CrimeNational

ಟ್ರಕ್‌-ಬೊಲೆರೋ ನಡುವೆ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ 9 ಮಂದಿ ದುರ್ಮರಣ!

ರಾಜಸ್ಥಾನ; ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.. ಟ್ರಕ್‌ ಹಾಗೂ ಬೊಲೆರೋ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು, ಒಟ್ಟು 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಇದರಲ್ಲಿ ಇಬ್ಬರು ಮಕ್ಕಳು ಹಾಗೂ ಮಹಿಳೆಯರು ಕೂಡಾ ಸೇರಿದ್ದಾರೆ..

ಬೊಲೆರೋ ವಾಹನದಲ್ಲಿದ್ದವರು ಎಲ್ಲೂ ಸಂಬಂಧಿಕರೇ ಆಗಿದ್ದರು..‌ ಕರೌಲಿ ಜಿಲ್ಲಿಯ ಕಿಯೋಲಾ ದೇವಿ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಕರೌಲಿ ಮತ್ತು ಮಂದರಯಾಲ್​​ ರಸ್ತೆಯ ದುಂಡಾಪುರ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ.. ಬೊಲೆರೋ ವಾಹನದಲ್ಲಿ 13 ಮಂದಿ ಇದ್ದರು, ಇದರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಉಳಿದ ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಬೊಲೆರೋ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.. ಮೃತರಲ್ಲಿ ಕೆಲವರು ಮಧ್ಯಪ್ರದೇಶದ ಶಿಯೋಪುರ್​ ಜಿಲ್ಲೆಯವರಾಗಿದ್ದು, ಉಳಿದವರು ರಾಜಸ್ಥಾನ್​​ ಕರೌಲಿಯ ಮುಂಡ್ರಾಯಲ್​​ ಖಿರ್ಕನ್​ ಗ್ರಾಮದವರು ಎಂದು ಗೊತ್ತಾಗಿದೆ..

 

Share Post