳೂರು:(Bengaluru) ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಾರಕಕ್ಕೇರಿದ ಈ ಪ್ರಕರಣ ನ್ಯಾಯಾಲಯದಲ್ಲಿದೆ.(court) ಕೋರ್ಟ್ ಆದೇಶಕ್ಕೆ ಸರ್ಕಾರ ಎದುದುನೋಡುತ್ತಿದೆ. ಈ ನಡುವೆ ರಾಜ್ಯದ ಕಾಲೇಜುಗಳಲ್ಲಿ ವಸ್ತ್ರ ವಿವಾದದ ಕಿಚ್ಚು ಹೊತ್ತಿ ಉರಿಯುತ್ತಿದೆ.
ಎಂಜಿಎಂ ಕಾಲೇಜಿಗೆ ರಜೆ ಘೋಷಣೆ
ವಿದ್ಯಾರ್ಥಿಗಳ ಧರಣಿಯನ್ನು ಹತ್ತಿಕ್ಕಲು ಉಡುಪಿಯ ಎಂಜಿಎಂ(MGM) ಕಾಲೇಜಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಕೇಸರಿ ಸಾಲು, ಹಿಜಾಬ್ ವಿವಾದ ತಾರಕಕ್ಕೇರುತತಿದ್ದಂತೆ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದ್ದಾರೆ. ಅನಿರ್ದಿಷ್ಠಾವಧಿವರೆಗೆ ರಜೆ ನೀಡಲಾಗಿದೆ. ಮುಂದಿನ ಆದೇಶದವರೆಗೂ ಕಾಲೇಜು ಬಂದ್ ಮಾಡಲಾಗಿದೆ ಎಂದು ಪ್ರಾಂಶುಪಾಳರು ತಿಳಿಸಿದ್ದಾರೆ.
ಶಾಲಾ ಆಡಳಿತತ ಮಂಡಳಿ ನಿರ್ಧಾರಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಜೆ ಘೋಷಣೆ ಮಾಡಿದ್ರೂ ಮನೆಗೆ ತೆರಳದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಜಾಬ್(Hijab) ತೆಗೆಸುವವರೆಗೂ ನಾವು ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಈ ನಡುವೆ ವಿವಾದಕ್ಕೆ ತೆರೆ ಎಳೆಯಲು ಬಾಗಲಕೋಟೆಯ ಸಂಗಮೇಶ್ವರ ಕಾಲೇಜಿಗೂ ರಜೆ ಘೋಷಣೆ ಮಾಡಲಾಗಿದೆ. ಗದಗ ಸರ್ಕಾರಿ ಕಾಲೇಜಿಗೂ ರಜೆ ಘೋಷಣೆ ಮಾಡಲಾಗಿದೆ.
ಇನ್ನೂ ಸಂಗಮೇಶ್ವರ ಕಾಲೇಜಿನಲ್ಲಿ(Sangameshwara) ವಿವಾದ ತಾರಕಕ್ಕೇರಿದೆ, ಕಿಡಿಗೇಡಿಗಳು ಅವಕಾಶವನ್ನು ಬಳಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಓರ್ವ ವಿದ್ಯಾರ್ಥಿಗೆ ಗಾಯವಾಗಿದೆ. ಬಾಗಲಕೋಟೆ(Bagalakote) ಬಳಿಕ ಶಿವಮೊಗ್ಗದಲ್ಲಿ ವಿವಾದ ಭುಗಿಲೆದ್ದಿದೆ. ಅಲ್ಲಿಯೂ ಕೂಡ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಲಾಠಿಚಾರ್ಜ್(Lati charge) ನಡೆಸಿದ್ದಾರೆ. ಸ್ಥಳದಲ್ಲಿಯೇ ಶಿವಮೊಗ್ಗ ಡಿಸಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ಮಾಡ್ತಿದಾರೆ.
ಇನ್ನೂ ಈ ಹಿಜಾಬ್ ವಿವಾದ ರಾಜ್ಯದ ಎಲ್ಲ ಕಾಲೇಜುಗಳಲ್ಲೂ ಕಿಚ್ಚು ಹೊತ್ತಿಸಿದೆ. ಹಿಜಾಬ್ ವಿರುದ್ಧವಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೀದಿ ಬೀದಿಯಲ್ಲಿ ನಿಂತು ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ.