ಕೈದಿಯ ಜೊತೆ ಜೈಲಿನಲ್ಲೇ ಮಹಿಳಾ ಜೈಲಾಧಿಕಾರಿಯ ಸರಸ; ವಿಡಿಯೋ ವೈರಲ್!
ನವದೆಹಲಿ; ಶಿಕ್ಷೆ ಅನುಭವಿಸುತ್ತಿದ್ದ ಕೈದಿಯ ಜೊತೆ ಮಹಿಳಾ ಜೈಲಾಧಿಕಾರಿ ಲೈಂಗಿಕ ಚಟುವಟಿಕೆ ನಡೆಸಿ ಸಿಕ್ಕಿಬಿದ್ದಿದ್ದಾರೆ..ನೈಋತ್ಯ ಲಂಡನ್‌ನ ಹೆಚ್‌ಎಂಪಿ ವಾಂಡ್ಸ್‌ವರ್ತ್ ಜೈಲಿನಲ್ಲಿ ಈ ಘಟನೆ ನಡೆದಿದೆ.. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ವಿಡಿಯೋ ವೈರಲ್ ಆದ ಕಾರಣ ಮಹಿಳಾ ಜೈಲಾಧಿಕಾರಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ..
30 ವರ್ಷದ ಲಿಂಡಾ ಡಿ ಸೌಸಾ ಅಬ್ರೂ ಎಂಬಾಕೆಯೇ ಸಿಕ್ಕಿಬಿದ್ದಿರುವ ಮಹಿಳಾ ಜೈಲಾಧಿಕಾರಿಯಾಗಿದ್ದಾರೆ.. ಈ ಅಧಿಕಾರಿ ತನ್ನ ಕಚೇರಿಯ ಕೊಠಡಿಯಲ್ಲೇ ಅದೂ ಕೂಡಾ ಡ್ಯೂಟಿಯಲ್ಲಿರುವಾಗಲೇ ಕೈದಿಯೊಬ್ಬನನ್ನು ಕರೆಸಿಕೊಂಡು ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ.. ಈಕೆ ಲಂಡನ್‌ನ ಫುಲ್‌ಹಾಮ್‌ನಲ್ಲಿ ವಾಸಿಸುತ್ತಾಳೆ ಎಂದು ತಿಳಿದುಬಂದಿದೆ..
ಮಾಹಿತಿ ಪ್ರಕಾರ, ಆ ಮಹಿಳಾ ಜೈಲಧಿಕಾರಿ ಕೈದಿಯ ಜೊತೆ ಸರಸಕ್ಕೆ ಇಳಿಯುವಾಗ ಯೂನಿಫಾರಂ ಧರಿಸಿದ್ದರು. ಡ್ಯೂಟಿಯಲ್ಲಿರುವಾಗಲೇ ಕೈದಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದು ಈ ವಿಡಿಯೋ ಮೂಲಕ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.